ಹರೇಕೃಷ್ಣ ಭಕ್ತಿ ಕೇಂದ್ರದಿಂದ ಗೀತಾ ಜಯಂತಿ ಪ್ರಯುಕ್ತ ವಿನೂತನ ಕಾರ್ಯಕ್ರಮ
ಮಣಿಪಾಲದ ಶಾಲೆಗಳಿಗೆ ಗೀತಾಗ್ರಂಥ ಕೊಡುಗೆ
(Manipala)ಮಣಿಪಾಲ: ಮಣಿಪಾಲ ಹರೇಕೃಷ್ಣ ಭಕ್ತಿ ಕೇಂದ್ರದ ವತಿಯಿಂದ ಗೀತಾ ಜಯಂತಿ ಪ್ರಯುಕ್ತ ಸುತ್ತಮುತ್ತಲಿನ ವಿವಿಧ ಶಾಲೆ ಕಾಲೇಜುಗಳ ಗ್ರಂಥಾಲಯಕ್ಕೆ ಸನಾತನ ಗ್ರಂಥ ಭಗವದ್ ಗೀತೆಯನ್ನು ಕೊಡುಗೆಯಾಗಿ ನೀಡಿ, ಅದನ್ನು ಆಸಕ್ತ ವಿದ್ಯಾರ್ಥಿಗಳು ಓದಿ ತಮ್ಮ ಮುಂದಿನ ಜೀವನ ಉಜ್ವಲ ಹಾಗೂ ಆಧ್ಯಾತ್ಮಿಕಗೊಳಿಸುವಂತೆ ಮನವಿ ಮಾಡಲಾಗಿದೆ.
ಅದರಂತೆ ಇಲ್ಲಿನ ಕೃಷ್ಣಪ್ಪ ಸಮಂತ ಸ್ಮಾರಕ ಸರಕಾರಿ ಶಾಲೆಯ ಗ್ರಂಥಾಲಯ ಹಾಗೂ ಶಾಲೆಯ ಎಲ್ಲಾ ಶಿಕ್ಷಕರಿಗೂ ಭಗವದ್ಗೀತೆಯನ್ನು ಉಚಿತವಾಗಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಮೇಶ್ ಕಾಮತ್ ಮಾತನಾಡಿ, ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗದು ಎಂಬ ಗಾದೆಯಂತೆ, ಎಳೆಯ ವಯಸ್ಸಿನಲ್ಲಿಯೇ ಗೀತೆಯನ್ನು ಮನನ ಮಾಡುವುದರಿಂದ ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರ, ಮೌಲ್ಯಗಳು ಬೆಳೆಯತ್ತವೆ. ಮುಂದೆ ಪ್ರೀತಿ ಸೌಹಾರ್ದತೆಯಿಂದ ಸಮಾಜದಲ್ಲಿ ಬದುಕಬಹುದು ಎಂದರು.
ಗೀತೆ ಗ್ರಂಥಗಳ ಧಾನಿಗಳಾದ ಸತೀಶ್ ಸಾವಂತ, ವತ್ಸಲಾ ದಿನೇಶ್ ಸಾವಂತ್, ಚೇತನ ಗಣೇಶ , ಶಾಲೆಯ ಮುಖ್ಯ ಶಿಕ್ಷಕಿ ಗ್ರೇಸಿ ರೆಬೆಲ್ಲೊ, ಹರೇ ಕೃಷ್ಣ ಸಂಸ್ಥೆಯ ಡಾ. ವಿಶಾಲ, ಅಭಯ ಚರಣ ಹಾಗೂ ಉಮೇಶ್ ಕಾಮತ್ ಅವರು ಉಪಸ್ಥಿತರಿದ್ದರು.
ಶಿಕ್ಷಕಿ ಸುಮನಾ ಅವರು ಕಾರ್ಯಕ್ರಮ ನಿರ್ವಹಿಸಿದರು.

