ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಆಶಾಕಿರಣ: ಉಡುಪಿ ಜಿಲ್ಲೆಗೆ 100 ಜ್ಞಾನ ದೀಪ ಶಿಕ್ಷಕರು
ಪೂಜ್ಯ ಶ್ರೀ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಹತ್ವಕಾಂಕ್ಷಿ ಜ್ಞಾನ ದೀಪ ಯೋಜನೆ
(Udupi) ಉಡುಪಿ : ಪೂಜ್ಯ ಶ್ರೀ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮಹತ್ವಕಾಂಕ್ಷಿ ಕಾರ್ಯಕ್ರಮವಾದ ಜ್ಞಾನ ದೀಪ ಕಾರ್ಯಕ್ರಮದಡಿಯಲ್ಲಿ 2026-27ನೇ ಸಾಲಿನಲ್ಲಿ ಕರ್ನಾಟಕ ರಾಜ್ಯಾದ್ಯಂತ 1000 ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಗೌರವ ಶಿಕ್ಷಕರ ನೇಮಕಾತಿ ನೀಡಿದ್ದು, ಉಡುಪಿ ಜಿಲ್ಲೆಗೆ ಮಂಜೂರಾತಿ ಆದ 100 ಶಿಕ್ಷಕರ ಸಂದರ್ಶನ ಪ್ರಕ್ರಿಯೆ ಉಡುಪಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಸೌಧ ಕಟ್ಟಡದಲ್ಲಿ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ಇವರ ಮಾರ್ಗದರ್ಶನದಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿಯವರು ಕಾರ್ಯಕ್ರಮ ಉದ್ಘಾಟಿಸಿ ಸಮುದಾಯಾಭಿವೃದ್ಧಿ ಕಾರ್ಯಕ್ರಮದ ಸಂಪೂರ್ಣ ವಿವರದ ಬಗ್ಗೆ ಮಾಹಿತಿ ನೀಡಿದರು.
ಕೇಂದ್ರ ಕಛೇರಿಯ ಸಮುದಾಭಿವೃದ್ಧಿ ವಿಭಾಗದ ಯೋಜನಾಧಿಕಾರಿ ಶೇಖರ್, ಜ್ಞಾನ ದೀಪ ಶಿಕ್ಷಕರ ಕರ್ತವ್ಯದ ಕುರಿತು ಮಾಹಿತಿ ನೀಡಿದರು.
ಜಿಲ್ಲೆಯ ಯೋಜನಾಧಿಕಾರಿ ಸ್ವಪ್ನ ಪ್ರಕಾಶ್, ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ, ತಾಲೂಕು ಯೋಜನಾಧಿಕಾರಿಗಳಾದ ಸುರೇಂದ್ರ ನಾಯ್ಕ, ಬಾಲಕೃಷ್ಣ ಹಿರಿಂಜ, ಉಮೇಶ್, ಸುಧೀರ್, ರಮೇಶ್ ಪಿ.ಕೆ. ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅನಿತಾ ಶೆಟ್ಟಿ ಶ್ರೀಮತಿ ಉಪಸ್ಥಿತರಿದ್ದು, ಸಂದರ್ಶನ ಪ್ರಕ್ರಿಯೆ ನಡೆಸಿದರು.
ಜಿಲ್ಲಾ ಕಚೇರಿ ಪ್ರಬಂಧಕಿ ಜ್ಯೋತಿ ಸ್ವಾಗತಿಸಿದರು. ಚೈತ್ರ ಕಾರ್ಯಕ್ರಮ ನಿರ್ವಹಿಸಿದರು. ನಿತೇಶ್ ವಂದಿಸಿದರು.
ಅರ್ಪಿತಾ, ಸೋನಿಯಾ, ಸರೋಜಿನಿ, ಕೀರ್ತಿಕ್, ಯಶೋದಾ, ಕಿರಣ್ ಉಪಸ್ಥಿತರಿದ್ದರು.

