• Home  
  • ಉಡುಪಿ ಶಾಸಕರಿಂದ ಪವಿತ್ರ ಧಾರ್ಮಿಕ ಪರ್ಯಾಯ ಉತ್ಸವ ರಾಜಕೀಯಕ್ಕೆ ಬಳಕೆ : ಸುನಿಲ್ ಡಿ. ಬಂಗೇರ (Udupi MLAs using sacred religious alternative festival for politics: Sunil D. Bangera)
- ಧಾರ್ಮಿಕ - ರಾಜಕೀಯ

ಉಡುಪಿ ಶಾಸಕರಿಂದ ಪವಿತ್ರ ಧಾರ್ಮಿಕ ಪರ್ಯಾಯ ಉತ್ಸವ ರಾಜಕೀಯಕ್ಕೆ ಬಳಕೆ : ಸುನಿಲ್ ಡಿ. ಬಂಗೇರ (Udupi MLAs using sacred religious alternative festival for politics: Sunil D. Bangera)

Share: ಉಡುಪಿ ಶಾಸಕರಿಂದ ಪವಿತ್ರ ಧಾರ್ಮಿಕ ಪರ್ಯಾಯ ಉತ್ಸವ ರಾಜಕೀಯಕ್ಕೆ ಬಳಕೆ : ಸುನಿಲ್ ಡಿ. ಬಂಗೇರ ಉಡುಪಿ ಶಾಸಕ ಯಶ್ಪಾಲ್ ಸುವರ್ಣರವರಿಂದ  ಮುಸ್ಲಿಮರ ಹೊರೆ ಕಾಣಿಕೆ ಬಗ್ಗೆ ಅಪಸ್ವರ (Udupi) ಉಡುಪಿ: ಪರ್ಯಾಯ ಶ್ರೀ ಕೃಷ್ಣ ಮಠದಂತಹ ಪವಿತ್ರ ಧಾರ್ಮಿಕ ಉತ್ಸವವನ್ನು ರಾಜಕೀಯ ಲಾಭಕ್ಕಾಗಿ ವಿವಾದದ ಕೇಂದ್ರಬಿಂದುಗೊಳಿಸುವ ಪ್ರಯತ್ನ ಅತ್ಯಂತ ಅಪಾಯಕಾರಿ ಹಾಗೂ ಖಂಡನೀಯ ಎಂದು ಕಟಪಾಡಿ ಮಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಸುನಿಲ್ ಡಿ. ಬಂಗೇರ ಹೇಳಿದ್ದಾರೆ.    ಉಡುಪಿ ಶಾಸಕ ಯಶ್ಪಾಲ್ […]

(Udupi) ಉಡುಪಿ: ಪರ್ಯಾಯ ಶ್ರೀ ಕೃಷ್ಣ ಮಠದಂತಹ ಪವಿತ್ರ ಧಾರ್ಮಿಕ ಉತ್ಸವವನ್ನು ರಾಜಕೀಯ ಲಾಭಕ್ಕಾಗಿ ವಿವಾದದ ಕೇಂದ್ರಬಿಂದುಗೊಳಿಸುವ ಪ್ರಯತ್ನ ಅತ್ಯಂತ ಅಪಾಯಕಾರಿ ಹಾಗೂ ಖಂಡನೀಯ ಎಂದು ಕಟಪಾಡಿ ಮಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಸುನಿಲ್ ಡಿ. ಬಂಗೇರ ಹೇಳಿದ್ದಾರೆ.

   ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಉಡುಪಿ ಪ್ರರ್ಯಾಯಕ್ಕೆ ಮಸ್ಲಿಮರು ನೀಡುವ ಹೊರೆ ಕಾಣಿಕೆ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆ ಬಗ್ಗೆ ಸುನಿಲ್ ಡಿ. ಬಂಗೇರ ಪ್ರತಿಕ್ರಯಿಸಿ, ಶಾಸಕ ಸುವರ್ಣರವರ ಇತ್ತೀಚಿನ ಪತ್ರಿಕಾ ಪ್ರಕಟಣೆ, ಶಾಂತಿ ಕಾಪಾಡುವ ಜವಾಬ್ದಾರಿಯುತ ನಡೆಗಿಂತಲೂ, ಸಮಾಜದಲ್ಲಿ ಗೊಂದಲ ಮತ್ತು ಧ್ರುವೀಕರಣ ಉಂಟುಮಾಡುವ ರಾಜಕೀಯ ಉದ್ದೇಶವನ್ನೇ ಸ್ಪಷ್ಟಪಡಿಸುತ್ತದೆ.

