ಸಾರ್ವಜನಿಕ ಸ್ಥಳದಲ್ಲಿ ಅಂದರ್ – ಬಾಹರ್, ಪೊಲೀಸ್ ದಾಳಿ, ನಾಲ್ವರು ಅಂದರ್
ಕುಂದಾಪುರ ಕಸಬಾ ಗ್ರಾಮದ ಮದ್ದುಗುಡ್ಡೆ ಬಳಿ ಇಸ್ಪೀಟ್ ಜುಗಾರಿ
(Kundapura) ಕುಂದಾಪುರ: ಕುಂದಾಪುರ ಕಸಬಾ ಗ್ರಾಮದ ಮದ್ದುಗುಡ್ಡೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಟದ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಮಿಥುನ ಖಾರ್ವಿ(35), ಚಂದ್ರ ಪೂಜಾರಿ(45), ರೆಹಮತ್(51) ಮತ್ತು ನಿರಂಜನ್ ನಾಯಕ್ (39) ಬಂಧಿತರು. ಬಂಧಿತರಿಂದ ನಗದು ರೂ. 2660 ವಶಪಡಿಸಿಕೊಳ್ಳಲಾಗಿದೆ.
ಕಿರಣ, ಹರೀಶ್, ಮಂಜುನಾಥ ಎಂಬವರು ಪರಾರಿಯಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 131/2025 ಕಲಂ: 87 KP ACT ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

