• Home  
  • ಸಚ್ಚೇರಿಪೇಟೆ ಲಯನ್ಸ್ ಪ್ರೌಢಶಾಲೆಯಲ್ಲಿ ವಿಜ್ಞಾನ ಮಾದರಿ ಸ್ಪರ್ಧೆ, ಪ್ರದರ್ಶನ (Science Model Competition, Exhibition at Sacheripete Lions High School)
- ಸಂಘ, ಸಂಸ್ಥೆಗಳು

ಸಚ್ಚೇರಿಪೇಟೆ ಲಯನ್ಸ್ ಪ್ರೌಢಶಾಲೆಯಲ್ಲಿ ವಿಜ್ಞಾನ ಮಾದರಿ ಸ್ಪರ್ಧೆ, ಪ್ರದರ್ಶನ (Science Model Competition, Exhibition at Sacheripete Lions High School)

Share: ಸಚ್ಚೇರಿಪೇಟೆ ಲಯನ್ಸ್ ಪ್ರೌಢಶಾಲೆಯಲ್ಲಿ ವಿಜ್ಞಾನ ಮಾದರಿ ಸ್ಪರ್ಧೆ, ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿದ ಕಡಂದಲೆ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷರಾದ ಲ. ಸತೀಶ್ ಪ್ರಭು  (Belman) ಬೆಳ್ಮಣ್‌ : ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ವಿಜ್ಞಾನ ಮಾದರಿಗಳ ಸ್ಷರ್ಧೆ ಹಾಗೂ ಪ್ರದರ್ಶನ ಕಾರ್ಯಕ್ರಮವನ್ನು ನಡೆಯಿತು.     ಮುಂಡ್ಕೂರು ಕಡಂದಲೆ ಲಯನ್ಸ್ ಕ್ಲಬ್ ನ ಪೂರ್ವಾಧ್ಯಕ್ಷರಾದ ಲ. ಸತೀಶ್ ಪ್ರಭು  ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.     ಮೂಡಬಿದ್ರೆ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಮೋಹನ್ ಕುಮಾರ್ […]

(Belman) ಬೆಳ್ಮಣ್‌ : ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ವಿಜ್ಞಾನ ಮಾದರಿಗಳ ಸ್ಷರ್ಧೆ ಹಾಗೂ ಪ್ರದರ್ಶನ ಕಾರ್ಯಕ್ರಮವನ್ನು ನಡೆಯಿತು.

    ಮುಂಡ್ಕೂರು ಕಡಂದಲೆ ಲಯನ್ಸ್ ಕ್ಲಬ್ ನ ಪೂರ್ವಾಧ್ಯಕ್ಷರಾದ ಲ. ಸತೀಶ್ ಪ್ರಭು  ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಮೂಡಬಿದ್ರೆ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಮೋಹನ್ ಕುಮಾರ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಸುತ್ತ ದಿನಗಳಲ್ಲಿ ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆಸಕ್ತಿ, ಒಲವು ಹೊಂದಿರಬೇಕು.ಇಂತಹ ಸ್ಷರ್ಧೆಯು ಮಕ್ಕಳಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶನ ಮಾಡಲು ಪೂರಕವಾಗಲಿದೆ ಎಂದರು.

    ಸಂಸ್ಥೆಯ  ಸಂಚಾಲಕ ಲ. ಕೆ ಸತ್ಯಶಂಕರ್ ಶೆಟ್ಟಿ ಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

    ವೇದಿಕೆಯಲ್ಲಿ ಮುಂಡ್ಕೂರು ಕಡಂದಲೆ ಲಯನ್ಸ್‌ ಕ್ಲಬ್  ಅಧ್ಯಕ್ಷ ಲ. ಯಶವಂತ್ ಆಚಾರ್ಯ, ತೀರ್ಪುಗಾರರಾದ ಸುಬ್ರಹ್ಮಣ್ಯ, ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ಸಂಪತ್ ರಾಜ್, ಮಹಾವೀರ ಕಾಲೇಜಿನ ಉಪನ್ಯಾಸಕಿ  ಚೈತ್ರಾ, ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಪ್ರದ್ಯುಮ್ನ ಮೂರ್ತಿ, ಮನೋಜ್ , ಸಂಸ್ಥೆಯ ಮುಖ್ಯ ಶಿಕ್ಷಕರಾದ ಗೌರವ್ ಆರ್ ಕೆ ಉಪಸ್ಥಿತರಿದ್ದರು.

   ಪ್ರತಿಮಾ ಸ್ವಾಗತಿಸಿದರು. ಮಂಜುವಾಣಿ ಕಾರ್ಯಕ್ರಮ ನಿರೂಪಿಸಿದರು. ವಂದಿತಾ ರೈ ಧನ್ಯವಾದವಿತ್ತರು.

Leave a comment

Your email address will not be published. Required fields are marked *

eMedia Kannada  @2025. All Rights Reserved.