• Home  
  • ಹೊಸ ವರ್ಷಾಚರಣೆ ಸಂದರ್ಭ ಸಾರ್ವಜನಿಕರಿಗೆ ತೊಂದರೆ ಆದರೆ ಕಾದಿದೆ ಶಿಕ್ಷೆ: ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ (New year celebration, there is trouble for the public, Punishment awaits ; Commissinor Dayananda)
- ಅಪರಾಧ

ಹೊಸ ವರ್ಷಾಚರಣೆ ಸಂದರ್ಭ ಸಾರ್ವಜನಿಕರಿಗೆ ತೊಂದರೆ ಆದರೆ ಕಾದಿದೆ ಶಿಕ್ಷೆ: ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ (New year celebration, there is trouble for the public, Punishment awaits ; Commissinor Dayananda)

Share: ಹೊಸ ವರ್ಷಾಚರಣೆ ಸಂದರ್ಭ ಸಾರ್ವಜನಿಕರಿಗೆ ತೊಂದರೆ ಆದರೆ ಕಾದಿದೆ ಶಿಕ್ಷೆ: ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ (Bengaluru) ಬೆಂಗಳೂರು: ಡಿ.26: ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಹೊಸ ವರ್ಷಾಚರಣೆ ನಿಮಿತ್ತ ಬೆಂಗಳೂರು ಪೊಲೀಸರಿಂದ ಮಾರ್ಗಸೂಚನೆಗಳನ್ನು ನೀಡುತ್ತಿದ್ದೇವೆ. ನಾಗರೀಕರ ಸುರಕ್ಷತೆಯೇ ನಮ್ಮ ಆದ್ಯತೆ. ಇಂತಹ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆ, ಕಿರುಕುಳ ಆಗಬಾರದು. ಮಹಿಳೆ ‌ಮತ್ತು ಮಕ್ಕಳ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ. […]

ಹೊಸ ವರ್ಷಾಚರಣೆ ಸಂದರ್ಭ ಸಾರ್ವಜನಿಕರಿಗೆ ತೊಂದರೆ ಆದರೆ ಕಾದಿದೆ ಶಿಕ್ಷೆ: ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್

(Bengaluru) ಬೆಂಗಳೂರು: ಡಿ.26: ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.

ಹೊಸ ವರ್ಷಾಚರಣೆ ನಿಮಿತ್ತ ಬೆಂಗಳೂರು ಪೊಲೀಸರಿಂದ ಮಾರ್ಗಸೂಚನೆಗಳನ್ನು ನೀಡುತ್ತಿದ್ದೇವೆ. ನಾಗರೀಕರ ಸುರಕ್ಷತೆಯೇ ನಮ್ಮ ಆದ್ಯತೆ. ಇಂತಹ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆ, ಕಿರುಕುಳ ಆಗಬಾರದು. ಮಹಿಳೆ ‌ಮತ್ತು ಮಕ್ಕಳ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.

 ಹೊಸ ವರ್ಷ ಆಚರಣೆಯಲ್ಲಿ ಯಾರಿಗೂ ತೊಂದರೆ ಆಗಬಾರದು. ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು ಇರುತ್ತಾರೆ. ಒಬ್ಬ ಜಂಟಿ ಪೊಲೀಸ್ ಆಯುಕ್ತರು, 15 ಡಿಸಿಪಿ, 45 ಎಸಿಪಿ, 160 ಇನ್ಸ್ಪೆಕ್ಟರ್ಸ್, 600 ಸಬ್ ಇನ್ಸ್ಪೆಕ್ಟರ್ಸ್, 600 ಎಎಸ್ಐ, 1800 ಹೆಚ್ಸಿ, 5200 ಪಿಸಿಗಳು ಭದ್ರತೆ ನೀಡಲಿದ್ದಾರೆ.

  ಬ್ರಿಗೇಡ್ ರಸ್ತೆ, ಎಂಜಿ ರಸ್ತೆಯಲ್ಲಿ 3000 ಪೊಲೀಸರ ನಿಯೋಜನೆ, ನಗರದಾದ್ಯಂತ ಮಹಿಳೆಯರಿಗಾಗಿ ಸೇಫ್ಟಿ ಐ ಲ್ಯಾಂಡ್ ಸ್ಥಾಪನೆ, ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಕಿಯೋಸ್ಕ್ ಸ್ಥಾಪನೆ ಮಾಡ್ತಾರೆ. ಇಲ್ಲಿ ಕಾಣೆಯಾಗಿರುವ ಮಕ್ಕಳ ಬಗ್ಗೆ ತುರ್ತು ದೂರು ನೀಡಬಹುದು.

