Tag: EX MINISTER ABHAYACHANDRA JAIN

ನಿಧನ

 ಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ ಪುತ್ರ ಆತ್ಮಹತ್ಯೆಗೆ ಶರಣು (The former MLA. Gopal Bhandari’s son commits suicide)

ಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ ಪುತ್ರ ಆತ್ಮಹತ್ಯೆಗೆ ಶರಣು ಉದ್ಯಮಿ ಸುದೀಪ್ ಭಂಡಾರಿ ಮೃತಪಟ್ಟವರು (Brahmavara) ಬ್ರಹ್ಮಾವರ: ಕಾರ್ಕಳದಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ ಪುತ್ರ ಉದ್ಯಮಿ ಸುದೀಪ್ ಭಂಡಾರಿಯವರು ಸೋಮವಾರ ರಾತ್ರಿ ಬ್ರಹ್ಮಾವರ  ಚಾಂತಾರು ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.     ಸೋಮವಾರ ಸಾಯಂಕಾಲ ಉದ್ಯಮಿ ಸುದೀಪ್ ಭಂಡಾರಿಯವರು ಹೆಬ್ರಿ ಪೇಟೆಯಲ್ಲಿ ಕಾರಿನಲ್ಲಿ  ತಿರುಗಾಡುತ್ತಿದ್ದು,  ಬಳಿಕ ಬ್ರಹ್ಮಾವರಕ್ಕೆ ಹೋಗಿದ್ದರು ಎನ್ನಲಾಗಿದೆ.      ಅವರು ಪತ್ನಿ, ಮಕ್ಕಳು, […]

ನಿಧನ

ವಿಜಯ್ ಕುಮಾರ್ ನಿಧನ (Senior lawyer and BJP leader MK Vijay Kumar passes away)

ಹಿರಿಯ ವಕೀಲ, ಬಿಜೆಪಿಯ ನೇತಾರ ಎಮ್ ಕೆ ವಿಜಯ್ ಕುಮಾರ್ ನಿಧನ ಶುಕ್ರವಾರ ರಾತ್ರಿ ಹೃದಯ ಅಪಘಾತದಿಂದ ನಿಧನ    (Karkala) ಕಾರ್ಕಳ : ಹಿರಿಯ ವಕೀಲ, ಬಿಜೆಪಿಯ ಹಿರಿಯ ನಾಯಕರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂಕೆ ವಿಜಯಕುಮಾರ್ (82) ಅವರು ಶುಕ್ರವಾರ ರಾತ್ರಿ ಹೃದಯ ಅಪಘಾತದಿಂದ ನಿಧನ ಹೊಂದಿದರು.     ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.     ಮನೆಯಲ್ಲಿ ಕುಸಿದು ಬಿದ್ದ ಅವರನ್ನು ತಕ್ಷಣ ಕಾರ್ಕಳದ ರೋಟರಿ ಆಸ್ಪತ್ರೆಗೆ ದಾಖಸಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. […]

ಧಾರ್ಮಿಕ ರಾಜಕೀಯ

ಕಾಪು : ಶ್ರೀ ಹೊಸ ಮಾರಿಗುಡಿಗೆ ಮುಜರಾಯಿ, ಸಾರಿಗೆ ಇಲಾಖೆಯ ಸಚಿವರಾದ ರಾಮಲಿಂಗ ರೆಡ್ಡಿ, ಪ್ರಾರ್ಥನೆ (Kaup: Muzrai, Minister of Transport minister Ramalinga Reddy vist kaup Sri Hosa Marigudi)

 ಕಾಪು : ಶ್ರೀ ಹೊಸ ಮಾರಿಗುಡಿಗೆ ಮುಜರಾಯಿ, ಸಾರಿಗೆ ಇಲಾಖೆಯ ಸಚಿವರಾದ ರಾಮಲಿಂಗ ರೆಡ್ಡಿ, ಪ್ರಾರ್ಥನೆ (Kaup) ಕಾಪು: ಕರ್ನಾಟಕ ಸರಕಾರದ ಮುಜರಾಯಿ ಮತ್ತು ಸಾರಿಗೆ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿಯವರು ಭಾನುವಾರ ಬೆಳಿಗ್ಗೆ ಕಾಪು ಶ್ರೀ ಹೊಸ ಮಾರಿಗುಡಿಗೆ ಆಗಮಿಸಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರುಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.   ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅವರು ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು.  ವ್ಯವಸ್ಥಾಪನಾ ಸಮಿತಿ ಮತ್ತು […]

