• Home  
  • ಮುಂಡ್ಕೂರು: ಕಾರು-ರಿಕ್ಷಾ ಢಿಕ್ಕಿ, ರಿಕ್ಷಾ ಪ್ರಯಾಣಿಕ ಸಾವು (Mundkur: Car-rickshaw collision, rickshaw passenger dies)
- ಅಪಘಾತ

ಮುಂಡ್ಕೂರು: ಕಾರು-ರಿಕ್ಷಾ ಢಿಕ್ಕಿ, ರಿಕ್ಷಾ ಪ್ರಯಾಣಿಕ ಸಾವು (Mundkur: Car-rickshaw collision, rickshaw passenger dies)

Share:  ಮುಂಡ್ಕೂರು: ಕಾರು-ರಿಕ್ಷಾ ಢಿಕ್ಕಿ, ರಿಕ್ಷಾ ಪ್ರಯಾಣಿಕ ಸಾವು ಮುಂಡ್ಕೂರು ಜಾರಿಗೆ ಕಟ್ಟೆಯಿಂದ ಸಚ್ಚೇರಿ ಪೇಟೆಗೆ ಹೋಗುವ ರಸ್ತೆಯಲ್ಲಿ ನಡೆದ ಘಟನೆ   (Karkala) ಕಾರ್ಕಳ: ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆಯಿಂದ ಸಚ್ಚೇರಿಪೇಟೆಗೆ ಹೋಗುವ ರಸ್ತೆಯಲ್ಲಿ ಶುಕ್ರವಾರ ಸಂಜೆ ಕಾರು ಮತ್ತು ಆಟೋರಿಕ್ಷಾದ ನಡುವೆ ನಡೆದ ಅಪಘಾತದಲ್ಲಿ ರಿಕ್ಷಾ ಪ್ರಯಾಣಿಕ ಶ್ರೀಕಾಂತ್ ಎಂಬವರು ಗಂಭೀರ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.    ರಿಕ್ಷಾ ಚಾಲಕ ಮಹಮ್ಮದ್ ಕೈಫ್‌ ಎಂಬವರಿಗೆ ಸಣ್ಣ ಪುಟ್ಟ […]

  (Karkala) ಕಾರ್ಕಳ: ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆಯಿಂದ ಸಚ್ಚೇರಿಪೇಟೆಗೆ ಹೋಗುವ ರಸ್ತೆಯಲ್ಲಿ ಶುಕ್ರವಾರ ಸಂಜೆ ಕಾರು ಮತ್ತು ಆಟೋರಿಕ್ಷಾದ ನಡುವೆ ನಡೆದ ಅಪಘಾತದಲ್ಲಿ ರಿಕ್ಷಾ ಪ್ರಯಾಣಿಕ ಶ್ರೀಕಾಂತ್ ಎಂಬವರು ಗಂಭೀರ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

   ರಿಕ್ಷಾ ಚಾಲಕ ಮಹಮ್ಮದ್ ಕೈಫ್‌ ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅಪಘಾತದಲ್ಲಿ ರಿಕ್ಷಾ ಸಂಪೂರ್ಣ ಜಖಂಗೊಂಡಿದ್ದರೆ, ಕಾರು ಭಾಗಶಃ ಹಾನಿಯಾಗಿದ್ದು, ಕಾರು ಚಾಲಕ ಸಚ್ಚೇರಿಪೇಟೆಯ ಅನಂತ್ ಭಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಕೂಡಲೇ ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಸಂಚಾರ ಸುಗಮಗೊಳಿಸಿದ್ದಾರೆ.

  ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪ್ರಯಾಣಿಕ ಮೃತ ಶ್ರೀಕಾಂತ್ ತನ್ನೊಟ್ಟಿಗೆ ನಾಯಿ ಮರಿಯೊಂದನ್ನು ಎಲ್ಲಿಗೋ ಕೊಂಡು ಹೋಗುತ್ತಿದ್ದು, ಸದ್ಯ ನಾಯಿ ಮರಿ ಅಪಘಾತದ ಸ್ಥಳದಲ್ಲಿ ಅನಾಥವಾಗಿದೆ ಎನ್ನಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.