• Home  
  • ಹೆಜಮಾಡಿ ಟೋಲ್ ನಲ್ಲಿ ಸ್ಥಳೀಯರಿಗೆ ಆಧಾರ್   ಆಧಾರಿತ ವಿನಾಯತಿ ನೀಡಲು ಆಗ್ರಹ (Demand to provide Aadhaar-based exemption to locals at Hejamadi toll)
- PROBLEMS

ಹೆಜಮಾಡಿ ಟೋಲ್ ನಲ್ಲಿ ಸ್ಥಳೀಯರಿಗೆ ಆಧಾರ್   ಆಧಾರಿತ ವಿನಾಯತಿ ನೀಡಲು ಆಗ್ರಹ (Demand to provide Aadhaar-based exemption to locals at Hejamadi toll)

Share: ಹೆಜಮಾಡಿ ಟೋಲ್ ನಲ್ಲಿ ಸ್ಥಳೀಯರಿಗೆ ಆಧಾರ್  ಆಧಾರಿತ ವಿನಾಯತಿ ನೀಡಲು ಆಗ್ರಹ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್ ಒತ್ತಾಯ (Padubidri) ಪಡುಬಿದ್ರಿ : ಕಳೆದ ಕೆಲವು ದಿನಗಳಿಂದ ಹೆಜಮಾಡಿ ಟೋಲ್ ಸಿಬ್ಬಂದಿಗಳು  ಸ್ಥಳೀಯರಿಗೆ ಅನಗತ್ಯ ತೊಂದರೆ ನೀಡುತ್ತಿದ್ದು, ವಿನಾಯಿತಿ ಪಡೆಯಲು ವಿವಿಧ ದಾಖಲೆಗಳನ್ನು ಕೇಳುವ ಮೂಲಕ ವಿಳಂಬ ಉಂಟು ಮಾಡುತ್ತಿದ್ದಾರೆ ಎಂದು ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್ ಆರೋಪಿಸಿದ್ದಾರೆ.   ಹೆಜಮಾಡಿ ಹಾಗೂ ನಡ್ಸಾಲು ಪ್ರದೇಶದ ನಿವಾಸಿಗಳಿಗೆ ಈಗಾಗಲೇ ಹೆಜಮಾಡಿ […]

(Padubidri) ಪಡುಬಿದ್ರಿ : ಕಳೆದ ಕೆಲವು ದಿನಗಳಿಂದ ಹೆಜಮಾಡಿ ಟೋಲ್ ಸಿಬ್ಬಂದಿಗಳು  ಸ್ಥಳೀಯರಿಗೆ ಅನಗತ್ಯ ತೊಂದರೆ ನೀಡುತ್ತಿದ್ದು, ವಿನಾಯಿತಿ ಪಡೆಯಲು ವಿವಿಧ ದಾಖಲೆಗಳನ್ನು ಕೇಳುವ ಮೂಲಕ ವಿಳಂಬ ಉಂಟು ಮಾಡುತ್ತಿದ್ದಾರೆ ಎಂದು ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೈನ್ ಆರೋಪಿಸಿದ್ದಾರೆ.

  ಹೆಜಮಾಡಿ ಹಾಗೂ ನಡ್ಸಾಲು ಪ್ರದೇಶದ ನಿವಾಸಿಗಳಿಗೆ ಈಗಾಗಲೇ ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕ ವಿನಾಯಿತಿ ಸೌಲಭ್ಯ ಕಲ್ಪಿಸಲಾಗಿದೆ. ಈ ಹಿಂದೆ ಸ್ಥಳೀಯರು  ಆಧಾರ್ ಕಾರ್ಡ್ ತೋರಿಸಿದರೆ ಯಾವುದೇ ಟೋಲ್ ಶುಲ್ಕವಿಲ್ಲದೆ  ವಾಹನಗಳಿಗೆ  ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿತ್ತು.

   ಈ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಿ, ಹಿಂದಿನಂತೆ ಸ್ಥಳೀಯರಿಗೆ ಯಾವುದೇ ತೊಂದರೆಯಿಲ್ಲದೆ ಟೋಲ್ ವಿನಾಯಿತಿ ಸೌಲಭ್ಯವನ್ನು ಮುಂದುವರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅವರು ಒತ್ತಾಯಿಸಿದ್ದಾರೆ.

ತಪ್ಪಿದಲ್ಲಿ ಸಾರ್ವಜನಿಕರೊಂದಿಗೆ ಸೇರಿ ಟೋಲ್ ಗೇಟ್ ಕಂಪನಿ ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಮೀಝ್ ಹುಸೈನ್ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.