ಧಾರ್ಮಿಕ ರಾಜಕೀಯ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಮುಜುರಾಯಿ,  ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭೇಟಿ, ಪ್ರಾರ್ಥನೆ (Mujurai, Transport Minister Ramalinga Reddy visit Uchila Sri Mahalakshmi Temple, pray)

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಮುಜುರಾಯಿ,  ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭೇಟಿ, ಪ್ರಾರ್ಥನೆ    (Uchila) ಉಚ್ಚಿಲ:  ಮಹಾಜನಸಂಘ ಉಚ್ಚಿಲ ಸಂಚಾಲಿತಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭಾನುವಾರ ಬೆಳಿಗ್ಗೆ ಮುಜುರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ ಸಚಿವ ರಾಮಲಿಂಗಾ ರೆಡ್ಡಿ, ಇಲ್ಲಿ ನಡೆಯುತ್ತಿರುವ ದಸರಾ ಉತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.  ಮುಂಬರುವ ದಸರಾ ಉತ್ಸವ ಸೇರಿದಂತೆ ಕ್ಷೇತ್ರದಲ್ಲಿ ನಡೆಯುತ್ತಿರುವ […]

ಧಾರ್ಮಿಕ

ಮುಲ್ಕಿ: ಶಿಮಂತೂರುಬಾವ ನಾಗ ಬ್ರಹ್ಮಲಿಂಗೇಶ್ವರ ನಾಗ ಬ್ರಹ್ಮಸ್ಥಾನದಲ್ಲಿ ಶ್ರೀ ನಾಗಬ್ರಹ್ಮಮಂಡಲೊತ್ಸವ ಸಂಪನ್ನ (Mulki: The Sri Naga Brahmamandalotsava festival is celebrated at Shimantur Bava Naga Brahmalingeshwara Naga Brahmasthan)

ಮುಲ್ಕಿ: ಶಿಮಂತೂರುಬಾವ ನಾಗ ಬ್ರಹ್ಮಲಿಂಗೇಶ್ವರ ನಾಗ ಬ್ರಹ್ಮಸ್ಥಾನದಲ್ಲಿ ಶ್ರೀ ನಾಗಬ್ರಹ್ಮಮಂಡಲೊತ್ಸವ ಸಂಪನ್ನ (Mooliki) ಮುಲ್ಕಿ: ಶಿಮಂತೂರುಬಾವ ನಾಗ ಬ್ರಹ್ಮಲಿಂಗೇಶ್ವರ ನಾಗ ಬ್ರಹ್ಮಸ್ಥಾನದಲ್ಲಿ ಶ್ರೀ ನಾಗಬ್ರಹ್ಮಮಂಡಲೊತ್ಸವ ಸಂಪನ್ನಗೊಂಡಿತು. ಸಗ್ರಿ ಗೋಪಾಲಕೃಷ್ಣ ಸಾಮಗ ಮತ್ತು ಕ್ಷೇತ್ರದ ಅರ್ಚಕ ವಿಷ್ಣುಮೂರ್ತಿ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ಸಂಪನ್ನ ಗೊಂಡಿತು.  ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಂಜೆ   ವಿಶೇಷ ಪ್ರಾರ್ಥನೆ, ಹಾಲಿಟ್ಟು ಸೇವೆ, ನಾಗ ಬ್ರಹ್ಮಮಂಡಲೊತ್ಸವ, ಪ್ರಸಾದ ವಿತರಣೆ, ಮಹಾ ಅನ್ನ ಸಂತ್ರಪಣೆ ನೆರವೇರಿತು.  ಈ ಸಂದರ್ಭ ಜ್ಯೋತಿಷಿ ವಿಶ್ವನಾಥ ಭಟ್, ರಾಜೇಶ್ […]

ಧಾರ್ಮಿಕ

ಮುಲ್ಕಿ: ಬಪ್ಪನಾಡು ದೇಗುಲದ ನೂತನ ರಥ ನಿರ್ಮಾಣಕ್ಕೆ ಇನ್ನೆರಡು ವರ್ಷದ ಅವಕಾಶ ಬೇಕಿದೆ (Mulki: Two more years are needed for the construction of the new chariot of the Bappanadu temple)

