ಕಾಪು ಶ್ರೀ ಹೊಸ ಮಾರಿಗುಡಿಗೆ ವಿಜಯ ಸಂಕೇಶ್ವರರ ಸುಪುತ್ರಿ ದೀಪಾ, ಅಳಿಯ ಅಶ್ವಿನ್ ಪಾಟೀಲ್
ಹೊಸ ಮಾರಿಗುಡಿ ಆಡಳಿತ ಮಂಡಳಿಯಿಂದ ಅಭಿನಂದನೆ
(Kaup) ಕಾಪು: ವಿ ಆರ್ ಎಲ್ ಸಂಸ್ಥೆಯ ಸಂಸ್ಥಾಪಕ ಡಾ. ವಿಜಯ ಸಂಕೇಶ್ವರ ಸುಪುತ್ರಿ ದೀಪಾ ಮತ್ತು ಅಳಿಯ ಅಶ್ವಿನ್ ಪಾಟೀಲ್ ಅವರು ಕಾಪು ಶ್ರೀ ಹೊಸ ಮಾರಿಗುಡಿಗೆ ಆಗಮಿಸಿ ಉಚ್ಚಂಗಿ ಸಹಿತ ಮಾರಿಯಮ್ಮನ ದರುಶನ ಪಡೆದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯಿಂದ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ದೇವಳದ ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

