• Home  
  • ಮೂಡಿಗೆರೆ; ಹೃದಯಾಘಾತದಿಂದ 7ನೇ ತರಗತಿ ವಿದ್ಯಾರ್ಥಿನಿ ಸಾವು (Moodigere; Class 7 student dies of heart attack)
- ಅಪರಾಧ

ಮೂಡಿಗೆರೆ; ಹೃದಯಾಘಾತದಿಂದ 7ನೇ ತರಗತಿ ವಿದ್ಯಾರ್ಥಿನಿ ಸಾವು (Moodigere; Class 7 student dies of heart attack)

Share: (Moodigere) ಮೂಡಿಗೆರೆ; ಹೃದಯಾಘಾತದಿಂದ 7ನೇ ತರಗತಿ ವಿದ್ಯಾರ್ಥಿನಿ ಸಾವು ಮೂಡಿಗೆರೆ:  ಶಾಲೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದ 7ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ  ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದಲ್ಲಿ ಘಟಿಸಿದೆ.  ಮೃತ ಶಾಲಾ ಬಾಲಕಿಯನ್ನು ಮೂಡಿಗೆರೆ ತಾಲೂಕಿನ ಜೋಗಣ್ಣಕೆರೆ ಗ್ರಾಮ ಸಮೀಪದ ಕೆಸವಳಲು ನಿವಾಸಿಗಳಾದ ಅರ್ಜುನ ಮತ್ತು ಸುಮಾ ಎಂಬವರ ಪುತ್ರಿ ಸೃಷ್ಟಿ(14) ಎಂದು ಗುರುತಿಸಲಾಗಿದೆ.  ಸೃಷ್ಠಿ ದಾರದಹಳ್ಳಿ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಳೆಂದು ತಿಳಿದು […]

(Moodigere) ಮೂಡಿಗೆರೆ; ಹೃದಯಾಘಾತದಿಂದ 7ನೇ ತರಗತಿ ವಿದ್ಯಾರ್ಥಿನಿ ಸಾವು

ಮೂಡಿಗೆರೆ:  ಶಾಲೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದ 7ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ  ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದಲ್ಲಿ ಘಟಿಸಿದೆ.

 ಮೃತ ಶಾಲಾ ಬಾಲಕಿಯನ್ನು ಮೂಡಿಗೆರೆ ತಾಲೂಕಿನ ಜೋಗಣ್ಣಕೆರೆ ಗ್ರಾಮ ಸಮೀಪದ ಕೆಸವಳಲು ನಿವಾಸಿಗಳಾದ ಅರ್ಜುನ ಮತ್ತು ಸುಮಾ ಎಂಬವರ ಪುತ್ರಿ ಸೃಷ್ಟಿ(14) ಎಂದು ಗುರುತಿಸಲಾಗಿದೆ.

 ಸೃಷ್ಠಿ ದಾರದಹಳ್ಳಿ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಳೆಂದು ತಿಳಿದು ಬಂದಿದೆ.

ಬೆಳಿಗ್ಗೆ ಎಂದಿನಂತೆ ಮನೆಯಿಂದ ಶಾಲೆಗೆಂದು ತೆರಳಿದ್ದ  ಸೃಷ್ಟಿ, ಕೆಸವಳಲು ಗ್ರಾಮದಿಂದ ದಾರದಹಳ್ಳಿ ಶಾಲೆಗೆ ಬರಲು ಗ್ರಾಮದಲ್ಲಿ ಬಸ್‌ಗಾಗಿ ಕಾಯುತ್ತಿದ್ದಳು. ಈ ವೇಳೆ ಬಾಲಕಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ.

ಸ್ಥಳೀಯರು ಕೂಡಲೇ ಬಾಲಕಿಯನ್ನು ಮೂಡಿಗೆರೆ ತಾಲೂಕು ಆಸ್ಪತ್ರೆಗೆ ಕರೆ ತಂದಿದ್ದು, ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

 ವಿದ್ಯಾರ್ಥಿನಿ ಸೃಷ್ಟಿ, ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಆಗಲಿದ್ದಾಳೆ.

 ಮೂಡಿಗೆರೆ ಆಸ್ಪತ್ರೆಯಲ್ಲಿ ಬಾಲಕಿ ಪೋಷಕರ ಮತ್ತು  ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.