ಮುಲ್ಕಿ: ಶಿಮಂತೂರುಬಾವ ನಾಗ ಬ್ರಹ್ಮಲಿಂಗೇಶ್ವರ ನಾಗ ಬ್ರಹ್ಮಸ್ಥಾನದಲ್ಲಿ ಶ್ರೀ ನಾಗಬ್ರಹ್ಮಮಂಡಲೊತ್ಸವ ಸಂಪನ್ನ
(Mooliki) ಮುಲ್ಕಿ: ಶಿಮಂತೂರುಬಾವ ನಾಗ ಬ್ರಹ್ಮಲಿಂಗೇಶ್ವರ ನಾಗ ಬ್ರಹ್ಮಸ್ಥಾನದಲ್ಲಿ ಶ್ರೀ ನಾಗಬ್ರಹ್ಮಮಂಡಲೊತ್ಸವ ಸಂಪನ್ನಗೊಂಡಿತು.
ಸಗ್ರಿ ಗೋಪಾಲಕೃಷ್ಣ ಸಾಮಗ ಮತ್ತು ಕ್ಷೇತ್ರದ ಅರ್ಚಕ ವಿಷ್ಣುಮೂರ್ತಿ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ಸಂಪನ್ನ ಗೊಂಡಿತು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ವಿಶೇಷ ಪ್ರಾರ್ಥನೆ, ಹಾಲಿಟ್ಟು ಸೇವೆ, ನಾಗ ಬ್ರಹ್ಮಮಂಡಲೊತ್ಸವ, ಪ್ರಸಾದ ವಿತರಣೆ, ಮಹಾ ಅನ್ನ ಸಂತ್ರಪಣೆ ನೆರವೇರಿತು.
ಈ ಸಂದರ್ಭ ಜ್ಯೋತಿಷಿ ವಿಶ್ವನಾಥ ಭಟ್, ರಾಜೇಶ್ ಭಟ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಜೀವನ್ ಶೆಟ್ಟಿ ಕಾರ್ನಾಡ್, ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಉದಯಕುಮಾರ್ ಶೆಟ್ಟಿ, ಅಧ್ಯಕ್ಷ ಜಯಕರ ಶೆಟ್ಟಿ ಶಿಮಂತೂರು ಬಾವ, ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ನಾಗರಾಜ ಶೆಟ್ಟಿ, ಕೋಶಾಧಿಕಾರಿ ಕಲ್ಪನಾ ಬಲಾಟ್ ರವಿ ಶೆಟ್ಟಿ, ಕರುಣಾಕರ ಶೆಟ್ಟಿ ಶಿಮಂತೂರು ಆಡಳಿತಾಧಿಕಾರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

