ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಸಿಗುವಂತಾಗಲಿ: ಆಶಾ ಅಂಚನ್ ಕಟಪಾಡಿ
(Udupi) ಉಡುಪಿ: ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಸಿಗುವಂತಾಗಲಿ ಎಂದು ಕಾಪು ಕಾಂಗ್ರೆಸ್ ಉಪಾಧ್ಯಕ್ಷೆ ಆಶಾ ಅಂಚನ್ ಕಟಪಾಡಿ ಪಕ್ಷ ವರಿಷ್ಠರನ್ನು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ತಮ್ಮ ಜಾತಿಯವರಿಗೆ ನೀಡಿ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಇದರಿಂದ ಕಾಂಗ್ರೆಸ್ ಪಕ್ಷದಲ್ಲಿ ಹತ್ತು ಹಲವು ವರ್ಷಗಳಿಂದ ನಿಷ್ಠಾವಂತರಾಗಿ ದುಡಿದವರಿಗೆ ಮೋಸ ಆಗುತ್ತಿದೆ.
ಜಾತಿಯನ್ನು ಮಾನದಂಡವಾಗಿ ಇರಿಸಿ ಯಾವುದೇ ಸ್ಥಾನ ಪಡೆಯುವಂತೆ ನೋಡುವುದು ತಪ್ಪು ಎಂದು ನನ್ನ ಭಾವನೆಯಾಗಿದೆ. ಪಕ್ಷದ ವರಿಷ್ಠರು ಜಾತಿ ರಾಜಕಾರಣಕ್ಕೆ ಮಣೆ ಹಾಕದೆ, ಪಕ್ಷದಲ್ಲಿ ಹಗಲಿರುಳು ದುಡಿದ ಕಾರ್ಯಕರ್ತರಿಗೆ ಮಣೆ ಹಾಕಬೇಕೆಂದು ಆಶಾ ಅಂಚನ್‌ರವರು ಮನವಿ ಮಾಡಿದ್ದಾರೆ.

