• Home  
  • ಶ್ರೀ ಮುಖ್ಯಪ್ರಾಣ ದೇವರ ಮೂರ್ತಿಗೆ ಶ್ರೀ ಕ್ಷೇತ್ರ ಶಂಕರಪುರದಲ್ಲಿ ಭವ್ಯ ಸ್ವಾಗತ (Grand welcome to the idol of Shri Mukhaprana Devara at Sri Kshetra Shankarpura)
- ಧಾರ್ಮಿಕ

ಶ್ರೀ ಮುಖ್ಯಪ್ರಾಣ ದೇವರ ಮೂರ್ತಿಗೆ ಶ್ರೀ ಕ್ಷೇತ್ರ ಶಂಕರಪುರದಲ್ಲಿ ಭವ್ಯ ಸ್ವಾಗತ (Grand welcome to the idol of Shri Mukhaprana Devara at Sri Kshetra Shankarpura)

Share: ಶ್ರೀ ಮುಖ್ಯಪ್ರಾಣ ದೇವರ ಮೂರ್ತಿಗೆ ಶ್ರೀ ಕ್ಷೇತ್ರ ಶಂಕರಪುರದಲ್ಲಿ ಭವ್ಯ ಸ್ವಾಗತ ಶ್ರೀ ಸಾಯಿ ಈಶ್ವರ ಗುರೂಜಿ ಅವರು ಸಂಕಲ್ಪದಂತೆ  19 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪನೆ (Shankarapura) ಶಂಕರಪುರ: ಶ್ರೀ ಕ್ಷೇತ್ರ ಶಂಕರಪುರದಲ್ಲಿ ಪ್ರತಿಷ್ಠಾಪನೆಗೆ ಸಿದ್ಧವಾಗಿರುವ 19 ಅಡಿ ಎತ್ತರದ ಶ್ರೀ ಮುಖ್ಯಪ್ರಾಣ ದೇವರ ಮೂರ್ತಿಯ ಮೆರವಣಿಗೆಗೆ ಶನಿವಾರ ಉಡುಪಿಯ ಜೋಡುಕಟ್ಟೆಯ ಬಳಿ ಭವ್ಯ ಸ್ವಾಗತದೊಂದಿಗೆ ಕ್ಷೇತ್ರದೆಡೆಗೆ ಬೀಳ್ಕೊಡಲಾಯಿತು. ಶ್ರೀಕ್ಷೇತ್ರ ಶಂಕರಪುರದ ಮುಖ್ಯಸ್ಥರಾದ ಶ್ರೀ ಸಾಯಿ ಈಶ್ವರ ಗುರೂಜಿ ಅವರು ಸಂಕಲ್ಪಿಸಿದಂತೆ  ಶ್ರೀ ಕ್ಷೇತ್ರ […]

(Shankarapura) ಶಂಕರಪುರ: ಶ್ರೀ ಕ್ಷೇತ್ರ ಶಂಕರಪುರದಲ್ಲಿ ಪ್ರತಿಷ್ಠಾಪನೆಗೆ ಸಿದ್ಧವಾಗಿರುವ 19 ಅಡಿ ಎತ್ತರದ ಶ್ರೀ ಮುಖ್ಯಪ್ರಾಣ ದೇವರ ಮೂರ್ತಿಯ ಮೆರವಣಿಗೆಗೆ ಶನಿವಾರ ಉಡುಪಿಯ ಜೋಡುಕಟ್ಟೆಯ ಬಳಿ ಭವ್ಯ ಸ್ವಾಗತದೊಂದಿಗೆ ಕ್ಷೇತ್ರದೆಡೆಗೆ ಬೀಳ್ಕೊಡಲಾಯಿತು.

ಶ್ರೀಕ್ಷೇತ್ರ ಶಂಕರಪುರದ ಮುಖ್ಯಸ್ಥರಾದ ಶ್ರೀ ಸಾಯಿ ಈಶ್ವರ ಗುರೂಜಿ ಅವರು ಸಂಕಲ್ಪಿಸಿದಂತೆ  ಶ್ರೀ ಕ್ಷೇತ್ರ ಶಂಕರಪುರದಲ್ಲಿ 19 ಅಡಿ ಎತ್ತರದ ಮುಖ್ಯಪ್ರಾಣ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲು ಮೂರ್ತಿಯು ವಾಹನ ಜಾಥಾದ ಮೂಲಕ ಶನಿವಾರ ಸಂಜೆ ಕಾರ್ಕಳದಿಂದ ಉಡುಪಿ ನಗರಕ್ಕೆ ಆಗಮಿಸಿತ್ತು.

 ಉಡುಪಿ ಜೋಡುಕಟ್ಟೆಯ ಬಳಿ ಶ್ರೀ ಸಾಯಿ ಶ್ರೀ ಸಾಯಿ ಈಶ್ವರ ಗುರೂಜಿ, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಅವರು ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಕ್ಷೇತ್ರದ ಕಡೆಗೆ ಹೊರಟ ಮರವಣಿಗೆಗೆ ಚಾಲನೆ ನೀಡಿದರು.

  ಕುಣಿತ ಭಜನೆ, ಮುಖ್ಯಪ್ರಾಣ ದೇವರ ಹಾಡುಗಳು, ಚೆಂಡೆ ವಾದನ, ದೇವರ ವೇಷಧಾರಿ ಮಕ್ಕಳು ಗಮನ ಸೆಳೆದರು.

ಈ ಸಂದರ್ಭ ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ,  ಪ್ರಮುಖರಾದ ಅಭಿರಾಜ್ ಎಂ. ಸುವರ್ಣ, ಗೀತಾಂಜಲಿ ಎಂ. ಸುವರ್ಣ, ವೀಣಾ ಎಸ್. ಶೆಟ್ಟಿ, ಸತೀಶ್ ದೇವಾಡಿಗ, ವಿಶ್ಲೇಶ್ ನೀಲಾವರ, ವಿಜಯ ಕುಂದ‌ರ್, ಶಿಲ್ಪಿ ಗಣೇಶ, ವಿಜಯ ಕೊಡವೂರು, ವಿನೋದ್ ಕುಮಾರ್ ಜೋಗಿ, ರಾಘವೇಂದ್ರ ಪ್ರಭು ಕರ್ವಾಲು, ಶ್ರೀಧರ ಅಮೀನ್, ಸೂರಜ್ ಇಂದ್ರಾಳಿ, ಶ್ವೇತಾ ಜಯರಾಮ್, ಸತೀಶ್ ವೇಣೂರು, ಅಖಿಲೇಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.