   ಜನಪ್ರತಿನಿಧಿಯಾಗಿ ನಡೆದುಕೊಳ್ಳಬೇಕಾದ ವ್ಯಕ್ತಿಯೊಬ್ಬರು, ಧಾರ್ಮಿಕ ವಿಷಯಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ, ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಅಸಹಿಷ್ಣು ರಾಜಕೀಯ ಮನಸ್ಥಿತಿಯ ಪ್ರತಿಬಿಂಬ. ಇದು ಧರ್ಮ ರಕ್ಷಣೆ ಅಲ್ಲ. ಇದು ಧರ್ಮವನ್ನು ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸುವ ನಾಚಿಕೆಗೇಡಿತನ.

   ಯಶ್ ಪಾಲ್ ಸುವರ್ಣ ಅವರು ಪರ್ಯಾಯದಂತಹ ಸಂವೇದನಾಶೀಲ ಸಂದರ್ಭವನ್ನು ಆಯ್ಕೆ ಮಾಡಿಕೊಂಡು ಈ ರೀತಿಯ ಹೇಳಿಕೆ ನೀಡಿರುವುದು, ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಆತಂಕ ಮತ್ತು ಅನುಮಾನ ಬಿತ್ತುವ ತಂತ್ರದ ಭಾಗವೇ ಎಂಬ ಅನುಮಾನಕ್ಕೆ ಕಾರಣವಾಗುತ್ತದೆ. ಶಾಂತಿ ಮತ್ತು ಸೌಹಾರ್ದ ಕಾಪಾಡಬೇಕಾದ ಶಾಸಕರಿಂದ ಇಂತಹ ಪ್ರಚೋದನಾತ್ಮಕ ಭಾಷೆ ಹೊರಬರುವುದು ಅತೀವ ದುರದೃಷ್ಟಕರ.

    ಸಮಾಜದಲ್ಲಿ ಅಶಾಂತಿ ಉಂಟಾದಲ್ಲಿ ಅದರ ಸಂಪೂರ್ಣ ನೈತಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯಿಂದ ಯಶ್ ಪಾಲ್ ಸುವರ್ಣ ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಂತರದ ದಿನಗಳಲ್ಲಿ ನೀಡುವ ಸ್ಪಷ್ಟೀಕರಣಗಳು ಅಥವಾ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಹೇಳಿಕೆಗಳಿಗೆ ಶಾಂತಿಪ್ರಿಯ ಜನತೆ ಮರುಳಾಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು.

    ಧಾರ್ಮಿಕ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯುವ ಇಂತಹ ಪ್ರಯತ್ನಗಳು ಮುಂದುವರಿದಲ್ಲಿ, ಸಮಾಜದ ಸಹನೆ ಮಿತಿಯನ್ನು ಮೀರುವ ದಿನ ದೂರವಿಲ್ಲ. ಶಾಂತಿ, ಸಂಪ್ರದಾಯ ಮತ್ತು ಸಹಬಾಳ್ವೆಯನ್ನು ಗೌರವಿಸುವ ಜನರು ಮೌನವಾಗಿರುತ್ತಾರೆ ಎಂದು ಯಾರೂ ತಪ್ಪಾಗಿ ಅಂದಾಜು ಮಾಡಬಾರದು.

    ಪರ್ಯಾಯದಂತಹ ಪವಿತ್ರ ಉತ್ಸವಗಳನ್ನು ರಾಜಕೀಯ ಕಿತ್ತಾಟದ ಅಖಾಡವನ್ನಾಗಿ ಮಾಡುವ ಪ್ರಯತ್ನವನ್ನು ಯಶ್ ಪಾಲ್ ಸುವರ್ಣ ಅವರು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಸಮಾಜದಿಂದ ಬರುವ ಪ್ರತಿರೋಧಕ್ಕೆ ಅವರು ನೈತಿಕವಾಗಿ ಹಾಗೂ ರಾಜಕೀಯವಾಗಿ ಹೊಣೆ ಹೊರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

    ಇದು ಯಾವುದೇ ವೈಯಕ್ತಿಕ ದ್ವೇಷದ ಹೇಳಿಕೆ ಅಲ್ಲ. ಇದು ಸಮಾಜದ ಶಾಂತಿ ಮತ್ತು ಸೌಹಾರ್ದವನ್ನು ಕಾಪಾಡುವ ದೃಷ್ಟಿಯಿಂದ ನೀಡುವ ಕಠಿಣ ಮತ್ತು ಅಂತಿಮ ಎಚ್ಚರಿಕೆ ಎಂದೂ ಸುನಿಲ್ ಡಿ. ಬಂಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.