• Home  
  • ಹಲಸಿಗೆ ಮೌಲ್ಯರ‍್ದನೆ ಮತ್ತು ಸೂಕ್ತ ಮಾರುಕಟ್ಟೆ ಕಲ್ಪಿಸುವುದು ಅವಶ್ಯ : ಯಶ್ಪಾಲ್ ಸುವರ್ಣ
- ಆಹಾರ

ಹಲಸಿಗೆ ಮೌಲ್ಯರ‍್ದನೆ ಮತ್ತು ಸೂಕ್ತ ಮಾರುಕಟ್ಟೆ ಕಲ್ಪಿಸುವುದು ಅವಶ್ಯ : ಯಶ್ಪಾಲ್ ಸುವರ್ಣ

Share: ಹಲಸಿಗೆ ಮೌಲ್ಯರ‍್ದನೆ ಮತ್ತು ಸೂಕ್ತ ಮಾರುಕಟ್ಟೆ ಕಲ್ಪಿಸುವುದು ಅವಶ್ಯ : ಯಶ್ಪಾಲ್ ಸುವರ್ಣ  ಉಡುಪಿ : ಹಲಸಿನ ಮೌಲ್ಯರ‍್ಧನೆ ಹಾಗೂ ರೈತ ಭಾಂಧವರಿಗೆ ಸೂಕ್ತ ಮಾರುಕಟ್ಟೆಯನ್ನು ಒದಗಿಸುವ ಉದ್ದೇಶದಿದ ಹಲಸಿನ ಮೇಳಗಳನ್ನ ಅಯೋಜಿಸಲಾಗುತ್ತಿದೆ ಇದರ ಪ್ರಯೋಜನವನ್ನು ಎಲ್ಲರೂ ಪಡೆಯಬೇಕೆಂದು ಶಾಸಕ ಯಶ್ಪಾಲ್ ಸುವರ್ಣ  ತಿಳಿಸಿದರು.  ಅವರು ಉಡುಪಿ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರ ಇಲ್ಲಿನ ಪುಷ್ಪ ಹರಾಜು ಕೇಂದ್ರ (ರೈತ ಸೇವಾ ಕೇಂದ್ರ)ದ ಆವರಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಉಡುಪಿ ಜಿಲ್ಲೆ […]

ಹಲಸಿಗೆ ಮೌಲ್ಯರ‍್ದನೆ ಮತ್ತು ಸೂಕ್ತ ಮಾರುಕಟ್ಟೆ ಕಲ್ಪಿಸುವುದು ಅವಶ್ಯ : ಯಶ್ಪಾಲ್ ಸುವರ್ಣ

 ಉಡುಪಿ : ಹಲಸಿನ ಮೌಲ್ಯರ‍್ಧನೆ ಹಾಗೂ ರೈತ ಭಾಂಧವರಿಗೆ ಸೂಕ್ತ ಮಾರುಕಟ್ಟೆಯನ್ನು ಒದಗಿಸುವ ಉದ್ದೇಶದಿದ ಹಲಸಿನ ಮೇಳಗಳನ್ನ ಅಯೋಜಿಸಲಾಗುತ್ತಿದೆ ಇದರ ಪ್ರಯೋಜನವನ್ನು ಎಲ್ಲರೂ ಪಡೆಯಬೇಕೆಂದು ಶಾಸಕ ಯಶ್ಪಾಲ್ ಸುವರ್ಣ

 ತಿಳಿಸಿದರು.

