• Home  
  • ರಾಮಮಂದಿರ ವಿರೋಧಿಗಳೀಗ ರಾಮಭಕ್ತರಾಗಲು ಹೊರಟಿದ್ದಾರೆಯೇ? : ಶರಣ್ ಕುಮಾರ್ ಮಟ್ಟು (Are the opponents of Ram temple now going to become Ram devotees?: Sharan Kumar Mattu)
- ರಾಜಕೀಯ

ರಾಮಮಂದಿರ ವಿರೋಧಿಗಳೀಗ ರಾಮಭಕ್ತರಾಗಲು ಹೊರಟಿದ್ದಾರೆಯೇ? : ಶರಣ್ ಕುಮಾರ್ ಮಟ್ಟು (Are the opponents of Ram temple now going to become Ram devotees?: Sharan Kumar Mattu)

Share: ರಾಮಮಂದಿರ ವಿರೋಧಿಗಳೀಗ ರಾಮಭಕ್ತರಾಗಲು ಹೊರಟಿದ್ದಾರೆಯೇ? : ಶರಣ್ ಕುಮಾರ್ ಮಟ್ಟು   ಕಾಪು ಕಾಂಗ್ರೆಸ್‌ ಪ್ರತಿಭಟನೆಗೆ ಬಿಜೆಪಿ ಕೌಂಟರ್ (Kaup) ಕಾಪು: ಅಯೋಧ್ಯೆಯ ರಾಮ ಮಂದಿರ ಕಾಣಿಕೆ ಕಳವು ಪ್ರಕರಣವು ರಾಮಮಂದಿರ ವಿರೋಧಿಗಳನ್ನು ಶ್ರೀರಾಮಭಕ್ತರನ್ನಾಗಿಸಿದೆ ಎಂದು ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ರವರು ಕಾಂಗ್ರೆಸ್‌ ಪ್ರತಿಭಟನೆ ಬಗ್ಗೆ ಲೇವಡಿಯಾಡಿದ್ದಾರೆ.   ಅಯೋಧ್ಯೆಯ ರಾಮಮಂದಿರದಲ್ಲಿ ಕಳವು ಪ್ರಕರಣ ಬೆಳಕಿಗೆ ಬಂದ ಕೆಲವೇ ದಿನಗಳಲ್ಲಿ ಉತ್ತರಪ್ರದೇಶದ ಸರಕಾರವು ರಾಮ ಮಂದಿರದ ಟ್ರಸ್ಟ್ ನ ಕೋರಿಕೆಯಂತೆ […]

(Kaup) ಕಾಪು: ಅಯೋಧ್ಯೆಯ ರಾಮ ಮಂದಿರ ಕಾಣಿಕೆ ಕಳವು ಪ್ರಕರಣವು ರಾಮಮಂದಿರ ವಿರೋಧಿಗಳನ್ನು ಶ್ರೀರಾಮಭಕ್ತರನ್ನಾಗಿಸಿದೆ ಎಂದು ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ರವರು ಕಾಂಗ್ರೆಸ್‌ ಪ್ರತಿಭಟನೆ ಬಗ್ಗೆ ಲೇವಡಿಯಾಡಿದ್ದಾರೆ.

  ಅಯೋಧ್ಯೆಯ ರಾಮಮಂದಿರದಲ್ಲಿ ಕಳವು ಪ್ರಕರಣ ಬೆಳಕಿಗೆ ಬಂದ ಕೆಲವೇ ದಿನಗಳಲ್ಲಿ ಉತ್ತರಪ್ರದೇಶದ ಸರಕಾರವು ರಾಮ ಮಂದಿರದ ಟ್ರಸ್ಟ್ ನ ಕೋರಿಕೆಯಂತೆ “ವಿಶೇಷ  ತನಿಖಾ ತಂಡದ” (ಎಸ್.ಐ.ಟಿ) ಮೂಲಕ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಂಡರೇ ಹೊರತು ಸಾಂಸ್ಥಿಕವಾಗಿ ಅದನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಲಿಲ್ಲ.

   ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ಹೋರಾಟಕ್ಕೆ ಅಡ್ಡಿಯಾಗಲು ನಡೆದ ಪ್ರಯತ್ನಗಳು, ಕರಸೇವಕರ ವಿರುದ್ಧ ಕೈಗೊಂಡ ಕ್ರಮಗಳು ಹಾಗೂ ರಾಮಮಂದಿರ ಚಳವಳಿಯನ್ನು ಹತ್ತಿಕ್ಕಲು ನಡೆದ ಘಟನೆಗಳು ನಡೆದಾಗ ಕಾಂಗ್ರೆಸ್ ಪಕ್ಷದ ನಿಲುವು ಏನಾಗಿತ್ತು ಎಂಬುದು ಕಾಪುವಿನ ಕಾಂಗ್ರೆಸ್ಸಿಗರಿಗೆ ಮರೆತುಹೋಗಿದೆಯೇ?

  ಶ್ರೀರಾಮ ಮಂದಿರವು ಕೋಟ್ಯಾಂತರ ಹಿಂದೂಗಳ ಭಕ್ತಿ, ನಂಬಿಕೆ ಮತ್ತು ಅಸ್ಮಿತೆಯ ಪ್ರತೀಕವಾಗಿದೆ. ಇಂತಹ ಭಾವನಾತ್ಮಕ ವಿಷಯಗಳನ್ನು ನಿಮ್ಮ ಪ್ರತಿಭಟನೆಗಾಗಿ ಬಳಸುವುದಕ್ಕಿಂತ, ನಿಮ್ಮ ಕಾಂಗ್ರೆಸ್ ಪಕ್ಷದ ಹಿಂದಿನ ನಿಲುವು ಮತ್ತು ನಡೆ-ನುಡಿಗಳ ಬಗ್ಗೆ ಮೊದಲು ಆತ್ಮಾವಲೋಕನ ಮಾಡಿಕೊಳ್ಳುವುದು ಸೂಕ್ತ. ಜನರು ಮಾತುಗಳನ್ನು ಮಾತ್ರವಲ್ಲ, ಇತಿಹಾಸವನ್ನೂ ನೆನಪಿಟ್ಟುಕೊಂಡಿದ್ದಾರೆ ಎಂದೂ ಶರಣ್‌ ಹೇಳಿದ್ದಾರೆ.

.

Leave a comment

Your email address will not be published. Required fields are marked *

eMedia Kannada  @2025. All Rights Reserved.