• Home  
  •  ರಾಷ್ಟೀಯ ಹೆದ್ದಾರಿ ಸಂತೆಕಟ್ಟೆ ಉಡುಪಿ  ಅಂಡರ್ ಪಾಸ್ ಕಾಮಗಾರಿ ಶಾಸಕ ಯಶ್ ಪಾಲ್ ಸುವರ್ಣ ಪರಿಶೀಲನೆ
- ರಾಜಕೀಯ

 ರಾಷ್ಟೀಯ ಹೆದ್ದಾರಿ ಸಂತೆಕಟ್ಟೆ ಉಡುಪಿ  ಅಂಡರ್ ಪಾಸ್ ಕಾಮಗಾರಿ ಶಾಸಕ ಯಶ್ ಪಾಲ್ ಸುವರ್ಣ ಪರಿಶೀಲನೆ

Share:  ರಾಷ್ಟೀಯ ಹೆದ್ದಾರಿ ಸಂತೆಕಟ್ಟೆ ಉಡುಪಿ  ಅಂಡರ್ ಪಾಸ್ ಕಾಮಗಾರಿ ಶಾಸಕ ಯಶ್ ಪಾಲ್ ಸುವರ್ಣ ಪರಿಶೀಲನೆ  ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ ರವರು ಉಡುಪಿಯ ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ, ಉಪ್ಪೂರು ಕೊಳಲಗಿರಿ ಕ್ರಾಸ್, ಬ್ರಹ್ಮಾವರ ನೂತನ ತಾಲೂಕು ಸೌಧದ ಬಳಿ ಹಾಗೂ ಬಲಾಯಿಪಾದೆ ಕುತ್ಪಾಡಿ ಸಂಪರ್ಕ ರಸ್ತೆಯ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಕಾಮಗಾರಿ ನಡೆಸುತ್ತಿರುವ ಕಂಪೆನಿಯ ಪ್ರತಿನಿಧಿಗಳಿಗೆ ಮಳೆಗಾಲ […]

 ರಾಷ್ಟೀಯ ಹೆದ್ದಾರಿ ಸಂತೆಕಟ್ಟೆ ಉಡುಪಿ  ಅಂಡರ್ ಪಾಸ್ ಕಾಮಗಾರಿ ಶಾಸಕ ಯಶ್ ಪಾಲ್ ಸುವರ್ಣ ಪರಿಶೀಲನೆ

 ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ ರವರು ಉಡುಪಿಯ ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ, ಉಪ್ಪೂರು ಕೊಳಲಗಿರಿ ಕ್ರಾಸ್, ಬ್ರಹ್ಮಾವರ ನೂತನ ತಾಲೂಕು ಸೌಧದ ಬಳಿ ಹಾಗೂ ಬಲಾಯಿಪಾದೆ ಕುತ್ಪಾಡಿ ಸಂಪರ್ಕ ರಸ್ತೆಯ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಕಾಮಗಾರಿ ನಡೆಸುತ್ತಿರುವ ಕಂಪೆನಿಯ ಪ್ರತಿನಿಧಿಗಳಿಗೆ ಮಳೆಗಾಲ ಆರಂಭವಾಗುವ ಹಿನ್ನೆಲೆಯಲ್ಲಿ ಸುಗಮ ರಸ್ತೆ ಸಂಚಾರ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಸೂಕ್ತ ಕ್ರಮ ವಹಿಸುವಂತೆ ಸೂಚನೆ ನೀಡಿದರು.

 ಈ ಸಂದರ್ಭದಲ್ಲಿ ಸ್ಥಳೀಯ ನಗರ ಸಭಾ ಸದಸ್ಯರಾದ ಶ್ರೀಮತಿ ಮಂಜುಳಾ ನಾಯಕ್, ಶ್ರೀಮತಿ ಜಯಂತಿ,   ಬಾಲಕೃಷ್ಣ ಶೆಟ್ಟಿ, ಕಲ್ಯಾಣಪುರ  ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೃಷ್ಣ ದೇವಾಡಿಗ, ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ನಾಯ್ಕ್,  ನವೀನ್ ಕಾಂಚನ್,   ಉಮೇಶ್ ಬಡನಿಡಿಯೂರು, ಮುಖಂಡರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ ಉಮೇಶ್ ಶೆಟ್ಟಿ, ನಿಶಾನ್ ರೈ, ಜಯ ಬಲೈಪಾದೆ, ಸುನೀಲ್ ಉಪ್ಪೂರು ಮೊದಲಾದವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.