 ಅವರು ಉಡುಪಿ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರ ಇಲ್ಲಿನ ಪುಷ್ಪ ಹರಾಜು ಕೇಂದ್ರ (ರೈತ ಸೇವಾ ಕೇಂದ್ರ)ದ ಆವರಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಉಡುಪಿ ಜಿಲ್ಲೆ ಹಾಗೂ ರೋಬೋಸಾಫ್ಟ್ ಟೆಕ್ನೋಲಾಜಿಸ್ ಪ್ರೆ.ಲಿ ಇವರ ಸಂಯುಕ್ತ ಆಶ್ರಯದಲ್ಲಿ ರೋಬೋಸಾಫ್ಟ್ ಟೆಕ್ನೋಲಾಜಿಸ್ ರವರ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ನಿರ‍್ಮಾಣವಾದ ರೈತ ಸೇವಾ ಕೇಂದ್ರದ ಆವರಣದ ಮೇಲ್ಛಾವಣಿಯ ಲೋಕಾರ‍್ಪಣೆ ಹಾಗೂ ಹಲಸು ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಮಲೆನಾಡು ಸೇರಿದಂತೆ ಕರಾವಳಿ ಭಾಗದಲ್ಲಿ ಪೌಷ್ಠಿಕ ಆಹಾರಗಳಲ್ಲಿ ಒಂದಾದ ಹಲಸು ಹೇರಳವಾಗಿ ಉತ್ಪಾದನೆಯಾಗುತ್ತದೆ . ಇದಕ್ಕೆ ಹೆಚ್ಚಿನ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆಯನ್ನು ಒದಗಿಸುವುದರಿಂದ ರೈತರು ಹೆಚ್ಚಿನ ಲಾಭ ಪಡೆಯುವುದರೊಂದಿಗೆ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ , ಹಲಸಿನಿಂದ ವಿವಿದ ರೀತಿಯ ಖಾದ್ಯ ಉತ್ಪನ್ನಗಳನ್ನು ದೇಶ ವಿದೇಶಗಳಿಗೆ ರಫ್ತು ಮಾಡುವುದರಿಂದ ಹೆಚ್ಚಿನ ಲಾಭ ಪಡೆಯಲು ರೈತರು ಮುಂದಾಗಬೇಕು ಎಂದರು.

ಜಿಲ್ಲಾಧಿಕಾರಿ ಕೂರ‍್ಮಾರಾವ್ ಎಂ ಮಾತನಾಡಿ, ಹಲಸಿನ ಮೇಳಗಳಲ್ಲಿ ವಿವಿಧ ಬಗೆಯ ಹಲಸುಗಳು ಲಭ್ಯವಿದ್ದು, ಇದನ್ನು ಜನರು ಸವಿಯಲು ಅನುಕೂಲವಾಗುವುದರ ಜೊತೆಗೆ ರೈತರಿಗೆ ಮಾರುಕಟ್ಟೆ ಸೌಲಭ್ಯ ಒದಗಲಿದೆ ಎಂದರು.

ರೋಬೋಸಾಫ್ಟ್ ಟೆಕ್ನೋಲಾಜಿಸ್ ವತಿಯಿಂದ ಸಾಮಾಜಿಕ ಹೊಣೆಗಾರಿಕ ನಿಧಿಯಿಂದ ೪೮.೫ ಲಕ್ಷ ರೂ ವೆಚ್ಚದಲ್ಲಿ ರೈತ ಸೇವಾ ಕೇಂದ್ರದ ಮೇಲ್ಛಾವಣಿ ನಿರ‍್ಮಿಸಿರುವುದು ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ಕಾರ‍್ಯವಾಗಿದೆ ಎಂದು ಶ್ಲಾಘಿಸಿದರು.

ರೋಬೋಸಾಫ್ಟ್ ಕಂಪೆನಿಯ ವ್ಯವಸ್ಥಾಪಕ ನಿರ‍್ದೇಶಕ ಹಾಗೂ ಮುಖ್ಯ ಕಾರ‍್ಯ ನಿರ‍್ವಾಹಕ ಅಧಿಕಾರಿ ರವೀತೇಜ ಬೊಮ್ಮಿರೆಡ್ಡಿ ಪಲ್ಲಿ ಮಾತನಾಡಿ, ನಮ್ಮ ಕೆಂಪೆನಿಯ ಮುಖ್ಯ ಕಚೇರಿಯು ಈ ಜಿಲ್ಲೆಯಲ್ಲಿದ್ದು, ಇಲ್ಲಿನ ಅಭಿವೃಧ್ದಿ ಸೇರಿದಂತೆ ಜನಹಿತ ಕಾರ‍್ಯವನ್ನು ಮಾಡಲು ಕೈ ಜೋಡಿಸಲಿದ್ದೇವೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ‍್ವಹಣಾಧಿಕಾರಿ ಪ್ರಸನ್ನ ಹೆಚ್ , ತರಬೇತಿ ನಿರತ ಐ.ಎ.ಎಸ್. ಅಧಿಕಾರಿ ಯತೀಶ್ , ರೋಬೋಸಾಫ್ಟ್ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಮತ್ತಿತರರು ಉಪಸ್ಥಿತರಿದ್ದರು.

 ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ ಸ್ವಾಗತಿಸಿದರು.  ಅಶೋಕ್ ಕಾಮತ್ ನಿರೂಪಿಸಿದರು. ರೋಬೋಸಾಫ್ಟ್ ಕಂಪೆನಿಯ ಹಣಕಾಸು ವಿಭಾಗದ ನಾಗೇಶ್ ದೊಂಡಿಯ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.