ಮುಲ್ಕಿ: ಬಪ್ಪನಾಡು ದೇಗುಲದ ನೂತನ ರಥ ನಿರ್ಮಾಣಕ್ಕೆ ಇನ್ನೆರಡು ವರ್ಷದ ಅವಕಾಶ ಬೇಕಿದೆ (Mulki) ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಏ.18ರಂದು ನಡೆದ ಜಾತ್ರಾ ಮಹೋತ್ಸವದ ರಾತ್ರಿ ಮಹಾರಥೋತ್ಸವ ಸಂದರ್ಭ ರಥದ ಮೇಲ್ಭಾಗ ಮುರಿದು ಬಿದ್ದಿದ್ದು, ನೂತನ ರಥ ನಿರ್ಮಾಣಕ್ಕೆ ಇನ್ನೆರಡು ವರ್ಷ ಬೇಕಾಗಬಹುದು. ಈ ಕಾರಣದಿಂದ ಹಳೇ ರಥ ರಿಪೇರಿ ಮಾಡಬೇಕೆ ? ಹೊಸ ರಥ ನಿರ್ಮಿಸಬೇಕೆ ಎಂಬ ಬಗ್ಗೆ ಶೀಘ್ರವೇ ಒಂಬತ್ತು ಮಾಗಣೆಯ ಸಭೆ ಕರೆದು ಮುಂದಿನ ತೀರ್ಮಾನ ತೆಗೆದುಕೊಳ್ಳಲು ಆಡಳಿತ ಮಂಡಳಿ […]

ರಾಜಕೀಯ ವಿಡಿಯೋ

ಕಾರ್ಕಳ: ಕಾರ್ಕಳ, ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌  ಆಶ್ರಯದಲ್ಲಿ ‘ಕಾಂಗ್ರೆಸ್‌ ಕುಟುಂಬೋತ್ಸವ’ (Karkala: Karkala, Hebri Block Congress hosts ‘Congress Kutumbotsava’)

ಕಾರ್ಕಳ: ಕಾರ್ಕಳ, ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌  ಆಶ್ರಯದಲ್ಲಿ ‘ಕಾಂಗ್ರೆಸ್‌ ಕುಟುಂಬೋತ್ಸವ’ (Karkala) ಕಾರ್ಕಳ ; ಉಡುಪಿ, ದ. ಕ. ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಭಾನ್ವಿತ ಯುವಜನರು ದೂರ ಬೆಂಗಳೂರು, ಮುಂಬಯಿ, ದುಬಾಯಿಗೆ ಉದ್ಯೋಗಕ್ಕೆ  ವಲಸೆ ಹೋಗುತ್ತಿದ್ದು, ಸ್ಥಳೀಯವಾಗಿ ಇವರಿಗೆ ಉದ್ಯೋಗಾವಕಾಶ ಕಲ್ಪಿಸುವ ಆಶಯ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪ್ರತ್ಯೇಕ ನೀತಿ ರಚನೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಘೋಷಿಸಿದರು.  ಕಾರ್ಕಳದಲ್ಲಿ ರವಿವಾರ ಕಾರ್ಕಳ, ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌  ಆಶ್ರಯದಲ್ಲಿ ಜರಗಿದ ‘ಕಾಂಗ್ರೆಸ್‌ ಕುಟುಂಬೋತ್ಸವ ’ […]

PROBLEMS

ಪಡುಪಣಂಬೂರು ನಂದಿನಿ ನದಿಯಿಂದ ಅಕ್ರಮ ಮರಳು ಸಾಗಾಟ; ಹದಗೆಟ್ಟ ರಸ್ತೆ, ಪ್ರತಿಭಟನೆಗೆ ಸಿದ್ಧತೆ (Illegal sand transportation from Nandini River in Padupanambur; Road in a state of disrepair, preparations for protest)

