• Home  
  • ಮುದರಂಗಡಿ: ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜಗೆ ಹುಟ್ಟೂರ ಸನ್ಮಾನ (Hometown honor for MLC Ivan D ́Souza)
- social service - ರಾಜಕೀಯ

ಮುದರಂಗಡಿ: ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜಗೆ ಹುಟ್ಟೂರ ಸನ್ಮಾನ (Hometown honor for MLC Ivan D ́Souza)

Share: ಮುದರಂಗಡಿ: ಐವನ್ ಡಿಸೋಜಗೆ ಹುಟ್ಟೂರ ಸನ್ಮಾನ  ಹುಟ್ಟೂರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಐವನ್ ಡಿಸೋಜಾ (Mudarangadi) ಮುದರಂಗಡಿ : ನನ್ನ ಹುಟ್ಟೂರಾದ ಮುದರಂಗಡಿಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ಕಳೆದ ಭಾರಿ ದೊರಕಿಸಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಎರಡನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಐವನ್ ಡಿಸೋಜ ಹೇಳಿದರು. ವಿಧಾನಪರಿಷತ್ ಸದಸ್ಯರಾಗಿ ಅಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಹುಟ್ಟೂರು ಮುದರಂಗಡಿಗೆ ಆಗಮಿಸಿದ ಸಂದರ್ಭದಲ್ಲಿ ಅವರ ಅಭಿಮಾನಿ ಬಳಗ ಚರ್ಚ್ […]

ಮುದರಂಗಡಿ: ಐವನ್ ಡಿಸೋಜಗೆ ಹುಟ್ಟೂರ ಸನ್ಮಾನ

 ಹುಟ್ಟೂರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಐವನ್ ಡಿಸೋಜಾ

(Mudarangadi) ಮುದರಂಗಡಿ : ನನ್ನ ಹುಟ್ಟೂರಾದ ಮುದರಂಗಡಿಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ಕಳೆದ ಭಾರಿ ದೊರಕಿಸಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಎರಡನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಐವನ್ ಡಿಸೋಜ ಹೇಳಿದರು.

ವಿಧಾನಪರಿಷತ್ ಸದಸ್ಯರಾಗಿ ಅಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಹುಟ್ಟೂರು ಮುದರಂಗಡಿಗೆ ಆಗಮಿಸಿದ ಸಂದರ್ಭದಲ್ಲಿ ಅವರ ಅಭಿಮಾನಿ ಬಳಗ ಚರ್ಚ್ ಸಭಾಂಗಣದಲ್ಲಿ ಆಯೋಜಿಸಿದ ಹುಟ್ಟೂರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಜನರು ಉನ್ನತ ವಿದ್ಯಾಭ್ಯಾಸಕ್ಕೆ ನಗರ ಪ್ರದೇಶವನ್ನು ಅವಲಂಬಿಸುತಿದ್ದಾರೆ. ಈ ನಿಟ್ಟಿನಲ್ಲಿ ಕಾಪು ತಾಲೂಕಿನಲ್ಲಿ ಸಾಕಷ್ಟು ಸರಕಾರಿ ಜಮೀನು ಇದೆ. ಈ ಭಾಗದಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ತಾಂತ್ರಿಕ ವಿದ್ಯಾಲಯ ಅಗತ್ಯತೆ ಇದೆ. ಉದ್ಯೋಗಕ್ಕೆ ಹೊರ ಜಿಲ್ಲೆ, ರಾಜ್ಯ, ವಿದೇಶಕ್ಕೆ ತೆರಳುವ ಬದಲು ಇಲ್ಲಿಯೇ ಐಟಿ, ಬಿಟಿ ಕಂಪೆನಿಗಳು, ಬೃಹತ್ ಕೈಗಾರಿಕೆಗಳ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಚಿಂತನೆ ಅಗತ್ಯ ಎಂದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಬಡವರ ಬಂಧು, ಜಾತಿ, ಮತ ಭೇದವಿಲ್ಲದೆ  ಸಮಾಜ ಸೇವೆಯ ಮೂಲಕ ಬೆಳೆದು ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವ ಗುಣವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಬೆಳೆದು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪಕ್ಷ ನಿಷ್ಟೆ, ಪ್ರಾಮಾಣಿಕ ಸೇವೆಯಿಂದ ಇಂತಹ ಹುದ್ದೆಗಳು ಅವರಿಗೆ ದೊರಕಿದೆ. ತನ್ನ ಹುಟ್ಟೂರು ಮುದರಂಗಡಿ ಪೇಟೆಯ ಸರ್ವಾಂಗೀಣ ಅಭಿವೃದ್ಧಿಯ ಮೂಲಕ ಗ್ರಾಮೀಣ ಪ್ರದೇಶವನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದರು.

