• Home  
  • ಶ್ರೀ ಏಕದಂತ ಸೇವಾ ಸಮಿತಿ ಪಣಿಯಾಡಿ : ದೀಪಾವಳಿ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸಹಾಯಹಸ್ತ (Sri Ekadanta Seva Samiti Paniyadi: Helping hand to financially backward family on the occasion of Diwali)
- ಸಹಾಯ ಹಸ್ತ

ಶ್ರೀ ಏಕದಂತ ಸೇವಾ ಸಮಿತಿ ಪಣಿಯಾಡಿ : ದೀಪಾವಳಿ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸಹಾಯಹಸ್ತ (Sri Ekadanta Seva Samiti Paniyadi: Helping hand to financially backward family on the occasion of Diwali)

Share:  ಶ್ರೀ ಏಕದಂತ ಸೇವಾ ಸಮಿತಿ ಪಣಿಯಾಡಿ : ದೀಪಾವಳಿ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸಹಾಯಹಸ್ತ ತಲಾ 2000ರೂ. ರಂತೆ 29 ಕುಟುಂಬಗಳಿಗೆ 58000  ರೂ. ಮೊತ್ತದ ಆಹಾರ ಸಾಮಾಗ್ರಿ ವಿತರಣೆ (Udupi) ಉಡುಪಿ: ಶ್ರೀ ಏಕದಂತ ಸೇವಾ ಸಮಿತಿ ಪಣಿಯಾಡಿ ಹಾಗೂ ದಾನಿಗಳ ಸಹಕಾರದಿಂದ ದೀಪಾವಳಿ ಹಬ್ಬದ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸಹಾಯಹಸ್ತ ನೀಡಲಾಯಿತು.  ಸಮಿತಿಯ ಆಯೋಜನೆಯಲ್ಲಿ ತಲಾ 2000ರೂ. ರಂತೆ 29 ಕುಟುಂಬಗಳಿಗೆ 58000  ರೂಪಾಯಿ ಮೊತ್ತದ ಆಹಾರ ಸಾಮಾಗ್ರಿಗಳನ್ನು ವಿತರಿಸುವ ಆರನೇ […]

(Udupi) ಉಡುಪಿ: ಶ್ರೀ ಏಕದಂತ ಸೇವಾ ಸಮಿತಿ ಪಣಿಯಾಡಿ ಹಾಗೂ ದಾನಿಗಳ ಸಹಕಾರದಿಂದ ದೀಪಾವಳಿ ಹಬ್ಬದ ಪ್ರಯುಕ್ತ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸಹಾಯಹಸ್ತ ನೀಡಲಾಯಿತು.

 ಸಮಿತಿಯ ಆಯೋಜನೆಯಲ್ಲಿ ತಲಾ 2000ರೂ. ರಂತೆ 29 ಕುಟುಂಬಗಳಿಗೆ 58000  ರೂಪಾಯಿ ಮೊತ್ತದ ಆಹಾರ ಸಾಮಾಗ್ರಿಗಳನ್ನು ವಿತರಿಸುವ ಆರನೇ ವರ್ಷದ ಕಾರ್ಯಕ್ರಮಕ್ಕೆ ಊರಿನ ಹಿರಿಯರಾದ ಬಾಲಕೃಷ್ಣ ಸರಳಾಯ, ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಶ್ಮೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಪ್ರಾರ್ಥನೆ ಮುಖೇನ ಚಾಲನೆಯನ್ನು ನೀಡಲಾಯಿತು.

 ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ನಾಗರಾಜ್ ಪಣಿಯಾಡಿ, ಗೌರವಾಧ್ಯಕ್ಷ ತಲ್ಲೂರು ಚಂದ್ರಶೇಖರ್ ಶೆಟ್ಟಿ, ವಿಠ್ಠಲಮೂರ್ತಿ ಆಚಾರ್ಯ, ರಾಮದಾಸ್ ಶೆಟ್ಟಿಗಾರ್, ದತ್ತಾತ್ರೇಯ ಭಟ್, ಪ್ರವೀಣ್ ಕುಂಜಿಬೆಟ್ಟು, ಸಚ್ಚಿದ್ರ ನಾಯ್ಕ್, ಮಿತೇಶ್ ಸೇರಿಗಾರ್, ನಗರಸಭೆ ಮಾಜಿ ಉಪಾಧ್ಯಕ್ಷರಾದ ಬಿ. ಕುಶಲ ಶೆಟ್ಟಿ ಇಂದ್ರಾಳಿ, ಮಲ್ಪೆ ಲಯನ್ಸ್ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷ ಸುಧಾಕರ ಪೂಜಾರಿ, ಉದ್ಯಮಿ ಪೆರ್ಣoಕಿಲ ಶ್ರೀಶ ನಾಯಕ್, ನಗರಸಭೆ ಮಾಜಿ ಸದಸ್ಯ ಶಾಂತರಾಮ್ ಸಾಲ್ವಂಕಾರ್, ದಿವಾಕರ ಸಾಲಿಯಾನ್, ನಾರಾಯಣ ಪೂಜಾರಿ, ಶಂಕರ್ ನಾಯ್ಕ್, ಪ್ರಕಾಶ್ ಪೂಜಾರಿ, ಮುದ್ದು ನಾಯ್ಕ್, ರತ್ನಾಕರ್ ನಾಯ್ಕ್, ಉಜ್ವಲ್ ಶ್ರೀಯಾನ್, ಹರೀಶ್ ಶೆಟ್ಟಿಗಾರ್, ಕೃಷ್ಣ ನಾಯ್ಕ್, ಸುಧಾಕರ ನಾಯ್ಕ್, ಪ್ರದೀಪ್ ಶ್ರೀಯಾನ್, ಹರೀಶ್ ನಾಯ್ಕ್, ಶ್ರೀಮತಿ ಜಾನಕೀ ಕೃಷ್ಣ ನಾಯ್ಕ್, ರವಿ ಸೇರಿಗಾರ್, ವಸಂತಿ ಸೇರಿಗಾರ್, ಶಿವರಾಮ್ ಶೆಟ್ಟಿಗಾರ್, ಮುಕ್ತ ಎಂ. ಜಿ. ಎಂ, ಜಗದೀಶ ಸೇರಿಗಾರ್, ಹರ್ಷಿಲ್ ಡಿ. ತಿಂಗಳಾಯ, ಆಯುಷ್, ಅನುರಾಗ್ ಆಚಾರ್ಯ, ಶ್ಯಾಮ ಪೂಜಾರಿ, ವಿಠ್ಠಲ ನಾಯ್ಕ್ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.