• Home  
  • ಸಾಸ್ತಾನದಿಂದ ಕುಂದಾಪುರದವರೆಗೆ ಬಿಜೆಪಿಯಿಂದ ಬೃಹತ್ ವಾಹನ ಜಾಥಕ್ಕೆ ಚಾಲನೆ (Santhana – Kundapura BJP’s Vehicle Rally)
- ರಾಜಕೀಯ

ಸಾಸ್ತಾನದಿಂದ ಕುಂದಾಪುರದವರೆಗೆ ಬಿಜೆಪಿಯಿಂದ ಬೃಹತ್ ವಾಹನ ಜಾಥಕ್ಕೆ ಚಾಲನೆ (Santhana – Kundapura BJP’s Vehicle Rally)

Share: ಸಾಸ್ತಾನದಿಂದ ಕುಂದಾಪುರದವರೆಗೆ   ಬಿಜೆಪಿಯಿಂದ ಬೃಹತ್ ವಾಹನ ಜಾಥಕ್ಕೆ ಚಾಲನೆ   (Kundapura) ಕುಂದಾಪುರ; ಪ್ರಧಾನಿ ನರೇಂದ್ರ ಮೋದಿ ಅಲೆಯನ್ನು ಯಾರಿಂದಲೂ ತಡೆಯಲು ಸಾದ್ಯವಿಲ್ಲ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಪ್ರಮೋದ್ ಮಧ್ವರಾಜ್ (EX Minister Pramod Madhvaraj) ಹೇಳಿದರು. ಅವರು ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ (Annamalai) ಆಗಮನದ ಹಿನ್ನಲೆಯಲ್ಲಿ ಸಾಸ್ತಾನದ ಮಾಬುಕಳದಿಂದ ಕುಂದಾಪುರದವರೆಗೆ  ಆಯೋಜಿಸಲಾದ ಬೃಹತ್ ವಾಹನ ಜಾಥಾಕ್ಕೆ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದರು. ಅವರು ಮಾತನಾಡಿ, ಇಲ್ಲಿನ […]

ಸಾಸ್ತಾನದಿಂದ ಕುಂದಾಪುರದವರೆಗೆ   ಬಿಜೆಪಿಯಿಂದ ಬೃಹತ್ ವಾಹನ ಜಾಥಕ್ಕೆ ಚಾಲನೆ  

(Kundapura) ಕುಂದಾಪುರ; ಪ್ರಧಾನಿ ನರೇಂದ್ರ ಮೋದಿ ಅಲೆಯನ್ನು ಯಾರಿಂದಲೂ ತಡೆಯಲು ಸಾದ್ಯವಿಲ್ಲ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಪ್ರಮೋದ್ ಮಧ್ವರಾಜ್ (EX Minister Pramod Madhvaraj) ಹೇಳಿದರು.

ಅವರು ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ (Annamalai) ಆಗಮನದ ಹಿನ್ನಲೆಯಲ್ಲಿ ಸಾಸ್ತಾನದ ಮಾಬುಕಳದಿಂದ ಕುಂದಾಪುರದವರೆಗೆ  ಆಯೋಜಿಸಲಾದ ಬೃಹತ್ ವಾಹನ ಜಾಥಾಕ್ಕೆ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದರು.

ಅವರು ಮಾತನಾಡಿ, ಇಲ್ಲಿನ ಈ ವಾಹನ ಜಾಥಾದ ಯಶಸ್ಸಿನ ಹಿಂದೆ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿಯವರಿದ್ದಾರೆ. ಈ ದಿಸೆಯಲ್ಲಿ  ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಬಾರಿ ಅಂತರದಲ್ಲಿ ಜಯಶಾಲಿಯಾಗಲಿದ್ದಾರೆ. ಭಾರತೀಯ ಜನತಾ ಪಕ್ಷ ಏರ್ಪಡಿಸಿದ ಈ ವಾಹನ ಜಾಥ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಅಂತರದಲ್ಲಿ ಯಶಸ್ಸು ದೊರಕಲಿದೆ ಎಂದರು.   

ವಾಹನ ಜಾಥದಲ್ಲಿ ಮೊಳಗಿದ ಮೋದಿ ಘೋಷಣೆ

ವಾಹನ ಜಾಥ ಕಾರ್ಯಕ್ರಮಕ್ಕೂ ಮುಂಚೆಯೇ ಸೇರಿದ್ದ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಘೋಷಣೆಯನ್ನು ಕೂಗಿದರಲ್ಲದೆ ಸಂಚರಿಸುತ್ತಿದ್ದ ವಾಹನ ಜಾಥಾದಲ್ಲೂ ಮೋದಿ ಘೋಷಣೆ ವಿಜೃಂಭಿಸಿತು.

ಇದೇ ಮೊದಲು ಬೃಹತ್ ವಾಹನ ಜಾಥ

ಇದೇ ಮೊದಲೆಂಬಂತೆ ಕುಂದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಾಸ್ತಾನದಲ್ಲಿ ಐದು ಸಾವಿರಕ್ಕೂ ಅಧಿಕ ಬೈಕ್, ವಾಹನಗಳು ಸೇರಿದ್ದು ನೆರೆದಿದ್ದರವನ್ನು ಪುಳಕಿತಗೊಳಿಸಿತು.

ಈ ಸಂದರ್ಭದಲ್ಲಿ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ(MLA Kiran Khodgi), ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್, ಮುಖಂಡರಾದ ದಿನಕರ ಶೆಟ್ಟಿ ಹೆರ್ಗೆ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಪ್ರಥ್ವಿರಾಜ್ ಶೆಟ್ಟಿ, ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ, ಕಾರ್ಯದರ್ಶಿ ಸುಧೀರ್ ಎಸ್ ಪಿಎಸ್,  ಸತೀಶ್ ವಕ್ವಾಡಿ, ಮಾಜಿ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ರಾಜ್ಯ ಬಿಜೆಪಿ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಐರೋಡಿ ವಿಠ್ಠಲ ಪೂಜಾರಿ ಮತ್ತಿತರರು ಇದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.