• Home  
  • ಕಾಪುವಿನಲ್ಲಿ  ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿ ಶಂಕರ್‌ ಗುರೂಜಿಯವರಿಂದ ಗಾನ, ಜ್ಞಾನ, ಧ್ಯಾನಗಳ ಆನಂದ ಲಹರಿ (The founder of Art of living in Kaup is Ravishankar Guruji)
- Uncategorised

ಕಾಪುವಿನಲ್ಲಿ  ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿ ಶಂಕರ್‌ ಗುರೂಜಿಯವರಿಂದ ಗಾನ, ಜ್ಞಾನ, ಧ್ಯಾನಗಳ ಆನಂದ ಲಹರಿ (The founder of Art of living in Kaup is Ravishankar Guruji)

Share: ಕಾಪುವಿನಲ್ಲಿ  ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿ ಶಂಕರ್‌ ಗುರೂಜಿಯವರಿಂದ ಗಾನ, ಜ್ಞಾನ, ಧ್ಯಾನಗಳ ಆನಂದ ಲಹರಿ (kaup) ಕಾಪು: ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದ   ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ವಿಶ್ವ ವಿಖ್ಯಾತ ಪದ್ಮವಿಭೂಷಣ ಶ್ರೀ ರವಿಶಂಕರ ಗುರೂಜಿ ಅವರಿಂದ ಗಾನ, ಜ್ಞಾನ, ಧ್ಯಾನಗಳ ಸುಮಧುರ ಸಂಜೆ ಆನಂದ ಲಹರಿ- ಕಾರ್ಯಕ್ರಮ ಉಡುಪಿ ಜಿಲ್ಲೆಯ ಕಾಪು ಮಂಥನ್ ಬೀಚ್ ರೆಸಾರ್ಟ್ ಬಳಿಯ ಕಡಲ ಕಿನಾರೆಯಲ್ಲಿ ಮಂಗಳವಾರ […]

ಕಾಪುವಿನಲ್ಲಿ  ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿ ಶಂಕರ್‌ ಗುರೂಜಿಯವರಿಂದ ಗಾನ, ಜ್ಞಾನ, ಧ್ಯಾನಗಳ ಆನಂದ ಲಹರಿ

(kaup) ಕಾಪು: ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದ   ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ವಿಶ್ವ ವಿಖ್ಯಾತ ಪದ್ಮವಿಭೂಷಣ ಶ್ರೀ ರವಿಶಂಕರ ಗುರೂಜಿ ಅವರಿಂದ ಗಾನ, ಜ್ಞಾನ, ಧ್ಯಾನಗಳ ಸುಮಧುರ ಸಂಜೆ ಆನಂದ ಲಹರಿ- ಕಾರ್ಯಕ್ರಮ ಉಡುಪಿ ಜಿಲ್ಲೆಯ ಕಾಪು ಮಂಥನ್ ಬೀಚ್ ರೆಸಾರ್ಟ್ ಬಳಿಯ ಕಡಲ ಕಿನಾರೆಯಲ್ಲಿ ಮಂಗಳವಾರ ಸಂಜೆ ಜರಗಿತು.

ಸಂಪೂರ್ಣ ವ್ಯಕ್ತಿತ್ವವನ್ನು ವಿಕಸನಗೊಳಿಸುವ ಹಾಗೂ ಸುದರ್ಶನ ಕ್ರಿಯಾಯೋಗದ ಸ್ಥಾಪಕಾಚಾರ್ಯ ಆಗಿರುವ  ಶ್ರೀ ರವಿಶಂಕರ್ ಗುರೂಜಿಯವರು ದಿವ್ಯ ಸತ್ಸಂಗದಲ್ಲಿ, ವಸುದೈವ ಕುಟುಂಬಕಂ ಉದ್ಘಾರ ಪ್ರಪಂಚಕ್ಕೆ ಕೊಟ್ಟುದ್ದ ಭಾರತ ದೇಶ. ಇದರ ಬಗ್ಗೆ ನಮಗೆ ಹೆಮ್ಮೆ ಇದೆ. ಭಾರತವು ಸನಾತನ ಧರ್ಮ, ನಾಲೆಜ್ ಬೇಸ್ಡ್ ಐಟಿ, ಒಡವೆ ಆಭರಣ-ವಸ್ತ್ರ, ಪ್ರವಾಸೋದ್ಯಮ, ಆಯುರ್ವೇದ, ವೈವಿಧ್ಯಮಯ ಆಹಾರ ಪದ್ಧತಿ, ಕಲೆ-ಸಂಸ್ಕೃತಿ-ಸಿದ್ಧಾಂತಗಳೊಂದಿಗೆ ಭಾರತ ಪ್ರಾಪಂಚಿಕವಾಗಿ ಶ್ರೇಷ್ಠತೆಯನ್ನು ಹೊಂದಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಭಾರತವು ಹಲವು ಸಂಸ್ಕೃತಿಯ ತವರು ನೆಲವಾಗಿದೆ. ಧಾರ್ಮಿಕ ಬದುಕನ್ನು ಒಪ್ಪಿಕೊಂಡು ಅಪ್ಪಿಕೊಂಡಂತಹ ಅಖಂಡ ಭೂಮಂಡಲವೇ ತನ್ನದೆಂದು ಭವಿಸಿಕೊಂಡಂತಹ ದೊಡ್ಡ ಸಂತರ ಆಗಮನದಿಂದ ನಮ್ಮ ಭೂಮಿ ಮತ್ತು ಬದುಕು ಧನ್ಯವಾಗಿದೆ ಎಂದರು.

