ಮುಂಡ್ಕೂರು ಶ್ರೀ ದೇವಸ್ಥಾನದಲ್ಲಿ ಶಾರದಾದೇವಿಯ ವಿಸರ್ಜನಾ ಮೆರವಣಿಗೆ
ಮುಲ್ಲಡ್ಕ ಬ್ರಹ್ಮರ ಗುಂಡಿಯಲ್ಲಿ ಜಲಸ್ಥಂಭನಗೊಂಡಿತು
(Mundkuru) ಮುಂಡ್ಕೂರು : ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶಾರದಾ ದೇವಿಯ ಭವ್ಯ ವಿಸರ್ಜನಾ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ದೇವಸ್ಥಾನದ ವತಿಯಿಂದ ಚಂಡಿಕಾ ಯಾಗ, ಮಧ್ಯಾಹ್ನ ಮಹಾಪೂಜೆ, ಮಹಾ ಮಂಗಳಾರತಿ, ಅನ್ನ ಸಂತರ್ಪಣೆ ನೆರವೇರಿತು.
ಶಾರದಾ ದೇವಿಯ ದಿವ್ಯ ಮೆರವಣಿಗೆಯಲ್ಲಿ ಕುಣಿತ ಭಜನೆ, ಹುಲಿ ವೇಷ, ಚಂಡೆವಾದನ, ದೇವಿಯ ಸ್ತಬ್ದ ಚಿತ್ರ ಮೆರವಣಿಗೆಯಲ್ಲಿ ವಿಶೇಷವಾಗಿತ್ತು.
ಮುಂಡ್ಕೂರು ದೇವಸ್ಥಾನದಿಂದ ಹೊರಟ ಮೆರವಣಿಗೆ ಮುಲ್ಲಡ್ಕ ಬ್ರಹ್ಮರ ಗುಂಡಿಯಲ್ಲಿ ಜಲಸ್ಥಂಭನಗೊಂಡಿತು.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