 ವೀಕ್ಷಣಾ ಗೋಪುರ, ಪೊಲೀಸ್ ಸಿಬ್ಬಂದಿಗೆ ಬೈನಾಕುಲರ್ ವ್ಯವಸ್ಥೆ, ಡಿ.31 ರಾತ್ರಿ 11 ಗಂಟೆಯಿಂದ ಮೆಟ್ರೋ ಸ್ಟೇಷನ್ಗೆ ಪ್ರವೇಶ ಇಲ್ಲ. ನಗರದ ಎಲ್ಲಾ ಮಾಲ್‌ಗಳ ಬಳಿಯೂ ಬಿಗಿ ಭದ್ರತೆ ಇರಲಿದೆ ಇರಲಿದೆ.

 ಒಂದು ಗಂಟೆ ನಂತರ ಹೋಟೆಲ್, ಬಾರ್, ಪಬ್ ಎಲ್ಲವೂ ಬಂದ್. ವಿಮಾನ ನಿಲ್ದಾಣಕ್ಕೆ ಹೋಗೋ ಫ್ಲೈ ಓವರ್ ಓಪನ್ ಇರಲಿದೆ. ಮದ್ಯದಂಗಡಿಗೆ ಅಬಕಾರಿ ನಿಯಮಗಳ ಅಡಿಯಿರುವ ಕಾಲ‌ಮೀತಿಯೇ ಅಂತಿಮ. ಹೊಸ ವರ್ಷಕ್ಕೆ ವಿಶೇಷ ಕಾಲ ಮಿತಿ ಬೆಂಗಳೂರಲ್ಲಿ ಇರುವುದಿಲ್ಲ. ಒಂದು ಗಂಟೆಗೆ ಹೊಸ ವರ್ಷಾಚರಣೆ ಮುಕ್ತಾಯವಾಗಬೇಕು. ಶ್ವಾನದಳದಿಂದ ಪ್ರಮುಖ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಿದೆ.

  ಡಿ.31 ರಾತ್ರಿ 11 ರಿಂದ ಬೆಳಗ್ಗಿನವರೆಗೆ ಫ್ಲೈಓವರ್‌ ಗಳು ಬಂದ್ ಇರಲಿವೆ.

 48 ನಾಕಾಬಂದಿ ನಿರ್ಮಾಣ, ವೀಲಿಂಗ್, ಡ್ರ್ಯಾಗ್ ರೇಸಿಂಗ್ ಕಡಿವಾಣ. 48 ಕಡೆಗಳಲ್ಲಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲಾಗುತ್ತೆ.

 ಕೋರಮಂಗಲ, ಇಂದಿರಾನಗರ 100 ಅಡಿ ರಸ್ತೆಗಳಲ್ಲಿ ಹೆಚ್ಚಿನ ಭದ್ರತೆ ನೀಡಲಾಗುತ್ತದೆ. ಸಿವಿಲ್ ಡ್ರಸ್‌ನಲ್ಲಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದರು.

 ಡ್ರಗ್ಸ್ ಉಪಟಳಕ್ಕೆ ಕಡಿವಾಣ ಹಾಕಲು ನಗರದಾದ್ಯಂತ ಒಂದು ವಾರದಿಂದ ನಿರಂತರ ಪರಿಶೀಲನೆ ನಡೆಯುತ್ತಿದೆ. ಸಿಸಿಬಿ ಅಧಿಕಾರಿಗಳು ಮಾದಕ ವಸ್ತು ಸಂಗ್ರಹಿಸಿದ್ದ ಮನೆಗಳ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ. ಅಧಿಕ ಲಿಕ್ಕರ್ ಶೇಖರಣೆ, ಅನಧಿಕೃತ ಮಾರಾಟದ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ. ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಚೌಕಿಗಳನ್ನು ಸ್ಥಾಪಿಸಲಾಗಿದೆ ಎಂದೂ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್  ತಿಳಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.