ಅದ್ದೂರಿ ಮೆರವಣಿಗೆಯಲ್ಲಿ ಗುರುದೇವ್ ಶ್ರೀ ರವಿಶಂಕರ ಗುರೂಜಿ ಅವರನ್ನು ಮಂಥನ್ ಬೀಚ್ ರೆಸಾರ್ಟ್ ಬಳಿ ಕಡಲ ಕಿನಾರೆಯಲ್ಲಿನ ಬೃಹತ್ ವೇದಿಕೆಗೆ ಕರೆ ತರಲಾಯಿತು.

   ಸತ್ಸಂಗದಲ್ಲಿ ಪಾಲ್ಗೊಂಡ ಸಹಸ್ರಾರು ಜನರಿಗೆ ಬೆಲ್ಲ ಬಳಸಿದ ಶೀರ, ಅವಲಕ್ಕಿ, ಕಡಲೆಯುಕ್ತ ವಿಶೇಷ ಪ್ರಸಾದ ವಿತರಿಸಲಾಯಿತು.

  ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನಸಾಗರದ ನಡುವೆ ಸಂಚರಿಸಿದ ಗುರುದೇವ್ ಶ್ರೀ ರವಿಶಂಕರ ಗುರೂಜಿ ಅವರು ಜನತೆಯ ಭಕ್ತಿ ಬಾವದ ಗೌರವ ಪಡೆದುಕೊಂಡು ಹಾರೈಸಿ, ಪುಷ್ಪದಳ ಪ್ರಸಾದವಾಗಿ ನೀಡಿದಾಗ ಭಕ್ತರು ಪುಳಕ ಭಾವ ಪ್ರದರ್ಶಿಸಿದರು.

ಈ ಸಂದರ್ಭ ಕಾರ್ಯಕ್ರಮ ಸಂಯೋಜಕರಾದ ಕಾಪು ಕ್ಷೇತ್ರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ (MLA Gurme Suresh Shetty), ಹರೀಶ್ ಪಿ. ಶೆಟ್ಟಿ ಗುರ್ಮೆ, ಸತೀಶ್ ಪಿ. ಶೆಟ್ಟಿ ಗುರ್ಮೆ, ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ(Kota Shrinivasa Poojary), ಎಂಆರ್‌ಜಿ ಗ್ರೂಪ್ ಬೆಂಗಳೂರು ಸಿಎಂಡಿ ಪ್ರಕಾಶ್ ಶೆಟ್ಟಿ(MRG Group President Banjara Prakash Shetty), ದಾ. ಮ. ರವೀಂದ್ರ, ಶಂಭು ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್(EX MLA Lalaji Mendon), ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್(Kaup Thahashildar DR Prathibha R), ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಪ್ರಮುಖರಾದ ಸೌರಭ್ ಶೆಟ್ಟಿ, ಕಿಶೋರ್ ಕುಮಾರ್‌ ಗುರ್ಮೆ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿತೇಂದ್ರ ಶೆಟ್ಟಿ, ಪೂನಾ ಸಂತೋಷ್ ಶೆಟ್ಟಿ, ರೇಶ್ಮಾ ಉದಯ ಶೆಟ್ಟಿ, ಗೀತಾಂಜಲಿ ಎಂ. ಸುವರ್ಣ, ಶಿಲ್ಪಾ ಜಿ. ಸುವರ್ಣ, ವೀಣಾ ಶೆಟ್ಟಿ, ಶ್ರೀಕಾಂತ್ ನಾಯಕ್, ಸದಾಶಿವ ಕರ್ಕೇರ, ಡಾ. ಕೃಷ್ಣ ಪ್ರಸಾದ್, ಡಾ. ಚಂದ್ರಶೇಖರ್, ಕೆ. ವಾಸುದೇವ ಶೆಟ್ಟಿ, ನಡಿಕೆರೆ ರತ್ನಾಕರ ಶೆಟ್ಟಿ, ಮೊದಲಾದ ಗಣ್ಯರು, ಆರ್ಟ್ ಆಫ್ ಲಿವಿಂಗ್ ತಂಡದವರು ಪಾಲ್ಗ್ಗೊಂಡಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.