• Home  
  • ಸೋಮೇಶ್ವರ, ಉಚ್ಚಿಲ : ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಮೂವರು ಯುವತಿಯರ ಧಾರುಣ ಸಾವು (Someshwara, Uchila: Three young women drowned in the swimming pool)
- ಅಪರಾಧ

ಸೋಮೇಶ್ವರ, ಉಚ್ಚಿಲ : ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಮೂವರು ಯುವತಿಯರ ಧಾರುಣ ಸಾವು (Someshwara, Uchila: Three young women drowned in the swimming pool)

Share: ಸೋಮೇಶ್ವರ, ಉಚ್ಚಿಲ : ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಮೂವರು ಯುವತಿಯರ ಧಾರುಣ ಸಾವು  (Someshwara, Uchila) ಉಚ್ಚಿಲ : ಖಾಸಗಿ ರೆಸಾರ್ಟ್‌ವೊಂದರ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರದಲ್ಲಿ ಇಂದು ಬೆಳಗ್ಗೆ ನಡೆದಿರುವುದು ವರದಿಯಾಗಿದೆ.  ಮೃತರನ್ನು ಕೀರ್ತನಾ ಎನ್ (21) ಪಾರ್ವತಿ ಎಸ್ (20), ಹಾಗೂ ನಿಶಿತಾ ಎಂ.ಡಿ.(21) ಎಂದು ಗುರುತಿಸಲಾಗಿದೆ. ಈ ಮೂವರೂ ಮೈಸೂರು ಮೂಲದವರೆಂದು  ಪೊಲೀಸರು ತಿಳಿಸಿದ್ದಾರೆ. ಸೋಮೇಶ್ವರ ಗ್ರಾಮದ ಬಟ್ಟಪ್ಪಾಡಿ ಅಡ್ಡರಸ್ತೆ […]

ಸೋಮೇಶ್ವರ, ಉಚ್ಚಿಲ : ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಮೂವರು ಯುವತಿಯರ ಧಾರುಣ ಸಾವು

 (Someshwara, Uchila) ಉಚ್ಚಿಲ : ಖಾಸಗಿ ರೆಸಾರ್ಟ್‌ವೊಂದರ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರದಲ್ಲಿ ಇಂದು ಬೆಳಗ್ಗೆ ನಡೆದಿರುವುದು ವರದಿಯಾಗಿದೆ.

 ಮೃತರನ್ನು ಕೀರ್ತನಾ ಎನ್ (21) ಪಾರ್ವತಿ ಎಸ್ (20), ಹಾಗೂ ನಿಶಿತಾ ಎಂ.ಡಿ.(21) ಎಂದು ಗುರುತಿಸಲಾಗಿದೆ.

ಈ ಮೂವರೂ ಮೈಸೂರು ಮೂಲದವರೆಂದು  ಪೊಲೀಸರು ತಿಳಿಸಿದ್ದಾರೆ. ಸೋಮೇಶ್ವರ ಗ್ರಾಮದ ಬಟ್ಟಪ್ಪಾಡಿ ಅಡ್ಡರಸ್ತೆ ಪೆರಿಬೈಲ್ ಎಂಬಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಈ ದುರಂತ ಸಂಭವಿಸಿದೆ.

 ಮೈಸೂರಿನ ಈ ಮೂವರು ಯುವತಿಯರು ಶನಿವಾರ ರೆಸಾರ್ಟ್ ಗೆ ಆಗಮಿಸಿದ್ದರು. ಭಾನುವಾರ ಬೆಳಿಗ್ಗೆ ರೆಸಾರ್ಟ್ ಮುಂಭಾಗದಲ್ಲಿರುವ ಸ್ವಿಮ್ಮಿಂಗ್ ಪೂಲ್ ನಲ್ಲಿ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ತೆರಳಿದ್ದು, ತನಿಖೆ ಮುಂದುವರೆದಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.