ಹೆಜಮಾಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
(Hejamady) ಹೆಜಮಾಡಿ: ಲಯನ್ಸ್ ಕ್ಲಬ್, ಲಿಯೋ ಕ್ಲಬ್, ರೋಲ್ಫಿ ಡಿಕೋಸ್ತರವರ ಆಪ್ತ ಬಳಗ ಹಾಗೂ ಮಂಗಳೂರು ಎಜೆ ಮೆಡಿಕಲ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹೆಜಮಾಡಿ ತೈಬಾ ಸಂಕಿರಣದ ನೂತನ ಮಳಿಗೆಯಲ್ಲಿ ನಡೆಯಿತು
ಕಾರ್ಯಕ್ರಮವನ್ನು ಕ.ಸಾ.ಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಉದ್ಘಾಟಿಸಿದರ.
ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಶಿಬಿರಗಳ ಮೂಲಕ ಸೇವಾ ಸಂಸ್ಥೆಗಳ ಜನಸೇವೆ ಅಭಿನಂದನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ರೋಲ್ಫಿ ಡಿಕೋಸ್ತ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಹೆಜಮಾಡಿ ಗ್ರಾ.ಪಂ. ಅಧ್ಯಕ್ಷೆ ರೇಷ್ಮಾ ಮೆಂಡನ್, ವೈದ್ಯರಾದ ಡಾ. ಕವಿತಾ ಡಿಸೋಜಾ, ಹಿರಿಯ ನಾಗರಿಕರಾದ ಶೇಕಬ್ಬ ಕೋಟೆ, ಅಬ್ದುಲ್ಲಾ ಹಾಜಿ, ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಸುಜಿತ್ ಸಾಲ್ಯಾನ್, ಶೀತಲ್ ಸುಶೀಲ್, ಉದಯ ಅಮೀನ್ ಮಟ್ಟು, ಸುಶೀಲ್ ಬಂಗೇರಾ, ಲಿಯೋ ಉಪಾಧ್ಯಕ್ಷೆ ಶೃದ್ಧಾ ಕೋಟ್ಯಾನ್, ಸಿರಾಜ್ ತೈಬಾ ಮಾರ್ಕೆಟ್, ವೈದ್ಯಕೀಯ ಶಿಬಿರದ ಸಂಯೋಜಕ ಉದಯಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ನಿತಿನ್ ನಿರೂಪಿಸಿದರು. ಉದಯ ಅಮೀನ್ ವಂದಿಸಿದರು.
ಬಳಿಕ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

