• Home  
  • ವಿಜಯ್ ಕುಮಾರ್ ನಿಧನ (Senior lawyer and BJP leader MK Vijay Kumar passes away)
- ನಿಧನ

ವಿಜಯ್ ಕುಮಾರ್ ನಿಧನ (Senior lawyer and BJP leader MK Vijay Kumar passes away)

Share: ಹಿರಿಯ ವಕೀಲ, ಬಿಜೆಪಿಯ ನೇತಾರ ಎಮ್ ಕೆ ವಿಜಯ್ ಕುಮಾರ್ ನಿಧನ ಶುಕ್ರವಾರ ರಾತ್ರಿ ಹೃದಯ ಅಪಘಾತದಿಂದ ನಿಧನ    (Karkala) ಕಾರ್ಕಳ : ಹಿರಿಯ ವಕೀಲ, ಬಿಜೆಪಿಯ ಹಿರಿಯ ನಾಯಕರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂಕೆ ವಿಜಯಕುಮಾರ್ (82) ಅವರು ಶುಕ್ರವಾರ ರಾತ್ರಿ ಹೃದಯ ಅಪಘಾತದಿಂದ ನಿಧನ ಹೊಂದಿದರು.     ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.     ಮನೆಯಲ್ಲಿ ಕುಸಿದು ಬಿದ್ದ ಅವರನ್ನು ತಕ್ಷಣ ಕಾರ್ಕಳದ ರೋಟರಿ ಆಸ್ಪತ್ರೆಗೆ ದಾಖಸಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೆ […]

   (Karkala) ಕಾರ್ಕಳ : ಹಿರಿಯ ವಕೀಲ, ಬಿಜೆಪಿಯ ಹಿರಿಯ ನಾಯಕರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂಕೆ ವಿಜಯಕುಮಾರ್ (82) ಅವರು ಶುಕ್ರವಾರ ರಾತ್ರಿ ಹೃದಯ ಅಪಘಾತದಿಂದ ನಿಧನ ಹೊಂದಿದರು.

    ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.

    ಮನೆಯಲ್ಲಿ ಕುಸಿದು ಬಿದ್ದ ಅವರನ್ನು ತಕ್ಷಣ ಕಾರ್ಕಳದ ರೋಟರಿ ಆಸ್ಪತ್ರೆಗೆ ದಾಖಸಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

   1968 ರಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದ ಎಂಕೆ ವಿಜಯಕುಮಾರ್, ಬಡವರು ಕೃಷಿ ಕಾರ್ಮಿಕರು ಮತ್ತು ಅಸಹಾಯಕ ಮಹಿಳೆಯರ ಪರ ಉಚಿತವಾಗಿ ವಾದ ಮಂಡಿಸುವ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದರು.

    ವಿಜ್ಞಾನ ಮತ್ತು ಕಾನೂನಿನಲ್ಲಿ ಪದವಿ ಪಡೆದ ಎಂಕೆ ವಿಜಯಕುಮಾರ್, ಕಾನೂನು ಕ್ಷೇತ್ರದೊಂದಿಗೆ ಸಮಾಜ ಸೇವೆ ಧಾರ್ಮಿಕ ಹಾಗೂ ಪರಿಸರಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು.

     ಸಮಾಜಮುಖಿ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ.

   ಕಾರ್ಕಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದು, ಕಾರ್ಕಳ ಬಿಜೆಪಿಯಲ್ಲಿ ಹಿರಿಯರಾಗಿ,  ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಮೃತರ ನಿಧನಕ್ಕೆ ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನೀಲ್‌ ಕುಮಾರ್‌, ಸುರೇಶ್‌ ಶೆಟ್ಟಿ ಗುರ್ಮೆ, ಯಶ್ಪಾಲ್‌ ಸುವರ್ಣ, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಸಹಕಾರಿ ಧುರೀಣ ಎಂಎನ್‌ ರಾಜೇಂದ್ರಕುಮಾರ್‌ ಸಹಿತ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.