• Home  
  • ಶಿರ್ವ : ಕಟ್ಟಿಂಗೇರಿ ಶಿಲುಬೆ ಧ್ವಂಸ ಪ್ರಕರಣ, ಡೇವಿಡ್ ಡಿಸೋಜಾ ಖಂಡನೆ (Shirva’s Kattingeri cross demolition case: David D’Souza condemns)
- ಅಪರಾಧ

ಶಿರ್ವ : ಕಟ್ಟಿಂಗೇರಿ ಶಿಲುಬೆ ಧ್ವಂಸ ಪ್ರಕರಣ, ಡೇವಿಡ್ ಡಿಸೋಜಾ ಖಂಡನೆ (Shirva’s Kattingeri cross demolition case: David D’Souza condemns)

Share: ಶಿರ್ವ : ಕಟ್ಟಿಂಗೇರಿ ಶಿಲುಬೆ ಧ್ವಂಸ ಪ್ರಕರಣ, ಡೇವಿಡ್ ಡಿಸೋಜಾ ಖಂಡನೆ (Shirva) ಶಿರ್ವ : ಶಿರ್ವ ಗ್ರಾಮದ ಕಟ್ಟಿಂಗೇರಿಯ ಕುದುರೆ ಮಲೆ ಎಂಬಲ್ಲಿ ಖಾಸಗಿ ಸ್ಥಳದಲ್ಲಿದ್ದ ಶಿಲುಬೆಯೊಂದನ್ನು ಕಿಡಿಗೇಡಿಗಳು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಪ್ರಿನ್ಸ್ ಪಾಯಿಂಟ್ ನ  ಡೇವಿಡ್ ಡಿಸೋಜಾ ತೀವ್ರ ಆಘಾತ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಡೇವಿಡ್ ಡಿಸೋಜಾ ಪತ್ರಿಕಾ ಪ್ರಕಟಣೆ ನೀಡಿ, ಶಿಲುಬೆಯೊಂದನ್ನು ಕಿಡಿಗೇಡಿಗಳು ಧ್ವಂಸ ಮಾಡಿದ ಪ್ರಕರಣದಿಂದ ಕ್ರೈಸ್ತ […]

ಶಿರ್ವ : ಕಟ್ಟಿಂಗೇರಿ ಶಿಲುಬೆ ಧ್ವಂಸ ಪ್ರಕರಣ, ಡೇವಿಡ್ ಡಿಸೋಜಾ ಖಂಡನೆ

(Shirva) ಶಿರ್ವ : ಶಿರ್ವ ಗ್ರಾಮದ ಕಟ್ಟಿಂಗೇರಿಯ ಕುದುರೆ ಮಲೆ ಎಂಬಲ್ಲಿ ಖಾಸಗಿ ಸ್ಥಳದಲ್ಲಿದ್ದ ಶಿಲುಬೆಯೊಂದನ್ನು ಕಿಡಿಗೇಡಿಗಳು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಪ್ರಿನ್ಸ್ ಪಾಯಿಂಟ್ ನ  ಡೇವಿಡ್ ಡಿಸೋಜಾ ತೀವ್ರ ಆಘಾತ ವ್ಯಕ್ತ ಪಡಿಸಿದ್ದಾರೆ.

ಈ ಬಗ್ಗೆ ಡೇವಿಡ್ ಡಿಸೋಜಾ ಪತ್ರಿಕಾ ಪ್ರಕಟಣೆ ನೀಡಿ, ಶಿಲುಬೆಯೊಂದನ್ನು ಕಿಡಿಗೇಡಿಗಳು ಧ್ವಂಸ ಮಾಡಿದ ಪ್ರಕರಣದಿಂದ ಕ್ರೈಸ್ತ ಸಮಾಜಕ್ಕೆ ತೀವ್ರ ನೋವಾಗಿದೆ. ಶಿಲುಬೆಯು ಕ್ರೈಸ್ತ ಸಮಾಜದ ಪೂಜಾ ಸ್ಥಳವಾಗಿದ್ದು ಕೆಡವಿ ಧ್ವಂಸಗೊಳಿಸಿದ್ದು ಆರೋಪಿಗಳ ಕೀಳು ಮನಸ್ಥಿತಿಗೆ ಸಾಕ್ಷಿಯಾಗಿದೆ.

ಸದಾ ಶಾಂತಿಯನ್ನು ಬಯಸುವ ಕ್ರೈಸ್ತ ಸಮಾಜಕ್ಕೆ ಇಂತಹಾ ಘಟನೆಯಿಂದ ತೀವ್ರ ಆಘಾತಗೊಂಡಿದ್ದಾರೆ. ಅಪರಾಧಿ ಎಷ್ಟೇ ಪ್ರಭಾವಶಾಲಿಯಾಗಿದ್ದರೂ, ಉಡುಪಿ ಜಿಲ್ಲೆಯ ದಕ್ಷ ಪೊಲೀಸ್ ವರಿಷ್ಠಾಧಿಕಾರಿಯವರು ಇದರ ಬಗ್ಗೆ ಕ್ರಮ ಕೈಗೊಂಡು ಅವರ ಹೆಡೆಮುರಿ ಕಟ್ಟಬೇಕಾಗಿದೆ.

ಶಾಂತಿ ಬಯಸುವ ಕ್ರೈಸ್ತ  ಸಮಾಜಕ್ಕೆ ಆಗಿರುವ ಅನ್ಯಾಯಕ್ಕೆ ತಕ್ಕ ಶಿಕ್ಷೆ ಆಗಬೇಕೆಂದು ಡೇವಿಡ್‌ ಡಿಸೋಜಾ ಪೊಲೀಸ್‌ ಇಲಾಖೆಯನ್ನು ಆಗ್ರಹಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.