• Home  
  • ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ಘಟಕದ ಸದಸ್ಯರಿಂದ ಶೌರ್ಯ ಪ್ರದರ್ಶನ
- ಕರಾವಳಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ಘಟಕದ ಸದಸ್ಯರಿಂದ ಶೌರ್ಯ ಪ್ರದರ್ಶನ

Share: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ಘಟಕದ ಸದಸ್ಯರಿಂದ ಶೌರ್ಯ ಪ್ರದರ್ಶನ  ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಪುಲು ಬಳಿ ಭಾರಿ ಮಳೆಯಿಂದ ತುಂಬಿ ಹರಿಯುತ್ತಿರುವ ಶಾಂಭವಿ ನದಿಗೆ ನಿರ್ಮಿಸಲಾದ ಕಿಂಡಿ ಅಣೆಕಟ್ಟುವಿನಲ್ಲಿ  ಬೃಹತ್ ಗಾತ್ರದ   ಮರದ ದಿಮ್ಮಿ , ಗಿಡ, ಕಸ, ಪ್ಲಾಸ್ಟಿಕ್ ತ್ಯಾಜ್ಯಗಳು ಸಿಕ್ಕಿಹಾಕಿಕೊಂಡು ನದಿಯ ನೀರು ಸರಾಗವಾಗಿ ಹರಿಯಲು ತೊಡಕಾಗಿತ್ತು. ಇದರಿಂದ  ಹತ್ತಿರದ ಕೃಷಿ ಭೂಮಿ , ತೋಟ, ಮನೆಗಳು ಮುಳುಗುವ ಭೀತಿಯಲ್ಲಿದ್ದವು. ಇದನ್ನು ತೆರವುಗೊಳಿಸುವುದು   ಗ್ರಾಮ ಪಂಚಾಯತಿಗೆ […]

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ಘಟಕದ ಸದಸ್ಯರಿಂದ ಶೌರ್ಯ ಪ್ರದರ್ಶನ

 ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಪುಲು ಬಳಿ ಭಾರಿ ಮಳೆಯಿಂದ ತುಂಬಿ ಹರಿಯುತ್ತಿರುವ ಶಾಂಭವಿ ನದಿಗೆ ನಿರ್ಮಿಸಲಾದ ಕಿಂಡಿ ಅಣೆಕಟ್ಟುವಿನಲ್ಲಿ  ಬೃಹತ್ ಗಾತ್ರದ   ಮರದ ದಿಮ್ಮಿ , ಗಿಡ, ಕಸ, ಪ್ಲಾಸ್ಟಿಕ್ ತ್ಯಾಜ್ಯಗಳು ಸಿಕ್ಕಿಹಾಕಿಕೊಂಡು ನದಿಯ ನೀರು ಸರಾಗವಾಗಿ ಹರಿಯಲು ತೊಡಕಾಗಿತ್ತು.

ಇದರಿಂದ  ಹತ್ತಿರದ ಕೃಷಿ ಭೂಮಿ , ತೋಟ, ಮನೆಗಳು ಮುಳುಗುವ ಭೀತಿಯಲ್ಲಿದ್ದವು. ಇದನ್ನು ತೆರವುಗೊಳಿಸುವುದು   ಗ್ರಾಮ ಪಂಚಾಯತಿಗೆ ಕಠಿಣ ಸವಾಲಾಗಿತ್ತು.

 ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರಸಾದ್ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಸುರೇಖಾ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಣೂರು ಒಕ್ಕೂಟದ ಸೇವಾ ಪ್ರತಿನಿಧಿಯಾದ ಶ್ರೀಮತಿ ಅರುಣಿಯವರಿಗೆ ಮಾಹಿತಿಯನ್ನು ನೀಡಿ,  ಸಾಣೂರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ಅಣೆಕಟ್ಟುವಿನಲ್ಲಿ ಸಿಕ್ಕಿಹಾಕಿಕೊಂಡ ಮರದದಿಮ್ಮಿ ಹಾಗು ತ್ಯಾಜ್ಯವನ್ನು ವಿಲೇವಾರಿ ಮಾಡುವಂತೆ ಮನವಿಯನ್ನು ಮಾಡಿದ್ದಾರೆ.

 ಪಂಚಾಯತ್ ಮನವಿಗೆ ಸ್ಪಂದಿಸಿದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು   ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ತುಂಬಿ ಹರಿಯುತ್ತಿರುವ ಶಾಂಭವಿ ನದಿಗೆ ಇಳಿದು ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ಮಾಡಿ ಸಿಕ್ಕಿಹಾಕಿಕೊಂಡ ಮರದ ದಿಮ್ಮಿ ಹಾಗೂ ತ್ಯಾಜ್ಯವನ್ನು ವಿಲೇವಾರಿ ಮಾಡಿದ್ದಾರೆ.

  ಅದಲ್ಲದೆ ಗ್ರಾಮದಲ್ಲಿ ಪ್ರತಿ ಭಾನುವಾರ ಸ್ವಚ್ಛತೆ, ಶಾಲೆಗಳಿಗೆ ಕೈತೋಟ ಹಾಗೂ ಗಾಳಿ ಮಳೆಯಿಂದ ಮರ-ಗಿಡಗಳು ರಸ್ತೆಗೆ ಉರುಳಿ ಬಿದ್ದಾಗ ಅದನ್ನು ತೆರವುಗೊಳಿಸುವಂತಹ ಕಾರ್ಯದಲ್ಲಿ ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರು ತೊಡಗಿಕೊಂಡು  ಗ್ರಾಮದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.