ಶಿರ್ವ: ತಾಯಿ-ಮಗು ನಾಪತ್ತೆ: ಪ್ರಕರಣ ದಾಖಲು
ಶಿರ್ವ: ಶಿರ್ವ ಪಂಜಿಮಾರು ಕೋಡುಗುಡ್ಡೆ ಶಾಲೆಯ ಬಳಿಯ ನಿವಾಸಿ ಶಕೀಲ್ ಅವರ ಪತ್ನಿ ಸಾಜಿದಾ ಬಾನು (35) ತನ್ನ ಎರಡೂವರೆ ವರ್ಷದ ಪುತ್ರಿ ಮುಹಿಜ ಬಾನುವಿನೊಂದಿಗೆ ಫೆ. 22 ರಂದು ಬೆಳಿಗ್ಗೆ 10 ಗಂಟೆಗೆ ಮಣಿಪಾಲದ ಈಶ್ವರ ನಗರದಲ್ಲಿರುವ ಶಕೀಲ್ ಅವರ ಅಕ್ಕ ಸಿಮ್ರಾನ್ ಅವರ ಮನೆಯಿಂದ ಹೋದವರು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಎಲ್ಲಾ ಕಡೆ ಹುಡುಕಾಡಿ ಪತ್ತೆಯಾಗದೇ ಇದ್ದು, ಪತಿ ಶಕೀಲ್ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

