• Home  
  • ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ಕಾಲಭೈರವ ಸ್ವಾಮಿಯ ರಜತ ಪ್ರತಿಮೆ ಹಾಗೂ ಹಸುರು ಹೊರೆಕಾಣಿಕೆ ಮೆರವಣಿಗೆ (Shankarapura Sri Dwarakamai Matt)
- ಕರಾವಳಿ - ವಿಡಿಯೋ

ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ಕಾಲಭೈರವ ಸ್ವಾಮಿಯ ರಜತ ಪ್ರತಿಮೆ ಹಾಗೂ ಹಸುರು ಹೊರೆಕಾಣಿಕೆ ಮೆರವಣಿಗೆ (Shankarapura Sri Dwarakamai Matt)

Share: ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ಕಾಲಭೈರವ ಸ್ವಾಮಿಯ ರಜತ ಪ್ರತಿಮೆ ಹಾಗೂ ಹಸುರು ಹೊರೆಕಾಣಿಕೆ ಮೆರವಣಿಗೆ   ಶಂಕರಪುರ: ಶಂಕರಪುರ ದ್ವಾರಕಾಮಾಯಿ ಮಠ ಶ್ರೀಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಗುರುವರ್ಯರಾದ ಶ್ರೀ ಪ್ರವೀಣ್‌ರಾಜ್ ಮಚ್ಚೇಂದ್ರನಾಥ ಬಾಬಾರ (Pravinraj Macchendranath Baba) ಉಪಸ್ಥಿತಿಯಲ್ಲಿ ಕ್ಷೇತ್ರದ ತಂತ್ರಿಗಳಾದ ವೇ|ಮೂ| ದೇವದಾಸ ತಂತ್ರಿ ಮುಂಬಯಿ ನೇತೃತ್ವದಲ್ಲಿ   ಶಿಲಾಮಯ ಗುಡಿಯಲ್ಲಿ ಉಜ್ಜಯಿನಿ ಸಂಕಲ್ಪದಂತೆ ಪಾನಪ್ರಿಯ ಕಾಲಭೈರವ ಸ್ವಾಮಿ ಪ್ರತಿಷ್ಠೆ ಮತ್ತು ಗುರುವಂದನೆ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಕಾಲಭೈರವ ಸ್ವಾಮಿಯ ರಜತ ಪ್ರತಿಮೆ ಹಾಗೂ ಹಸಿರು ಹೊರೆ ಕಾಣಿಕೆ […]

ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ಕಾಲಭೈರವ ಸ್ವಾಮಿಯ ರಜತ ಪ್ರತಿಮೆ ಹಾಗೂ ಹಸುರು ಹೊರೆಕಾಣಿಕೆ ಮೆರವಣಿಗೆ

  ಶಂಕರಪುರ: ಶಂಕರಪುರ ದ್ವಾರಕಾಮಾಯಿ ಮಠ ಶ್ರೀಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಗುರುವರ್ಯರಾದ ಶ್ರೀ ಪ್ರವೀಣ್‌ರಾಜ್ ಮಚ್ಚೇಂದ್ರನಾಥ ಬಾಬಾರ (Pravinraj Macchendranath Baba) ಉಪಸ್ಥಿತಿಯಲ್ಲಿ ಕ್ಷೇತ್ರದ ತಂತ್ರಿಗಳಾದ ವೇ|ಮೂ| ದೇವದಾಸ ತಂತ್ರಿ ಮುಂಬಯಿ ನೇತೃತ್ವದಲ್ಲಿ   ಶಿಲಾಮಯ ಗುಡಿಯಲ್ಲಿ ಉಜ್ಜಯಿನಿ ಸಂಕಲ್ಪದಂತೆ ಪಾನಪ್ರಿಯ ಕಾಲಭೈರವ ಸ್ವಾಮಿ ಪ್ರತಿಷ್ಠೆ ಮತ್ತು ಗುರುವಂದನೆ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಕಾಲಭೈರವ ಸ್ವಾಮಿಯ ರಜತ ಪ್ರತಿಮೆ ಹಾಗೂ ಹಸಿರು ಹೊರೆ ಕಾಣಿಕೆ ಮೆರವಣಿಗೆಗೆ ಸಾಲ್ಮರ ಶಂಕರಪುರದಲ್ಲಿ ಧರ್ಮದರ್ಶಿಗಳಾದ ಶ್ರೀ ಸಾಯಿ ಈಶ್ವರ್ ಗುರೂಜಿ (Sri Sai Eswar Guruji) ಅವರು ದೇಶದ ನಾನಾ ರಾಜ್ಯಗಳ ಸಾಧು ಸಂತರ ಜತೆಗೂಡಿ   ಚಾಲನೆ ನೀಡಿದರು.

ಧಾರ್ಮಿಕ ಮೆರವಣಿಗೆಯಲ್ಲಿ ಶ್ರೀ ಕಾಲಭೈರವ ಸ್ವಾಮಿಯ ರಜತ ಪ್ರತಿಮೆ, ಕಳಶವನ್ನೊಳಗೊಂಡ ಟ್ಯಾಬ್ಲೋ, ಕುಣಿತ ಭಜನೆ, ಕಲಶ ಹಿಡಿದ ಮಹಿಳೆಯರು, ಭಜನಾ ತಂಡಗಳು, ಚೆಂಡೆ, ಸ್ಯಾಕ್ಸೋಫೋನ್, ಭಕ್ತರ ದಂಡು ಪಾಲ್ಗೊಂಡಿತ್ತು.

 ಈ ಸಂದರ್ಭ ಟ್ರಸ್ಟಿ ವಿಶ್ವನಾಥ ಸುವರ್ಣ, ಅಧ್ಯಕ್ಷರಾದ ಸುಧಾಕರ್ ಶೆಟ್ಟಿ, ಅರ್ಚಕರಾದ ಶ್ರೀನಿವಾಸ ಉಡುಪ, ಮಾರ್ಗದರ್ಶಕರಾದ ಗೀತಾಂಜಲಿ ಎಂ.ಸುವರ್ಣ, ವೀಣಾ ಎಸ್. ಶೆಟ್ಟಿ, ಸತೀಶ್ ದೇವಾಡಿಗ, ವಿಘ್ನೇಶ್ ನೀಲಾವರ, ಸ್ಮಿತಾ ಪ್ರವೀಣ್, ಸುಪ್ರೀತಾ, ಲಕ್ಷ್ಮೀ ನೀಲೇಶ್, ಗೌರವ ಉಪಸ್ಥಿತರು, ವಿಶೇಷ ಆಹ್ವಾನಿತರು, ಭಕ್ತಾಧಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.