ಶಿರ್ವ– ಪಂಜಿಮಾರು– ಪಿಲಾರು ಮುಖ್ಯರಸ್ತೆ ದುರಸ್ತಿಗೆ ಆಗ್ರಹಿಸಿ ಪಿಡಬ್ಲ್ಯೂಡಿ ಅಧಿಕಾರಿಗೆ ಮನವಿ
ಸೊರಕೆ ನೇತೃತ್ವದಲ್ಲಿ ಮಂಜುನಾಥ್ ಎಸ್ ಬಿಯವರಿಗೆ ಮನವಿ
(Shirva) ಶಿರ್ವ ; ಶಿರ್ವ- ಪಂಜಿಮಾರು – ಪಿಲಾರು ಮುಖ್ಯರಸ್ತೆ ದುರಸ್ತಿಗೆ ಆಗ್ರಹಿಸಿ 15 ದಿನಗಳ ಹಿಂದೆ ಶಿರ್ವ ಗ್ರಾಮೀಣ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿದ್ದು, ರಸ್ತೆ ಇನ್ನೂ ಕೂಡ ದುರಸ್ತಿಯಾಗದೆ ಇರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ.
ಈ ಬಗ್ಗೆ ಇಂದು ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ ರವರ ನೇತೃತ್ವದಲ್ಲಿ ಶಿರ್ವ ಗ್ರಾಮೀಣ ಕಾಂಗ್ರೆಸ್ ನಿಯೋಗವು ಶುಕ್ರವಾರ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರನ್ನು ಭೇಟಿ ಮಾಡಿ, ಅವರ ನಿರ್ದೇಶನದಂತೆ ಪಿಡಬ್ಲ್ಯೂಡಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ್ ಎಸ್ ಬಿ ಅವರನ್ನು ಭೇಟಿ ಮಾಡಿ ಚರ್ಚಿಸಿತು.
ಮಂಜುನಾಥ್ ರವರು ಸ್ಪಂಧಿಸಿ, ರಸ್ತೆಯ ಕಾಮಗಾರಿಯನ್ನು 15 ದಿನದೊಳಗೆ ಪ್ರಾರಂಭಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೀರ್ತನ್ ಪೂಜಾರಿ, ಅಬ್ದುಲ್ ಲತೀಫ್, ಅಬ್ದುಲ್ ಅಹದ್, ಅಜಯ್ ಪೂಜಾರಿ, ರಮೇಶ್ ಬಂಗೇರ, ರವೀಂದ್ರ ಆಚಾರ್ಯ, ಶೈಲೇಶ್ ಹೆಗ್ಡೆ ಉಪಸ್ಥಿತರಿದ್ದರು.