ಮೆರವಣಿಗೆ, ಸನ್ಮಾನ:  ಮುದರಂಗಡಿ ಕೆಳ ಪೇಟೆಯಲ್ಲಿರುವ ಸರ್ಕಲ್ ಬಳಿ ಸಾರ್ವಜನಿಕವಾಗಿ ಸ್ವಾಗತಿಸಿ, ಭವ್ಯ ಮೆರವಣಿಯಲ್ಲಿ ಬರ ಮಾಡಿಕೊಂಡು, ಚರ್ಚ್‌ ಸಭಾಂಗಣಕ್ಕೆ ಕರೆತರಲಾಯಿತು. ಕಾರ್ಯಕ್ರಮದಲ್ಲಿ ಐವನ್ ಡಿಸೋಜ ಹಾಗೂ ಅವರ ಧರ್ಮಪತ್ನಿ ಡಾ. ಕವಿತಾ ಡಿಸೋಜ ಅವರನ್ನು ಅಭಿನಂದಿಸಲಾಯಿತು.

ಮುದರಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಮಿತಾ ಅಧ್ಯಕ್ಷತೆ ವಹಿಸಿದ್ದರು.

ಕಳತ್ತೂರು ಶ್ರೀ ಮಹಾಲಿಂಗಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೇಂಜ ಶ್ರೀಧರ ತಂತ್ರಿ, ಮುದರಂಗಡಿ ಚರ್ಚ್‌ನ ಧರ್ಮಗುರುಗಳಾದ ಫಾ. ಫೆಡ್ರಿಕ್ ಡಿಸೋಜ, ಸಂಪಿಗೆ ಚರ್ಚ್‌ನ ಧರ್ಮಗುರುಗಳಾದ ಫಾ. ವಿನ್ಸೆಂಟ್ ಡಿಸೋಜ, ಮುದರಂಗಡಿ ಜಾಮಿಯಾ ಮಸ್ಜಿದ್‌ನ ಮೌಲಾನಾ ಮುಹಮ್ಮದ್ ರಝ್ವಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ನವೀನ್ ಚಂದ್ರ ಜೆ. ಶೆಟ್ಟಿ, ಯು.ಸಿ. ಶೇಖಬ್ಬ, ಸಂಘಟಕ ಮೈಕಲ್ ಡಿಸೋಜ,  ಸಾಂತೂರು ಸಂತ ಲೋಕನ ದೇವ ಮಂದಿರದ ಫಾ. ಸುಧೀರ್ ಅಯ್ಯ, ಶಾಲಿನಿ ಸೋನ್ಸ್, ಅಬ್ರಹಾಂ ಡಿಸೋಜ, ಮುಲ್ಕಿ ಡಿವೈನ್ ಕೇಂದ್ರದ ಫಾ. ಅಬ್ರಹಾಂ ಡಿಸೋಜ, ಮುದರಂಗಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜ ಉಪಸ್ಥಿತರಿದ್ದರು.

ಗ್ಲಾಡಿಸ್ ಐಡಾ ಸ್ವಾಗತಿಸಿದರು. ಪಿಲಾರು ಸುಧಾಕರ ಶೆಣೈ ಕಾರ್ಯಕ್ರಮ ನಿರೂಪಿಸಿದರು.

ಮೈಕಲ್ ರಮೇಶ್ ಡಿಸೋಜ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.