• Home  
  • ಹೆತ್ತವರ ಪೂಜೆ ಮಾಡಿದ ಮಕ್ಕಳು: ಮಂಗಳೂರಿನ ಶಾಲೆಯಲ್ಲಿ ಭಾರತದ ಸಂಸ್ಕೃತಿ ದರ್ಶನ
- ಕರಾವಳಿ - ಪ್ರಚಲಿತ - ಶಾಲಾ ಕಾಲೇಜು

ಹೆತ್ತವರ ಪೂಜೆ ಮಾಡಿದ ಮಕ್ಕಳು: ಮಂಗಳೂರಿನ ಶಾಲೆಯಲ್ಲಿ ಭಾರತದ ಸಂಸ್ಕೃತಿ ದರ್ಶನ

Share: ಮಂಗಳೂರು: ಇಲ್ಲಿನ ಶಾಲೆಯೊಂದರಲ್ಲಿ ಶಾಲಾ ಮಕ್ಕಳು ತಮ್ಮ ಹೆತ್ತವರ ಪಾದ ತೊಳೆದು, ಹೂವು ಸಮರ್ಪಿಸಿ, ತಿಲಕ ಹಚ್ಚಿ, ಶಿರಸಾ ನಮಿಸಿ, ಆರತಿ ಬೆಳಗಿ ಹೆತ್ತವರ ಪೂಜೆ ಮಾಡಿ ಗುರು ಪೂರ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ನಗರದ ಅಮೃತ ವಿದ್ಯಾಲಯಂ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆಯ ನಿಮಿತ್ತ ಮಾತಾ ಪಿತಾ ಗೌರವ ಸಮರ್ಪಣೆಯ ಸಂಸ್ಕೃತಿ ಪೂಜೆ ನೆರವೇರಿತು. ಈ ಸಂದರ್ಭ ಶಾಲಾ ಮಕ್ಕಳು ಭಾರತೀಯ ಸನಾತನ ಸಂಸ್ಕೃತಿಯಂತೆ ತಮ್ಮ ತಾಯಿ ತಂದೆಗೆ ವಿದ್ಯುಕ್ತವಾಗಿ ಪಾದ ಪೂಜೆ ಮಾಡಿ ಗೌರವ ಸಲ್ಲಿಸಿ […]

ಮಂಗಳೂರು: ಇಲ್ಲಿನ ಶಾಲೆಯೊಂದರಲ್ಲಿ ಶಾಲಾ ಮಕ್ಕಳು ತಮ್ಮ ಹೆತ್ತವರ ಪಾದ ತೊಳೆದು, ಹೂವು ಸಮರ್ಪಿಸಿ, ತಿಲಕ ಹಚ್ಚಿ, ಶಿರಸಾ ನಮಿಸಿ, ಆರತಿ ಬೆಳಗಿ ಹೆತ್ತವರ ಪೂಜೆ ಮಾಡಿ ಗುರು ಪೂರ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.

ನಗರದ ಅಮೃತ ವಿದ್ಯಾಲಯಂ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆಯ ನಿಮಿತ್ತ ಮಾತಾ ಪಿತಾ ಗೌರವ ಸಮರ್ಪಣೆಯ ಸಂಸ್ಕೃತಿ ಪೂಜೆ ನೆರವೇರಿತು. ಈ ಸಂದರ್ಭ ಶಾಲಾ ಮಕ್ಕಳು ಭಾರತೀಯ ಸನಾತನ ಸಂಸ್ಕೃತಿಯಂತೆ ತಮ್ಮ ತಾಯಿ ತಂದೆಗೆ ವಿದ್ಯುಕ್ತವಾಗಿ ಪಾದ ಪೂಜೆ ಮಾಡಿ ಗೌರವ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು. ಬಳಿಕ ಧ್ಯಾನ, ಗುರು ಸ್ತೋತ್ರ, ಅಷ್ಟೋತ್ತರ, ಗುರುಪಾದುಕಾ ಸ್ತೋತ್ರ  ಮತ್ತು ಭಜನಾ ಸಂಕೀರ್ತನೆ ನೆರವೇರಿತು.

ಶಾಲೆಗಳಲ್ಲಿ ಸಂಸ್ಕಾರ ಬಿತ್ತನೆ ಅತೀ ಅವಶ್ಯಕ ಮತ್ತು ಶ್ಲಾಘನೀಯ:

ಕಾರ್ಯಕ್ರಮದ ಮುಖ್ಯ ಅತಿಥಿ, ಮಂಗಳೂರಿನ ರಾಮಕೃಷ್ಣ ಮಿಷನ್ ನ  ಶ್ರೀಮತ್ ಜಿತಕಾಮನಂದಜೀ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಾತಾ, ಪಿತ ಹಾಗೂ ಗುರುಗಳಿಗೆ ನೀಡಲಾಗುವ  ಆದರ ಸತ್ಕಾರದ ಶಿಕ್ಷಣವು ಮನೆಯಿಂದಲೇ ಪ್ರಾರಂಭವಾಗಬೇಕು. ಸಂಸ್ಕಾರಯುತ ವ್ಯಕ್ತಿಯ ನಿರ್ಮಾಣವೇ ವಿದ್ಯಾಭ್ಯಾಸದ ಗುರಿ ಎಂದು ಹೇಳಿದರು.

ಶಾಲಾ ಸಂಚಾಲಕಿ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಗುರು ಪೂರ್ಣಿಮೆ ಆಚರಣೆಯ ಮೂಲಕ ಮಕ್ಕಳು ಭಾರತೀಯ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಆಶೀರ್ವಚನ ನೀಡಿದರು.

ಶಾಲಾ ಪ್ರಾಂಶುಪಾಲೆ ಅಕ್ಷತಾ ಶೆಣೈ  ಗುರುಪಾದುಕ ಪೂಜೆ ನೆರವೇರಿಸಿದರು. ವಿದ್ಯಾರ್ಥಿನಿ ಸುಮೇದ ಗುರುಪೂರ್ಣಿಮೆಯ ಮಹತ್ವದ ಬಗ್ಗೆ ತಿಳಿಸಿದರು.

ಶಾಲಾ ಶೈಕ್ಷಣಿಕ ಸಂಯೋಜಕಿ  ಗಾಯತ್ರಿ ಹೆರಳೆ , ಅಮೃತ ಕ್ಯಾಂಪಸ್ ನ ನಿರ್ದೇಶಕ ಯತೀಶ್ ಬೈಕಂಪಾಡಿ, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗ, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ  ಭಾಗವಹಿಸಿದರು.

ಶಾಲಾ ವಿದ್ಯಾರ್ಥಿಗಳಾದ ಇಶಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಅಮೃತ ಜ್ಯೋತಿ ಸ್ವಾಗತಿಸಿದರು. ಆದಿತೇಯ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.