ಸಮಾಜ ಸೇವಕ ಆಸೀಫ್ ಆಪದ್ಬಾಂಧವರಿಗೆ ಬಸವಶ್ರೀ ರಾಷ್ಟ್ರೀಯ ಪುರಸ್ಕಾರ
(Bengaluru) ಬೆಂಗಳೂರು: ಬೆಂಗಳೂರಿನ ಜ್ಞಾನ ಮಂದಾರ ಶಿಕ್ಷಣ ಮತ್ತು ಸಾಂಸ್ಕೃತಿಕ ಟ್ರಸ್ಟ್ ನೀಡುವ ಬಸವಶ್ರೀ ರಾಷ್ಟ್ರೀಯ ಪುರಸ್ಕಾರಕ್ಕೆ ಮೈಮುನಾ ಫೌಂಡೇಶನ್ ಸಂಸ್ಥಾಪಕ ಸಮಾಜ ಸೇವಕ ಆಸೀಫ್ ಆಪದ್ಬಾಂಧವ ಆಯ್ಕೆಯಾಗಿದ್ದಾರೆ.
ಆಸೀಫ್ ಅವರು ಮೈಮುನಾ ಫೌಂಡೇಶನ್ ಸಂಸ್ಥೆಯನ್ನು ಸ್ಥಾಪಿಸಿ ಸಾಮಾಜಿಕ ಸೇವೆಯಲ್ಲಿ ಹಲವಾರು ಸಮಯದಿಂದ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮಹಿಯದ್ದೀನ್ ಬ್ಯಾರಿ ಹಾಗೂ ಮೈಮುನ ದಂಪತಿಗಳ ಸುಪುತ್ರರಾಗಿ ಸಂಜನಿಸಿದ ಆಸಿಫ್, ಸಮಾಜದ ಎಲ್ಲಾ ಸ್ತರಗಳಲ್ಲಿಯ ಸೇವೆ ಸವಿಸ್ಮರಣೀಯ. ಆಸಿಫ್‌ರವರು ಆಪದ್ಬಾಂಧವ ಹೆಸರಿನಿಂದಲೇ ಪ್ರಖ್ಯಾತರು.
ತನ್ನ ತಾಯಿಯ ಸ್ಮರಣಾರ್ಥವಾಗಿ ಮೈಮುನಾ ಫೌಂಡೇಶನ್ ಸಂಸ್ಥೆಯನ್ನು ಹುಟ್ಟು ಹಾಕಿ, ಅದರ ಸಹಭಾಗಿತ್ವದ ಆಪತ್ಬಾಂಧವ ಸೈಕೋ ರಿಹ್ಯಾಬಿಲಿಟೇಶನ್ ಸೆಂಟರ್ ಸಮಾಜದ ನಾಗರೀಕರ ಒಡಲನ್ನ ಗೆದ್ದಿರುತ್ತದೆ.
ಪ್ರಪಂಚವನ್ನೇ ಕಾಡಿದ ಮಹಾಮಾರಿ ಕೊರೋನ ಸಂದರ್ಭದಲ್ಲಿನ ಸೇವೆ ಶ್ಲಾಘನೀಯ. ಸುಮಾರು 970 ಮೃತ ದೇಹಗಳನ್ನು ಸಾಗಿಸಿದ ಧನ್ಯತೆ ನಿಜವಾಗಿಯೂ ಸ್ಮರಣೀಯ.
2020 ಬ್ಯಾರಿ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊಂದಿಗೆ ಭಾರತದ ಪ್ರತಿಷ್ಠ ಆಂಗ್ಲ ಪತ್ರಿಕಾ ಸಂಸ್ಥೆ ಡೆಕ್ಕನ್ ಹೆರಾಲ್ಡ್ 2021 ಚೇಂಜ್ ಮೇಕರ್ ಪ್ರಶಸ್ತಿ, ಸಹಿತ ಹತ್ತು ಹಲವು ಪ್ರಶಸ್ತಿಗಳನ್ನು ಆಸಿಫ್ ಪಡೆದಿದ್ದಾರೆ.
ತುಮಕೂರಿನ ಕನ್ನಡ ಭವನದಲ್ಲಿ ಏಪ್ರಿಲ್ 7ರಂದು ನಡೆಯುವ ಕನ್ನಡ ಕಲಾ ಪ್ರತಿಭೋತ್ಸವ-2024 ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

