• Home  
  • ಮುಲ್ಕಿ: ಸ್ಕೂಟರ್ ಗೆ ಕಾರು ಡಿಕ್ಕಿ – ಸವಾರ  ಸಾವು (Mulki: Car hits scooter – rider dies)
- ಅಪಘಾತ

ಮುಲ್ಕಿ: ಸ್ಕೂಟರ್ ಗೆ ಕಾರು ಡಿಕ್ಕಿ – ಸವಾರ  ಸಾವು (Mulki: Car hits scooter – rider dies)

Share: ಮುಲ್ಕಿ: ಸ್ಕೂಟರ್ ಗೆ ಕಾರು ಡಿಕ್ಕಿ – ಸವಾರ  ಸಾವು ಕಕ್ವ ನಿವಾಸಿ ಶಶಿಕುಮಾರ್ (26) ಮೃತ ಯುವಕ (Mulki) ಮುಲ್ಕಿ: ಮುಲ್ಕಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ಕೂಟಿಗೆ ಕಾರೊಂದು  ಡಿಕ್ಕಿಯಾಗಿ ಸ್ಕೂಟರ್ ಸವಾರ ಧಾರಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.  ಮೃತ ಯುವಕನನ್ನು ಮುಲ್ಕಿ ಬಳಿ ಕಕ್ವ ನಿವಾಸಿ ಶಶಿಕುಮಾರ್ (26) ಎಂದು ಗುರುತಿಸಲಾಗಿದೆ   ಶಶಿಕುಮಾರ್ ತಮ್ಮ ಸ್ಕೂಟರ್ ರವರು ತಮ್ಮ ಸ್ಕೂಟರಿನಲ್ಲಿ ಮುಲ್ಕಿ ಮಾರ್ಕೆಟ್ ರಸ್ತೆಯಿಂದ ಹೆದ್ದಾರಿ ಕ್ರಾಸ್ ಮಾಡುತ್ತಿರುವಾಗ ಮಂಗಳೂರು ಕಡೆಯಿಂದ […]

(Mulki) ಮುಲ್ಕಿ: ಮುಲ್ಕಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ಕೂಟಿಗೆ ಕಾರೊಂದು  ಡಿಕ್ಕಿಯಾಗಿ ಸ್ಕೂಟರ್ ಸವಾರ ಧಾರಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.

 ಮೃತ ಯುವಕನನ್ನು ಮುಲ್ಕಿ ಬಳಿ ಕಕ್ವ ನಿವಾಸಿ ಶಶಿಕುಮಾರ್ (26) ಎಂದು ಗುರುತಿಸಲಾಗಿದೆ

  ಶಶಿಕುಮಾರ್ ತಮ್ಮ ಸ್ಕೂಟರ್ ರವರು ತಮ್ಮ ಸ್ಕೂಟರಿನಲ್ಲಿ ಮುಲ್ಕಿ ಮಾರ್ಕೆಟ್ ರಸ್ತೆಯಿಂದ ಹೆದ್ದಾರಿ ಕ್ರಾಸ್ ಮಾಡುತ್ತಿರುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.

 ಅಪಘಾತದ ರಭಸಕ್ಕೆ ಕಾರು ಸ್ಕೂಟರನ್ನು ಎಳೆದೊಯ್ದಿದ್ದು, ಸ್ಕೂಟರ್ ಸವಾರನ ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ.

ಘಟನಾ  ಸ್ಥಳದಲ್ಲಿದ್ದ ಸ್ಥಳೀಯರಾದ ಕಿಶೋರ್ ಶೆಟ್ಟಿ ದೆಪ್ಪುಣಿ ಗುತ್ತು, ಪ್ರಸಾದ್ ಪೂಜಾರಿ, ಗಣೇಶ್ ಮತ್ತಿತರರು   ಮಾನವೀಯತೆ ಮೆರೆದು ಗಾಯಾಳವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ

  ಮೃತ ಶಶಿಕುಮಾರ್ ರವರು ಪೈಂಟಿಂಗ್‌ ಮತ್ತು ಕೃಷಿ ವೃತ್ತಿ ನಡೆಸುತ್ತಿದ್ದ. ಈತ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ನ ಮಾಜಿ ಸದಸ್ಯೆ ಶಾರದಾರವರ ಪುತ್ರ.

  ಮೃತ ಶಶಿಕುಮಾರ್ ಮನೆಯಲ್ಲಿ ರೋದನ ಮುಗಿಲು ಮುಟ್ಟಿದ್ದು ಸೂತಕದ ಛಾಯೆ ಮೂಡಿದೆ.

  ಅಪಘಾತದ ಭೀಕರ ದೃಶ್ಯ ಹೆದ್ದಾರಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

 ಕಾರು ಚಾಲಕನ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.