ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾ ಸಭೆ
ಸದಸ್ಯರಿಗೆ 16% ಡಿವಿಡೆಂಟ್ ಘೋಷಣೆ.
(Mundkuru) ಮುಂಡ್ಕೂರು: ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ 2024- 25ರ ಸಾಲಿನ ವಾರ್ಷಿಕ ಮಹಾಸಭೆ ಸೊಸೈಟಿಯ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಮುಂಡ್ಕೂರು ಸಾಂತ್ರಾಲ ಗುತ್ತು ವಾದಿರಾಜ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಅವರು ಮಾತನಾಡಿ, ವ್ಯವಸಾಯ ಸೇವಾ ಸಹಕಾರಿ ಸಂಘ ಸಹಕಾರಿ ಬಂಧುಗಳು ಹಾಗೂ ಸದಸ್ಯರ ಸಹಕಾರ ದಿಂದ ವಾರ್ಷಿಕವಾಗಿ 24 ಲಕ್ಷದ 84 ಸಾವಿರದ 59 ರೂ. ನಿವ್ವಳ ವಾರ್ಷಿಕ ಲಾಭ ಹೊಂದಿದ್ದು, 93%ಸಾಲ ವಸೂಲಾತಿಯಾಗಿದೆ. ಸದಸ್ಯರಿಗೆ ಗರಿಷ್ಠ 16% ಡೆವಿಡೆಂಟ್ ವಿತರಿಸಲಾಗುವುದು.
ಸಂಘವು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಾಧನೆಗೈದ ಸಾಧಕರ ಜೊತೆ ಪ್ರಗತಿಪರ ಕೃಷಿಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ ನಿರಂತರವಾಗಿ ಗೌರವಿಸುತ್ತಿದೆ ಎಂದರು ಎಂದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಜಾಜ್೯ ನಜರತ್, ಪದವು, ನಿರಂಜನ್ ಪೂಜಾರಿ ಪೊಸ್ರಾಲ್ ರಂಜಿತಾ ಶೆಟ್ಟಿ ದೊಡ್ಡಮನೆ, ಡೆಂಜಲ್ ಪಿಂಟೋ ಮುಲ್ಲಡ್ಕ ಸತೀಶ್ ಶೆಟ್ಟಿ ಕಾಚೂರು, ಶೇಖರ್ ಪೂಜಾರಿ ಇನ್ನಾ, ವಿಠ್ಠಲ್ ಮೂಲ್ಯ ಇನ್ನಾ ಸನ್ಮಾನಿಸಲಾಯಿತು.
ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಂಗನವಾಡಿ ಕಾರ್ಯಕರ್ತೆಯರು, ರುದ್ರ ಭೂಮಿ ಕಾರ್ಯಕರ್ತರನ್ನು ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಪತ್ರಕರ್ತರಾದ ಉದಯ ಮುಂಡ್ಕೂರು, ಶರತ್ ಶೆಟ್ಟಿ ಸಂಕಲಕರಿಯ ಹರೀಶ್ ಸಚ್ಚೇರಿಪೇಟೆಯವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಸಿಲ್ವೆಸ್ಟರ್ ಡಿಮೆಲ್ಲೋ ನಿರ್ದೇಶಕರಾದ ಪ್ರವೀಣ್ ಶೆಟ್ಟಿ, ಅಮರನಾಥ ಶೆಟ್ಟಿ, ಅಶೋಕ್ ಶೆಟ್ಟಿ, ಪುರುಷೋತ್ತಮ ಪೂಜಾರಿ, ಅರ್ಜುನ್ ಶೆಟ್ಟಿ ಸಂಜೀವ ಫಿಲಿಮಂಡೆ, ಲತಾ ಭಟ್, ಪೆಲ್ಸಿ ಕಾರ್ಡೋಜಾ, ಪೂರ್ಣಿಮಾ ಶೆಟ್ಟಿ ಲೀಲಾ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಸಿಲ್ವೆಸ್ಟರ್ ಡಿಮೇಲ್ಲೋ ಸ್ವಾಗತಿಸಿದರು. ಕಾರ್ಯನಿರ್ವಹಣಾಧಿಕಾರಿ ಅರುಣ್ ರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

