ಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ ಪುತ್ರ ಆತ್ಮಹತ್ಯೆಗೆ ಶರಣು
ಉದ್ಯಮಿ ಸುದೀಪ್ ಭಂಡಾರಿ ಮೃತಪಟ್ಟವರು
(Brahmavara) ಬ್ರಹ್ಮಾವರ: ಕಾರ್ಕಳದಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ ಪುತ್ರ ಉದ್ಯಮಿ ಸುದೀಪ್ ಭಂಡಾರಿಯವರು ಸೋಮವಾರ ರಾತ್ರಿ ಬ್ರಹ್ಮಾವರ ಚಾಂತಾರು ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರ ಸಾಯಂಕಾಲ ಉದ್ಯಮಿ ಸುದೀಪ್ ಭಂಡಾರಿಯವರು ಹೆಬ್ರಿ ಪೇಟೆಯಲ್ಲಿ ಕಾರಿನಲ್ಲಿ ತಿರುಗಾಡುತ್ತಿದ್ದು, ಬಳಿಕ ಬ್ರಹ್ಮಾವರಕ್ಕೆ ಹೋಗಿದ್ದರು ಎನ್ನಲಾಗಿದೆ.
ಅವರು ಪತ್ನಿ, ಮಕ್ಕಳು, ತಾಯಿ, ಸಹೋದರ, ಸಹೋದರಿಯನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

