• Home  
  • ಮಲ್ಪೆ: ಸಮುದ್ರಕ್ಕೆ ಈಜಲು ಇಳಿದಿದ್ದ ಮಂಡ್ಯ ಮೂಲದ ಪ್ರವಾಸಿಗ ಸಾವು (A Tourist from Mandya who went down to swim Malpe Beach Died)
- ಅಪರಾಧ

ಮಲ್ಪೆ: ಸಮುದ್ರಕ್ಕೆ ಈಜಲು ಇಳಿದಿದ್ದ ಮಂಡ್ಯ ಮೂಲದ ಪ್ರವಾಸಿಗ ಸಾವು (A Tourist from Mandya who went down to swim Malpe Beach Died)

Share: ಮಲ್ಪೆ: ಸಮುದ್ರಕ್ಕೆ ಈಜಲು ಇಳಿದಿದ್ದ ಮಂಡ್ಯ ಮೂಲದ ಪ್ರವಾಸಿಗ ಸಾವು (Malpe) ಮಲ್ಪೆ: ಪ್ರವಾಸಕ್ಕೆ ಬಂದಿದ್ದ ಯುವಕನೋರ್ವ ಮಲ್ಪೆಯ ಸಮುದ್ರಕ್ಕೆ ಇಳಿದಿದ್ದು, ಮುಳುಗಿ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ಘಟಿಸಿದೆ. ಮೃತ ಯುವಕನನ್ನು ಮಂಡ್ಯ ಮೂಲದ ನಾಗೇಂದ್ರ (21) ಎಂದು ಗುರುತಿಸಲಾಗಿದೆ. ಮಾಹಿತಿಗಳ ಪ್ರಕಾರ ನಾಗೇಂದ್ರ ಅವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಐದು ಮಂದಿಯೊಂದಿಗೆ ಮಲ್ಪೆ ಬೀಚ್ ಗೆ ಪ್ರವಾಸಕ್ಕೆಂದು ಬಂದಿದ್ದರು. ಭಾನುವಾರ ಮಧ್ಯಾಹ್ನ  ನೀರಿನಲ್ಲಿ ಆಡುತ್ತಿದ್ದ ವೇಳೆ ನಾಗೇಂದ್ರ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ […]

ಮಲ್ಪೆ: ಸಮುದ್ರಕ್ಕೆ ಈಜಲು ಇಳಿದಿದ್ದ ಮಂಡ್ಯ ಮೂಲದ ಪ್ರವಾಸಿಗ ಸಾವು

(Malpe) ಮಲ್ಪೆ: ಪ್ರವಾಸಕ್ಕೆ ಬಂದಿದ್ದ ಯುವಕನೋರ್ವ ಮಲ್ಪೆಯ ಸಮುದ್ರಕ್ಕೆ ಇಳಿದಿದ್ದು, ಮುಳುಗಿ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ಘಟಿಸಿದೆ.

ಮೃತ ಯುವಕನನ್ನು ಮಂಡ್ಯ ಮೂಲದ ನಾಗೇಂದ್ರ (21) ಎಂದು ಗುರುತಿಸಲಾಗಿದೆ.

ಮಾಹಿತಿಗಳ ಪ್ರಕಾರ ನಾಗೇಂದ್ರ ಅವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಐದು ಮಂದಿಯೊಂದಿಗೆ ಮಲ್ಪೆ ಬೀಚ್ ಗೆ ಪ್ರವಾಸಕ್ಕೆಂದು ಬಂದಿದ್ದರು. ಭಾನುವಾರ ಮಧ್ಯಾಹ್ನ  ನೀರಿನಲ್ಲಿ ಆಡುತ್ತಿದ್ದ ವೇಳೆ ನಾಗೇಂದ್ರ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋದರೆನ್ನಲಾಗಿದೆ.

ಕೂಡಲೇ ಮುಳುಗುತಜ್ಞ ಈಶ್ವರ ಮಲ್ಪೆ (ESHWAR MALPE)ತಂಡ ಕಾರ್ಯಾಚರಣೆ ನಡೆಸಿ ನಾಗೇಂದ್ರನನ್ನು ಮೇಲಕ್ಕೆ ಎತ್ತಿದರು. ಬಳಿಕ ತಮ್ಮ ಆಂಬುಲೆನ್ಸ್ ನಲ್ಲಿ ಮಣಿಪಾಲ ಆಸ್ಪತ್ರೆಗೆ ಸಾಗಿಸಿದ್ದು, ತೀವ್ರವಾಗಿ ಅಸ್ವಸ್ಥಗೊಂಡ ಅವರು ದಾರಿಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಲ್ಪೆ ಪೊಲೀಸ್ ಠಾಣೆಯಲ್ಲಿ(Malpe Police Station) ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.