ಶ್ರೀಕ್ಷೇತ್ರ ಧರ್ಮಸ್ಥಳದಿಂದ ಶೀರೂರು ಪರ್ಯಾಯಕ್ಕೆ ಹೊರೆಕಾಣಿಕೆ
ಜ. 18 ರಂದು ಸರ್ವಜ್ಞ ಪೀಠ ಏರಲಿರುವ ಪರ್ಯಾಯ ಶಿರೂರು ಶ್ರೀ ವೇದವರ್ದನ ಸ್ವಾಮೀಜಿ
(Udupi) ಉಡುಪಿ: ಶ್ರೀಕ್ಷೇತ್ರ ಧರ್ಮಸ್ಥಳದಿಂದ ಶೀರೂರು ಪರ್ಯಾಯದ ಗೌರವಾಧ್ಯಕ್ಷರಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಜ. 18 ರಂದು ನಡೆಯಲಿರುವ ಶೀರೂರು ಪರ್ಯಾಯಕ್ಕಾಗಿ ಹೊರೆಕಾಣಿಕೆ ನೆರವೇರಿತು.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 50 ಕ್ವಿಂಟಲ್ ಸೋನಾ ಮಸೂರಿ ಅಕ್ಕಿ ಮತ್ತು 15 ಕ್ವಿಂಟಲ್ ತರಕಾರಿಯನ್ನು ಶ್ರೀ ಕೃಷ್ಣನ ಸನ್ನಿಧಾನಕ್ಕೆ ಸಲ್ಲಿಸಲಾಯಿತು.
ಶೀರೂರು ಪರ್ಯಾಯದ ಮೊದಲ ದಿನದ ಹೊರೆಕಾಣಿಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಲ್ಲಿಕೆಯಾಗಿತ್ತು. ಇದೀಗ ಶ್ರೀ ಕ್ಷೇತ್ರದ ವತಿಯಿಂದ ಎರಡನೇ ಹೊರೆಕಾಣಿಕೆ ಸಲ್ಲಿಕೆಯಾಯಿತು. ಪರ್ಯಾಯ ಶಿರೂರು ಶ್ರೀ ವೇದವರ್ದನ ಶ್ರೀಪಾದಂಗಳವರು ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು
ಧರ್ಮಸ್ಥಳ ಅನ್ನಪೂರ್ಣ ಛತ್ರದ ಪ್ರಬಂಧಕ ಸುಬ್ರಮಣ್ಯ ಪ್ರಸಾದ್, ಶ್ರೀ ಮಠದ ದಿವಾನರಾದ ಡಾ. ಉದಯ ಕುಮಾರ ಸರಳತ್ತಾಯ ಹೊರೆಕಾಣಿಕೆ ಸಮಿತಿ ಸಂಚಾಲಕ ಸುಪ್ರಸಾದ್ ಶೆಟ್ಟಿ ಕಾರ್ಯದರ್ಶಿ ಮೋಹನ್ ಭಟ್ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ನಾಗರಾಜ್ ಶೆಟ್ಟಿ, ಯೋಜನಾಧಿಕಾರಿ ಸುರೇಂದ್ರ ನಾಯ್ಕ್, ದಿಲೀಪ್ ಜೈನ್, ಪ್ರಚಾರ ಸಮಿತಿಯ ನಂದನ್ ಜೈನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

