• Home  
  • ಪಡುಬಿದ್ರಿ ದೇಗುಲದಲ್ಲಿ ಮಹಾರುದ್ರ, ಮಹಾಗಣಪತಿ ಜಪಾನುಷ್ಟಾನ ಸಂಪನ್ನ(Maharudra and Maha Ganapati Japanushta in Padubidri temple)
- ಧಾರ್ಮಿಕ

ಪಡುಬಿದ್ರಿ ದೇಗುಲದಲ್ಲಿ ಮಹಾರುದ್ರ, ಮಹಾಗಣಪತಿ ಜಪಾನುಷ್ಟಾನ ಸಂಪನ್ನ(Maharudra and Maha Ganapati Japanushta in Padubidri temple)

Share: ಪಡುಬಿದ್ರಿ ದೇಗುಲದಲ್ಲಿ ಮಹಾರುದ್ರ, ಮಹಾಗಣಪತಿ ಜಪಾನುಷ್ಟಾನ ಸಂಪನ್ನ (ಮಾ. 21) ಪೂರ್ವ ಸಂಪ್ರದಾಯದ ವರ್ಷಾವಧಿ ರಥೋತ್ಸವದ ದಿನದಂದು ಜಪಾನುಷ್ಟಾನ (ಚಿತ್ರ ಕೃಪೆ: ರವಿ ಡಿಜಿಟಲ್ಸ್‌ ಪಡುಬಿದ್ರಿ)  (Padubidri) ಪಡುಬಿದ್ರಿ: ಸಂಕಲ್ಪಿತ ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲಿರುವ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪೂರ್ವ ಸಂಪ್ರದಾಯದ ವರ್ಷಾವಧಿ ಶ್ರೀಮನ್ಮಹಾರಥೋತ್ಸವದ ದಿನ (ಮಾ. 21) ಶನಿವಾರ ಮಹಾರುದ್ರ ಹಾಗೂ ಮಹಾಗಣಪತಿ ಜಪಾನುಷ್ಟಾನವು ಸೂರ್ಯೕೊದಯದಾರಭ್ಯ ಸೂರ್ಯಾಸ್ತದವರೆಗೆ ವಿವಿಧ ಸಂಘ, ಸಂಸ್ಥೆಗಳಿಂದ ನಡೆಯಿತು.    ಬಾಲಾಲಯದಲ್ಲಿ ಸ್ಥಿತವಾಗಿರುವ ದೈವೀ ಶಕ್ತಿಯು ಮರಳಿ ಸ್ವಸ್ಥಾನವನ್ನು […]

 (Padubidri) ಪಡುಬಿದ್ರಿ: ಸಂಕಲ್ಪಿತ ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲಿರುವ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪೂರ್ವ ಸಂಪ್ರದಾಯದ ವರ್ಷಾವಧಿ ಶ್ರೀಮನ್ಮಹಾರಥೋತ್ಸವದ ದಿನ (ಮಾ. 21) ಶನಿವಾರ ಮಹಾರುದ್ರ ಹಾಗೂ ಮಹಾಗಣಪತಿ ಜಪಾನುಷ್ಟಾನವು ಸೂರ್ಯೕೊದಯದಾರಭ್ಯ ಸೂರ್ಯಾಸ್ತದವರೆಗೆ ವಿವಿಧ ಸಂಘ, ಸಂಸ್ಥೆಗಳಿಂದ ನಡೆಯಿತು.

   ಬಾಲಾಲಯದಲ್ಲಿ ಸ್ಥಿತವಾಗಿರುವ ದೈವೀ ಶಕ್ತಿಯು ಮರಳಿ ಸ್ವಸ್ಥಾನವನ್ನು ಸೇರುವಂತಾಗಿ, ಭಕ್ತವೃಂದಕ್ಕೆ ಆತನ ಅನುಗ್ರಹ, ಆಶೀರ್ವಾದಗಳ ಸಂಕಲ್ಪದೊಂದಿಗೆ ಮಹಾರುದ್ರ ಹಾಗೂ ಮಹಾಗಣಪತಿ ಜಪಾನುಷ್ಟಾನವು   ನಡೆಯಿತು.

  ಈ ಸಂದರ್ಭ ಶ್ರೀ ದೇಗುಲದ ಆನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳ್, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ದೇವಳದ ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ, ಅರ್ಚಕರಾದ ಪದ್ಮನಾಭ ಭಟ್, ಗುರುರಾಜ ಭಟ್, ವೈ. ಗಣಪತಿ ಭಟ್, ಜೀರ್ಣೕೊದ್ಧಾರ ಸಮಿತಿಯ ಉಪಾಧ್ಯಕ್ಷ ಪಿ. ರವೀಂದ್ರನಾಥ ಜಿ. ಹೆಗ್ಡೆ, ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ. ರಾಘವೇಂದ್ರ ನಾವಡ, ಕಾರ್ಯದರ್ಶಿಗಳಾದ ಶ್ರೀನಾಥ್ ಹೆಗ್ಡೆ, ವೈ. ಸುಕುಮಾರ್, ನವೀನ್‌ ಚಂದ್ರ ಜೆ. ಶೆಟ್ಟಿ, ಸುಕುಮಾರ್ ಶ್ರೀಯಾನ್, ಅಶೋಕ್ ಸಾಲ್ಯಾನ್, ಭಾಸ್ಕರ್ ಕೆ., ನವೀನ್ ಎನ್. ಶೆಟ್ಟಿ, ಜಯ ಶೆಟ್ಟಿ ಪದ್ರ, ಬಾಲಕೃಷ್ಣ ಕೊರ್ನಾಯ, ರಮಾಕಾಂತ ರಾವ್, ಪ್ರಕಾಶ್ ದೇವಾಡಿಗ, ಅನಿಲ್‌ ಕುಮಾರ್ ಶೆಟ್ಟಿ, ವಿಶುಕುಮಾರ್ ಶೆಟ್ಟಿಬಾಲ್, ಶ್ರೀ ದೇಗುಲದ ಸಿಬ್ಬಂದಿ ವರ್ಗ, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.