  ಪಡುಪಣಂಬೂರು ನಂದಿನಿ ನದಿಯಿಂದ ಅಕ್ರಮ ಮರಳು ಸಾಗಾಟ; ಹದಗೆಟ್ಟ ರಸ್ತೆ, ಪ್ರತಿಭಟನೆಗೆ ಸಿದ್ಧತೆ (Mulki) ಮುಲ್ಕಿ: ಪಡುಪಣಂಬೂರು- ಹೊಯ್ಗೆಗುಡ್ಡೆ- ಕದಿಕೆ ಸೇತುವೆ ಮೂಲಕ ಸಸಿಹಿತ್ಲು ಬೀಚ್ ಸಂಪರ್ಕ ರಸ್ತೆ ಅಕ್ರಮ ಮರಳುಗಾರಿಕೆಯಿಂದ ಸಂಪೂರ್ಣ ನಾಶವಾಗಿದ್ದು, ಸ್ಥಳೀಯರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಪಡುಪಣಂಬೂರು- ಹೊಯ್ಗೆಗುಡ್ಡೆ- ಕದಿಕೆ ಸೇತುವೆ ಮೂಲಕ ಸಸಿಹಿತ್ಲು ಬೀಚ್ ಸಂಪರ್ಕ ಮೀನುಗಾರಿಕಾ ರಸ್ತೆ ನಂದಿನಿ ನದಿಯ ತಟದಲ್ಲಿದೆ. ಮೂರು ಕಡೆ ಅಕ್ರಮ ಮರಳು ಗಾರಿಕೆಯ ದಕ್ಕೆಗಳನ್ನು ನಿರ್ಮಿಸಲಾಗಿದ್ದು,  ರಾತ್ರಿ ಹೊತ್ತು ಟಿಪ್ಪರ್ ಮೂಲಕ ಎಗ್ಗಿಲ್ಲದೆ ಮರಳು ಸಾಗಾಟ […]

ಧಾರ್ಮಿಕ

ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಚಪ್ಪರ ಮುಹೂರ್ತ (Chappara Muhurta on the occasion of Brahmakalashotsava at Sri Vishnumurthy Temple of Karnadu Sri Harihara Kshetra)

ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಚಪ್ಪರ ಮುಹೂರ್ತ (Karnadu)ಕಾರ್ನಾಡು: ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಫೆ. 12 ರಿಂದ 17ರ ವರೆಗೆ ನಡೆಯಲಿದ್ದು, ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಕಾರ್ಯಕ್ರಮ ದೇವಸ್ಥಾನದಲ್ಲಿ ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ ಹಾಗೂ ಅರ್ಚಕರಾದ ಹಯಗ್ರೀವ ಪಡ್ಡಿಲ್ಲಾಯ, ರಾಜಾರಾಮ್ ಭಟ್ ಪೌರೋಹಿತ್ಯದಲ್ಲಿ ನಡೆಯಿತು. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಕ್ಷೇತ್ರದ ಅರ್ಚಕ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್, ಮಾಜಿ […]

ನಿಧನ

ಮುಲ್ಕಿ: ಕೊಳಚಿ ಕಂಬಳ ನಿವಾಸಿ  ಹರೀಶ್ ಸುವರ್ಣ ನಿಧನ (Mulki: Harish Suvarna, a resident of Kolachi Kambala, passes away)

ಮುಲ್ಕಿ: ಕೊಳಚಿ ಕಂಬಳ ನಿವಾಸಿ  ಹರೀಶ್ ಸುವರ್ಣ ನಿಧನ (Mulki) ಮುಲ್ಕಿ: ಇಲ್ಲಿಗೆ ಸಮೀಪದ ಕೊಳಚಿ ಕಂಬಳ ನಿವಾಸಿ  ಹರೀಶ್ ಸುವರ್ಣ (55) ಹೃದಯಾಘಾತದಿಂದ ಬುಧವಾರ ನಿಧನರಾದರು ಅವರು ಪತ್ನಿ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮುಲ್ಕಿಯ ಪ್ರತಿಷ್ಠಿತ ಬಿಲ್ಲವ ಸಮಾಜ ಸೇವಾ ಸಂಘದ ಸದಸ್ಯರಾಗಿ, ಕೊಳಚಿ ಕಂಬಳ ಶ್ರೀ ಜಾರಂದಾಯ ದೈವಸ್ಥಾನದ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.  ಮುಲ್ಕಿ ಬ್ಲಾಕ್ ಕಾಂಗ್ರೆಸ್ ನ ಪದಾಧಿಕಾರಿಯಾಗಿ ನಿಷ್ಠಾವಂತ ಕಾಂಗ್ರೆಸ್ […]

eMedia Kannada  @2025. All Rights Reserved.