• Home  
  • ಲವ್ ಜಿಹಾದ್ ಕೃತ್ಯಕ್ಕೆ 10 ವರ್ಷ ಜೈಲು, ಭಾರೀ ದಂಡ
- ಅಪರಾಧ - ರಾಜಕೀಯ

ಲವ್ ಜಿಹಾದ್ ಕೃತ್ಯಕ್ಕೆ 10 ವರ್ಷ ಜೈಲು, ಭಾರೀ ದಂಡ

Share: ಲವ್ ಜಿಹಾದ್ ಕೃತ್ಯಕ್ಕೆ 10 ವರ್ಷ ಜೈಲು, ಭಾರೀ ದಂಡ ನವದೆಹಲಿ:  ಲವ್‌ ಜಿಹಾದ್‌ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹೊಸ ಕಾನೂನು ರೂಪಿಸುತ್ತಿದ್ದು ಅದಕ್ಕೆಂದೇ ನೂತನ ಕಾನೂನು ‌ರೂಪಿಸಿದೆ.  ನೂತನ ಕಾನೂನಿನಲ್ಲಿ ಲವ್‌ ಜಿಹಾದ್‌ ತಡೆಗೆ ಹಲವು ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ಯಾವುದೇ ವ್ಯಕ್ತಿಯು ತನ್ನ ಗುರುತು, ಆಚರಣೆಗಳನ್ನು (Identity) ಮುಚ್ಚಿಟ್ಟು, ನಕಲಿ ದಾಖಲೆ ತೋರಿಸಿ, ಸುಳ್ಳು ಭರವಸೆಗಳನ್ನು ನೀಡಿ ಲೈಂಗಿಕ ಸಂಬಂಧ ಹೊಂದಿದರೆ ಅಥವಾ ಮದುವೆಯಾದರೆ ಅದನ್ನು ಅಪರಾಧ ಎಂದು ಘೋಷಿಸಲಾಗುತ್ತದೆ.  ಅಲ್ಲದೆ, ಹಾಗೆ […]

ಲವ್ ಜಿಹಾದ್ ಕೃತ್ಯಕ್ಕೆ 10 ವರ್ಷ ಜೈಲು, ಭಾರೀ ದಂಡ

ನವದೆಹಲಿ:  ಲವ್‌ ಜಿಹಾದ್‌ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹೊಸ ಕಾನೂನು ರೂಪಿಸುತ್ತಿದ್ದು ಅದಕ್ಕೆಂದೇ ನೂತನ ಕಾನೂನು ‌ರೂಪಿಸಿದೆ.

 ನೂತನ ಕಾನೂನಿನಲ್ಲಿ ಲವ್‌ ಜಿಹಾದ್‌ ತಡೆಗೆ ಹಲವು ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ಯಾವುದೇ ವ್ಯಕ್ತಿಯು ತನ್ನ ಗುರುತು, ಆಚರಣೆಗಳನ್ನು (Identity) ಮುಚ್ಚಿಟ್ಟು, ನಕಲಿ ದಾಖಲೆ ತೋರಿಸಿ, ಸುಳ್ಳು ಭರವಸೆಗಳನ್ನು ನೀಡಿ ಲೈಂಗಿಕ ಸಂಬಂಧ ಹೊಂದಿದರೆ ಅಥವಾ ಮದುವೆಯಾದರೆ ಅದನ್ನು ಅಪರಾಧ ಎಂದು ಘೋಷಿಸಲಾಗುತ್ತದೆ.

 ಅಲ್ಲದೆ, ಹಾಗೆ ಮಾಡುವವರಿಗೆ 10 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಲಾಗುತ್ತದೆ ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.

 ಈಗಿನ ಭಾರತೀಯ ದಂಡ ಸಂಹಿತೆಯಲ್ಲಿ (IPC) ಈ ರೀತಿಯ ನಿಬಂಧನೆಗಳು ಇಲ್ಲ. ಹಾಗಾಗಿ, ನೂತನ ವಿಧೇಯಕದಲ್ಲಿ ನಕಲಿ ದಾಖಲೆ, ಸುಳ್ಳು ಮಾಹಿತಿ ನೀಡಿ ಲೈಂಗಿಕ ಸಂಪರ್ಕ ಹೊಂದುವುದು ಹಾಗೂ ಮದುವೆಯಾಗುವುದನ್ನು ಅಪರಾಧ ಎಂದು ಘೋಷಿಸಲಾಗುತ್ತದೆ.

 ಇತ್ತೀಚೆಗೆ, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಮೂಲಕ ಯುವತಿಯರನ್ನು ನಂಬಿಸಿ, ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡು, ಅವರನ್ನು ಮದುವೆಯಾಗುವುದಲ್ಲದೆ ಮತಾಂತರ ಮಾಡುವಂತಹ ಪ್ರಕರಣಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂತಹ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.