• Home  
  • ಮೂಡುಗಿಳಿಯಾರು: ರೋಟರಿ ಕ್ಲಬ್ ಸಮುದಾಯ ದಳ ನೇತೃತ್ವದಲ್ಲಿ ರಕ್ತದಾನ ಶಿಬಿರ ಆಯೋಜನೆ (Moodu Giliyaru : Blood donation camp)
- social service

ಮೂಡುಗಿಳಿಯಾರು: ರೋಟರಿ ಕ್ಲಬ್ ಸಮುದಾಯ ದಳ ನೇತೃತ್ವದಲ್ಲಿ ರಕ್ತದಾನ ಶಿಬಿರ ಆಯೋಜನೆ (Moodu Giliyaru : Blood donation camp)

Share: ಮೂಡುಗಿಳಿಯಾರು: ರೋಟರಿ ಕ್ಲಬ್ ಸಮುದಾಯ ದಳ ನೇತೃತ್ವದಲ್ಲಿ ರಕ್ತದಾನ ಶಿಬಿರ ಆಯೋಜನೆ (Kota) ಕೋಟ, ಏ ೦7: ಪ್ರತಿಯೊಬ್ಬರು ತೆರೆದ ಮನಸ್ಸಿನಿಂದ ಸೇವಾಕಾರ್ಯಗಳನ್ನು ಮಾಡಬೇಕು, ಆಗ ಮಾತ್ರ ಸಾರ್ಥಕ್ಯ ಕಾಣಲು ಸಾಧ್ಯ ಎಂದು ಪ್ರಸಿದ್ಧ ನ್ಯಾಯವಾದಿ ಟಿ. ಮಂಜುನಾಥ ಗಿಳಿಯಾರು ಹೇಳಿದರು. ಭಾನುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಕೋಟ, ರೋಟರಿ ಸಮುದಾಯ ದಳ ಮೂಡುಗಿಳಿಯಾರು, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಕೋಟ ಪಂಚವರ್ಣ ಯುವಕ ಮಂಡಲ ಮತ್ತು […]

ಮೂಡುಗಿಳಿಯಾರು: ರೋಟರಿ ಕ್ಲಬ್ ಸಮುದಾಯ ದಳ ನೇತೃತ್ವದಲ್ಲಿ ರಕ್ತದಾನ ಶಿಬಿರ ಆಯೋಜನೆ

(Kota) ಕೋಟ, ಏ ೦7: ಪ್ರತಿಯೊಬ್ಬರು ತೆರೆದ ಮನಸ್ಸಿನಿಂದ ಸೇವಾಕಾರ್ಯಗಳನ್ನು ಮಾಡಬೇಕು, ಆಗ ಮಾತ್ರ ಸಾರ್ಥಕ್ಯ ಕಾಣಲು ಸಾಧ್ಯ ಎಂದು ಪ್ರಸಿದ್ಧ ನ್ಯಾಯವಾದಿ ಟಿ. ಮಂಜುನಾಥ ಗಿಳಿಯಾರು ಹೇಳಿದರು.

ಭಾನುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಕೋಟ, ರೋಟರಿ ಸಮುದಾಯ ದಳ ಮೂಡುಗಿಳಿಯಾರು, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಕೋಟ ಪಂಚವರ್ಣ ಯುವಕ ಮಂಡಲ ಮತ್ತು ಮಹಿಳಾ ಮಂಡಲ ಜಂಟಿ ಆಶ್ರಯದಲ್ಲಿ ಮೂಡುಗಿಳಿಯಾರು ಶಾಲೆಯಲ್ಲಿ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಯುವ ಆಸಕ್ತರಲ್ಲಿ ಕ್ರೀಯಾಶೀಲತೆ ಬೆಳಸಿಕೊಂಡಾಗ ವಿವಿಧ ರೀತಿಯ ಸೇವಾಕಾರ್ಯ ನಡೆಸಲು ಸಾಧ್ಯವಾಗುತ್ತದೆ. ಇದಕ್ಕೆ ರೋಟರಿಯಂತಹಾ ಸಂಸ್ಥೆಗಳು ಸಾಕ್ಷಿ ಎಂದರಲ್ಲದೆ, ರಕ್ತದಾನದ ಬಗ್ಗೆ ಭಯ ಹೋಗಲಾಡಿಸಬೇಕು. ಪ್ರತಿಯೊರ್ವ ರಕ್ತದಾನ ಮಾಡುವ ಮನಸ್ಥಿತಿ ಸೃಷ್ಠಿಸಿಕೊಳ್ಳಬೇಕು. ಈ ಮೂಲಕ ದೈಹಿಕ ಕ್ಷಮತೆ ಜತೆಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ರಕ್ತದಾನಕ್ಕೆ ಯಾವುದೇ ಜಾತಿ, ಮತ ಪಂಥಗಳ ಭೇದಗಳಿಲ್ಲ. ಬದಲಾಗಿ ಮಾನವೀಯ ಮೌಲ್ಯಗಳು ವೃದ್ಧಿಸುತ್ತದೆ. ಸಂಘ ಸಂಸ್ಥೆಗಳ ಈ ಎಲ್ಲಾ ಪರಿಭಾಷೆಗಳಿಂದ ಹೊರಬಂದು ಮೌಲ್ಯಯುತ ಸಮಾಜ ಕಟ್ಟುವ ಕಾರ್ಯದಲ್ಲಿ ನಿರತರಾಗಿ ಎಂದು ಕರೆ ಇತ್ತರು.

 ರೋಟರಿ ಸಮುದಾಯ ದಳದ ಅಧ್ಯಕ್ಷ ಶರಣಯ್ಯ ಹಿರೇಮಠರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೋಟ ಸಮುದಾಯ ಆರೋಗ್ಯ ಕೇಂದ್ರ ಮುಖ್ಯ ವೈದ್ಯಾಧಿಕಾರಿ ಡಾ. ಮಾಧವ್ ಪೈ ರಕ್ತದಾನ ಮಾಡುವುದರಿಂದ ಮನುಕುಲದ ಒಳಿತಿನ ಬಗ್ಗೆ ತಿಳಿ ಹೇಳಿದರು.

ಮುಖ್ಯ ಅಭ್ಯಾಗತರಾಗಿ  ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್, ರೋಟರಿ ಕ್ಲಬ್ ಸಹಾಯಕ ಗವರ್ನರ್ ಕೆ. ನರಸಿಂಹ ಪ್ರಭು, ಮಾಜಿ ಸಹಾಯಕ ಗವರ್ನರ್ ರಾಜೇಂದ್ರ ಸುವರ್ಣ, ಉದ್ಯಮಿ ಮಹೇಶ್ ಶೆಟ್ಟಿ, ರೋಟರಿ ಸಮುದಾಯ ದಳದ ಸಭಾಪತಿ ಕೆ. ಶ್ರೀಕಾಂತ ಶೆಣೈ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಗುತ್ತಿಗೆದಾರ ಅಶೋಕ್ ಶೆಟ್ಟಿ ಬನ್ನಾಡಿ, ಜಿಲ್ಲಾ ರಕ್ತನಿಧಿ ಜಿಲ್ಲಾಸ್ಪತ್ರೆ ಇದರ ಮುಂಜುಳಾ ಮತ್ತಿತರರು ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ದೇವಪ್ಪ ಪಟಗಾರ್ ಸ್ವಾಗತಿಸಿದರು.

ಕಾರ್ಯಕ್ರಮವನ್ನು ಶಿಕ್ಷಕಿ ನಾಗರತ್ನ ಹೇರ್ಳೇ  ನಿರೂಪಿಸಿದರು. ರೋಟರಿ ಸಮುದಾಯ ದಳದ ಕಾರ್ಯದರ್ಶಿ ಜಿ. ಗೋಪಾಲ್ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.