• Home  
  •   ಸಮುದ್ರದಲ್ಲಿ ಮುಳುಗುತ್ತಿದ್ದ ಬೋಟ್‌; ಕೋಸ್ಟ್ ಗಾರ್ಡ್ ಕಾರ್ಯಾಚರಣೆ, 31 ಮೀನುಗಾರರ ರಕ್ಷಣೆ (Coast Guard operation rescues 31 fishermen)
- PROBLEMS - ಅಪಘಾತ

  ಸಮುದ್ರದಲ್ಲಿ ಮುಳುಗುತ್ತಿದ್ದ ಬೋಟ್‌; ಕೋಸ್ಟ್ ಗಾರ್ಡ್ ಕಾರ್ಯಾಚರಣೆ, 31 ಮೀನುಗಾರರ ರಕ್ಷಣೆ (Coast Guard operation rescues 31 fishermen)

Share:   ಸಮುದ್ರದಲ್ಲಿ ಮುಳುಗುತ್ತಿದ್ದ ಬೋಟ್‌; ಕೋಸ್ಟ್ ಗಾರ್ಡ್ ಕಾರ್ಯಾಚರಣೆ, 31 ಮೀನುಗಾರರ ರಕ್ಷಣೆ   ಬೋಟನ್ನು ಹೊನ್ನಾವರ ಬಂದರಿಗೆ ಎಳೆದು ತರುವಲ್ಲಿ ಕೋಸ್ಟ್ ಗಾರ್ಡ್ ಯಶಸ್ವಿ (Honnavara) ಹೊನ್ನಾವರ : ಸಮುದ್ರದಲ್ಲಿ 11 ದಿನಗಳಿಂದ ತೇಲಾಡುತ್ತಿದ್ದ ಗೋವಾ ಮೂಲದ ಮೀನುಗಾರಿಕಾ ಬೋಟನ್ನು ಮತ್ತು ಅದರಲ್ಲಿದ್ದ 31ಮೀನುಗಾರರನ್ನು ಮಂಗಳೂರು ಕೋಸ್ಟ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಕೇರಳ ಮೂಲದ ಐಎಫ್‌ಬಿ ಸಂತ್ ಆಂಟನ್-I ಬೋಟ್‌ ಮೀನುಗಾರಿಕೆಗೆ ತರಳಿದ್ದ ಸಂದರ್ಭ ಬೋಟಿನ ಸ್ಟೀರಿಂಗ್ ಗೇರ್ ದೋಷದಿಂದಾಗಿ ನಿಯಂತ್ರಣ ತಪ್ಪಿದೆ. […]

(Honnavara) ಹೊನ್ನಾವರ : ಸಮುದ್ರದಲ್ಲಿ 11 ದಿನಗಳಿಂದ ತೇಲಾಡುತ್ತಿದ್ದ ಗೋವಾ ಮೂಲದ ಮೀನುಗಾರಿಕಾ ಬೋಟನ್ನು ಮತ್ತು ಅದರಲ್ಲಿದ್ದ 31ಮೀನುಗಾರರನ್ನು ಮಂಗಳೂರು ಕೋಸ್ಟ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಕೇರಳ ಮೂಲದ ಐಎಫ್‌ಬಿ ಸಂತ್ ಆಂಟನ್-I ಬೋಟ್‌ ಮೀನುಗಾರಿಕೆಗೆ ತರಳಿದ್ದ ಸಂದರ್ಭ ಬೋಟಿನ ಸ್ಟೀರಿಂಗ್ ಗೇರ್ ದೋಷದಿಂದಾಗಿ ನಿಯಂತ್ರಣ ತಪ್ಪಿದೆ.

   ಮಂಗಳೂರಿನ ಕರಾವಳಿಯಿಂದ ಸುಮಾರು 100 ನಾಟಿಕಲ್ ಮೈಲು (ಸುಮಾರು 185 ಕಿ.ಮೀ) ದೂರದಲ್ಲಿ ಈ ಘಟನೆ ಘಟಿಸಿದೆ.   

   ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಮಧ್ಯೆಯೂ, ಐಸಿಜಿಎಸ್ ಕಸ್ತೂರ್ಬಾ ಗಾಂಧಿ ನೌಕೆ, ಕೊಚ್ಚಿಯಿಂದ ಕರಾವಳಿ ರಕ್ಷಕ ದಳದ ಡೊರ್ನಿಯರ್ ವಿಮಾನ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿದೆ.

  ಕರಾವಳಿ ರಕ್ಷಕ ದಳದ ಸಿಬ್ಬಂದಿಗಳು ಬೋಟನ್ನು ಮತ್ತು ಮೀನುಗಾರರನ್ನು ತಾಂತ್ರಿಕ ಮತ್ತು ಲಾಜಿಸ್ಟಿಕ್ ನೆರವು ಪಡೆದು ಹೊನ್ನಾವರ ಮೀನುಗಾರಿಕಾ ಬಂದರಿಗೆ ಎಳೆದು ತರುವಲ್ಲಿ ಯಶಸ್ವಿಯಾಗಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.