• Home  
  • ಮುಲ್ಕಿ: ಬೈಕಿಗೆ ರೆಡಿಮಿಕ್ಸ್‌ ಕಾಂಕ್ರೀಟ್‌ ಟ್ರಕ್ಕು ಡಿಕ್ಕಿ, ಬೈಕ್‌ ಸವಾರ ಸ್ಥಳದಲ್ಲೇ ಧಾರುಣ ಸಾವು (Mulki: Bike collided with readymix concrete truck, biker dies on the spot)
- ಅಪಘಾತ

ಮುಲ್ಕಿ: ಬೈಕಿಗೆ ರೆಡಿಮಿಕ್ಸ್‌ ಕಾಂಕ್ರೀಟ್‌ ಟ್ರಕ್ಕು ಡಿಕ್ಕಿ, ಬೈಕ್‌ ಸವಾರ ಸ್ಥಳದಲ್ಲೇ ಧಾರುಣ ಸಾವು (Mulki: Bike collided with readymix concrete truck, biker dies on the spot)

Share: ಮುಲ್ಕಿ: ಬೈಕಿಗೆ ರೆಡಿಮಿಕ್ಸ್‌ ಕಾಂಕ್ರೀಟ್‌ ಟ್ರಕ್ಕು ಡಿಕ್ಕಿ, ಬೈಕ್‌ ಸವಾರ ಸ್ಥಳದಲ್ಲೇ ಧಾರುಣ ಸಾವು  ಬಪ್ಪನಾಡು ದೇಗುಲದ ಎದುರು ರಾಹೆ 66 ರಲ್ಲಿ ನಡೆದ ಘಟನೆ  (Mulki) ಮುಲ್ಕಿ: ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರೆಡಿಮಿಕ್ಸ್‌ ಕಾಂಕ್ರೀಟ್‌ ಟ್ರಕ್ಕೊಂದು ಬೈಕಿಗೆ ಗುದ್ದಿದ ಪರಿಣಾಮ ಬೈಕ್‌ ಸವಾರ ಟ್ಯಾಂಕರ್‌ ಚಕ್ರದಲ್ಲಿ ಸಿಲುಕಿ ಧಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.     ಮೃತ ಸವಾರನನ್ನು ದಾವಣಗೆರೆ ಅಸಗೋಡು ಬಳಿಯ […]

 (Mulki) ಮುಲ್ಕಿ: ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರೆಡಿಮಿಕ್ಸ್‌ ಕಾಂಕ್ರೀಟ್‌ ಟ್ರಕ್ಕೊಂದು ಬೈಕಿಗೆ ಗುದ್ದಿದ ಪರಿಣಾಮ ಬೈಕ್‌ ಸವಾರ ಟ್ಯಾಂಕರ್‌ ಚಕ್ರದಲ್ಲಿ ಸಿಲುಕಿ ಧಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.  

  ಮೃತ ಸವಾರನನ್ನು ದಾವಣಗೆರೆ ಅಸಗೋಡು ಬಳಿಯ ನಿವಾಸಿ ಪ್ರಭುಲಿಂಗ ಜಿ (32) ಎಂದು ಗುರುತಿಸಲಾಗಿದೆ

  ಮೃತ ಬೈಕ್ ಸವಾರ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದು ಮಂಗಳೂರಿನಿಂದ ಉಡುಪಿ ಕಡೆಗೆ ಕೆಲಸದ ನಿಮಿತ್ತ ಹೋಗುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ ಬಪ್ಪನಾಡು ಜಂಕ್ಷನ್ ಬಳಿ ಅಪಘಾತ ತಡೆಗೆ ಇರಿಸಿದ್ದ  ಬ್ಯಾರಿಕೇಡ್ ಒಳಭಾಗದಲ್ಲಿ ಬೈಕ್ ನುಗ್ಗಿಸಿದಾಗ ಸವಾರನ ನಿಯಂತ್ರಣ ತಪ್ಪಿ ಹೆದ್ದಾರಿ ದಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ಬೈಕಂಪಾಡಿಯಿಂದ ಪಡುಬಿದ್ರಿ ಕಡೆಗೆ ಹೋಗುತ್ತಿದ್ದ ರೆಡಿಮಿಕ್ಸ್‌ ಕಾಂಕ್ರೀಟ್‌ ಟ್ರಕ್ಕಿನ ಹಿಂದಿನ ಭಾಗದ ಚಕ್ರದ ಅಡಿಗೆ ಬಿದ್ದು ಸಾವನ್ನಪ್ಪಿದ್ದಾನೆ.

  ಅಪಘಾತದ ತೀವ್ರತೆಗೆ ಸವಾರನ ತಲೆ ಹೆಲ್ಮೆಟ್ ಸಮೇತ   ಹಿಂದುಗಡೆ ಟಯರ್ ನ ಅಡಿಗೆ ಬಿದ್ದು ಅಪ್ಪಚ್ಚಿಯಾಗಿದ್ದು, ಅಪಘಾತದ ಭೀಕರ ದೃಶ್ಯ ಕರುಳು ಹಿಂಡುವಂತಿತ್ತು.

   ಅಪಘಾತದಿಂದಾಗಿ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತ ಉಂಟಾಗಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

  ಅಪಘಾತಕ್ಕೀಡಾದ ಯುವಕನ ಮೃತದೇಹ ಹಾಗೂ ವಾಹನಗಳನ್ನು ತೆರವುಗೊಳಿಸಿದ್ದು ಲಾರಿ ಚಾಲಕ ಬಾದಾಮಿ ನಿವಾಸಿ ಭೀಮಣ್ಣ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.