• Home  
  • ಸಮಾಜ ಸೇವಕ ಕರಂದಾಡಿ ಲೀಲಾಧರ ಶೆಟ್ಟಿ ಮತ್ತು ಅವರ ಪತ್ನಿ ವಸುಂಧರಾ ಶೆಟ್ಟಿಯವರು ಪಂಚಭೂತದಲ್ಲಿ ಲೀನ,  ಅಂತಿಮ ವಿದಾಯ(A Final Farewell Leeladhara Shetty and Vausndara Shetty)
- ಅಪರಾಧ

ಸಮಾಜ ಸೇವಕ ಕರಂದಾಡಿ ಲೀಲಾಧರ ಶೆಟ್ಟಿ ಮತ್ತು ಅವರ ಪತ್ನಿ ವಸುಂಧರಾ ಶೆಟ್ಟಿಯವರು ಪಂಚಭೂತದಲ್ಲಿ ಲೀನ,  ಅಂತಿಮ ವಿದಾಯ(A Final Farewell Leeladhara Shetty and Vausndara Shetty)

Share: ಸಮಾಜ ಸೇವಕ ಕರಂದಾಡಿ ಲೀಲಾಧರ ಶೆಟ್ಟಿ ಮತ್ತು ಅವರ ಪತ್ನಿ ವಸುಂಧರಾ ಶೆಟ್ಟಿಯವರು ಪಂಚಭೂತದಲ್ಲಿ ಲೀನ, ಅಂತಿಮ ವಿದಾಯ (Kaup) ಕಾಪು : ಮಂಗಳವಾರ ರಾತ್ರಿ ಆತ್ಮಹತ್ಯೆಗೆ ಶರಣಾದ ಕಾಪುವಿನ ಪ್ರಖ್ಯಾತ ನಾಟಕ ಸಂಸ್ಥೆ “ರಂಗತರಂಗ” ದ (Ranga Tharanga)    ಸ್ಥಾಪಕ, ಖ್ಯಾತ ನಟ, ಸಮಾಜ ಸೇವಕ ಕರಂದಾಡಿ ಲೀಲಾಧರ ಶೆಟ್ಟಿ ಮತ್ತು ಅವರ ಪತ್ನಿ ವಸುಂಧರಾ ಶೆಟ್ಟಿಯವರು ಬುಧವಾರ ಸಂಜೆ ಕುಟುಂಬಿಕರ, ಗಣ್ಯರ, ಸಾವಿರಾರು ಅಭಿಮಾನಿಗಳ ಅಶ್ರು ತರ್ಪಣದೊಂದಿಗೆ ತಮ್ಮ ಮನೆ ಹಿಂಬದಿಯ ಗದ್ದೆಯಲ್ಲಿ […]

ಸಮಾಜ ಸೇವಕ ಕರಂದಾಡಿ ಲೀಲಾಧರ ಶೆಟ್ಟಿ ಮತ್ತು ಅವರ ಪತ್ನಿ ವಸುಂಧರಾ ಶೆಟ್ಟಿಯವರು ಪಂಚಭೂತದಲ್ಲಿ ಲೀನ, ಅಂತಿಮ ವಿದಾಯ

(Kaup) ಕಾಪು : ಮಂಗಳವಾರ ರಾತ್ರಿ ಆತ್ಮಹತ್ಯೆಗೆ ಶರಣಾದ ಕಾಪುವಿನ ಪ್ರಖ್ಯಾತ ನಾಟಕ ಸಂಸ್ಥೆ “ರಂಗತರಂಗ” ದ (Ranga Tharanga)    ಸ್ಥಾಪಕ, ಖ್ಯಾತ ನಟ, ಸಮಾಜ ಸೇವಕ ಕರಂದಾಡಿ ಲೀಲಾಧರ ಶೆಟ್ಟಿ ಮತ್ತು ಅವರ ಪತ್ನಿ ವಸುಂಧರಾ ಶೆಟ್ಟಿಯವರು ಬುಧವಾರ ಸಂಜೆ ಕುಟುಂಬಿಕರ, ಗಣ್ಯರ, ಸಾವಿರಾರು ಅಭಿಮಾನಿಗಳ ಅಶ್ರು ತರ್ಪಣದೊಂದಿಗೆ ತಮ್ಮ ಮನೆ ಹಿಂಬದಿಯ ಗದ್ದೆಯಲ್ಲಿ ಪಂಚ ಭೂತಗಳಲ್ಲಿ ಲೀನವಾದರು.

ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ಬಳಿಕ ಕಾಪು ರಾಹೆ ೬೬ರ ಬಳಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿನಿಂದ ಬೃಹತ್‌ ಮೆರವಣಿಗೆಯಲ್ಲಿ ಕರಂದಾಡಿ ಶ್ರೀ ರಾಮ ಪ್ರಾಥಮಿಕ ಶಾಲಾ ಮೈದಾನದವರೆಗೆ ಮೃತದೇಹಗಳನ್ನು ಕೊಂಡೊಯ್ಯಲಾಯಿತು.

ಶ್ರೀ ರಾಮ ಪ್ರಾಥಮಿಕ ಶಾಲಾ ಮೈದಾನದಲ್ಲಿ ದಿವಂಗತ ಲೀಲಾಧರ ಶೆಟ್ಟಿ ಮತ್ತು ಅವರ ಪತ್ನಿ ದಿವಂಗತ ವಸುಂಧರಾ ಶೆಟ್ಟಿಯವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು.

ಲೀಲಾಧರ ಶೆಟ್ಟಿಯವರ ಸಾವಿರಾರು ಅಭಿಮಾನಿಗಳು ಅಶ್ರುತರ್ಪಣದೊಂದಿಗೆ ಅಂತಿಮ ನಮನ ಸಲ್ಲಿಸಿದರು.

 ಲೀಲಾಧರ ಶೆಟ್ಟಿಯವರ ಮನೆ ಹಿಂಬದಿಯ ಗದ್ದೆಯಲ್ಲಿ ದಂಪತಿಗಳ ಮೃತ ದೇಹಕ್ಕೆ ಕುಟುಂಬಿಕರ, ಗಣ್ಯರ ಸಮ್ಮುಖ ಅಂತಿಮ ನಮನ ಸಲ್ಲಿಸಿ, ಅಗ್ನಿ ಸ್ಪರ್ಶ ಮಾಡಲಾಯಿತು.

ಕಾಪು ಪೇಟೆ ಬಂದ್:‌ ಲೀಲಾಧರ ಶೆಟ್ಟಿ ಮತ್ತು ಅವರ ಪತ್ನಿ   ವಸುಂಧರಾ ಶೆಟ್ಟಿಯವರ ನಿಧನದ ಪ್ರಯುಕ್ತ ಕಾಪು ಪೇಟೆಯ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಮಾಲೀಕರು ಸ್ವಯಂ ಪ್ರೇರಿತರಾಗಿ  ಬಂದ್‌ ಮಾಡಿದ್ದರು.

ಈ ಸಂದರ್ಭ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ (Kaup mla Suresh Shetty Gurme), ಮಾಜಿ ಸಚಿವರಾದ ವಿನಯಕುಮಾರ್‌ ಸೊರಕೆ EX Minister Vinaykumar Sorake), ಮಾಜಿ ಶಾಸಕ ಲಾಲಾಜಿ ಆರ್‌ ಮೆಂಡನ್‌ (EX MLA Lalaji Memdon), ಹಿಂದೂ ಮುಖಂಡ ಮಹೇಶ್‌ ಶೆಟ್ಟಿ ತಿಮರೋಡಿ (Mahesh Shetty Timarody), ಕಾಪು ಹೊಸ ಮಾರಿಗುಡಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್‌ ಹೆಗ್ಡೆ ಕಲ್ಯ, ಹಳೆ ಮಾರಿಯಮ್ಮ ದೇಗುಲದ ಮೊಕ್ತೇಸರ ಪ್ರಸಾದ್‌ ಶೆಣೈ, ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇಗುಲದ ಆಡಳಿತಾಧಿಕಾರಿ ಅರುಣ್ ಕುಮಾರ್‌ ಬಿಕೆ, ಕಾಪು ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ, ಉದ್ಯಮಿಗಳು, ಲೀಲಾಧರ ಶೆಟ್ಟಿಯವರ ಸಾವಿರಾರು ಅಭಿಮಾನಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.