ಹೆಜಮಾಡಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ನೌಕರರ ಒಕ್ಕೂಟದ ಕ್ರಿಕೆಟ್ ಪಂದ್ಯಾಟ
ಬ್ಯಾಂಕಿನ ಹಿರಿಯ ಶಾಖಾ ನಿರೀಕ್ಷಕ ಪ್ರಭೋದ್ ಚಂದ್ರ ಹೆಜಮಾಡಿ ಯವರಿಗೆ ಸನ್ಮಾನ
(Hejamady) ಹೆಜಮಾಡಿ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೌಕರರ ಒಕ್ಕೂಟ ಮಂಗಳೂರು ಇದರ ವತಿಯಿಂದ ಹೆಜಮಾಡಿಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಲೀಗ್ ಪಂದ್ಯಾಟ ಜರುಗಿತು.
12 ತಂಡಗಳು ಕ್ರಿಕೆಟ್ ಲೀಗ್ ಪಂದ್ಯಾಟ ಭಾಗವಹಿಸಿದ್ದವು.
ಈ ಸಂಧರ್ಭದಲ್ಲಿ ಕ್ರಿಕೆಟ್ ಪಂದ್ಯಾಟ ಸುಗಮವಾಗಿ ನಡೆಸಲು ಸಹಕರಿಸಿದ ಬ್ಯಾಂಕಿನ ಹಿರಿಯ ಶಾಖಾ ನಿರೀಕ್ಷಕ ಪ್ರಭೋದ್ ಚಂದ್ರ ಹೆಜಮಾಡಿಯವರನ್ನು ನೌಕರರ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಕರುಣಾಕರ ದಾಸ್, ಪ್ರಧಾನ ಕಾರ್ಯದರ್ಶಿ ಜೋವಿನ್ ಪ್ರಕಾಶ್ ಡಿ ಸೋಜಾ, ಕೋಶಾಧಿಕಾರಿ ಚಂದ್ರಹಾಸ್, ಉಪಾಧ್ಯಕ್ಷ ರಾಜಾರಾಮ್ ಶೆಟ್ಟಿ, ಬ್ಯಾಂಕಿನ ಐಟಿ ಮ್ಯಾನೇಜರ್ ಸುನಿಲ್ ಕುಮಾರ್, ಸಹಾಯಕ ಮಹಾ ಪ್ರಭಂದಕ ರಾಜೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

