• Home  
  •   ಉಡುಪಿ: ಭಾವಚಿತ್ರಕ್ಕೆ ಉಗುಳಿ ಪ್ರತಿಭಟಿಸುವುದು ಶಾಸಕರ  ಸಣ್ಣತನಕ್ಕೆ ಸಾಕ್ಷಿ: ರಮೇಶ್ ಕಾಂಚನ್
- ರಾಜಕೀಯ

  ಉಡುಪಿ: ಭಾವಚಿತ್ರಕ್ಕೆ ಉಗುಳಿ ಪ್ರತಿಭಟಿಸುವುದು ಶಾಸಕರ  ಸಣ್ಣತನಕ್ಕೆ ಸಾಕ್ಷಿ: ರಮೇಶ್ ಕಾಂಚನ್

Share: ಉಡುಪಿ: ಭಾವಚಿತ್ರಕ್ಕೆ ಉಗುಳಿ ಪ್ರತಿಭಟಿಸುವುದು ಶಾಸಕರ  ಸಣ್ಣತನಕ್ಕೆ ಸಾಕ್ಷಿ- ರಮೇಶ್ ಕಾಂಚನ್(Protesting by spitting on the portrait is proof of the smallness of MLAs)  (Udupi) ಉಡುಪಿ: ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ (Udupi MLA Yashpal Suvarna) ಅವರು ರಾಜಕೀಯದಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲು ಬಾಕಿ ಇ̧̧ದ್ದು, ಅವರು ತನ್ನ ಮಕ್ಕಳಾಟಿಕೆ ಸ್ವಭಾವವನ್ನು ಕೈಬಿಟ್ಟು ಉಡುಪಿ ಕ್ಷೇತ್ರದ ಜನರು ತನಗೆ ಮತ ನೀಡಿರುವುದು ಕ್ಷೇತ್ರದ ಅಭಿವೃದ್ಧಿ ಮಾಡಲು ಎನ್ನುವುದನ್ನು ಅರಿತು […]

ಉಡುಪಿ: ಭಾವಚಿತ್ರಕ್ಕೆ ಉಗುಳಿ ಪ್ರತಿಭಟಿಸುವುದು ಶಾಸಕರ  ಸಣ್ಣತನಕ್ಕೆ ಸಾಕ್ಷಿ- ರಮೇಶ್ ಕಾಂಚನ್(Protesting by spitting on the portrait is proof of the smallness of MLAs)

 (Udupi) ಉಡುಪಿ: ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ (Udupi MLA Yashpal Suvarna) ಅವರು ರಾಜಕೀಯದಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲು ಬಾಕಿ ಇ̧̧ದ್ದು, ಅವರು ತನ್ನ ಮಕ್ಕಳಾಟಿಕೆ ಸ್ವಭಾವವನ್ನು ಕೈಬಿಟ್ಟು ಉಡುಪಿ ಕ್ಷೇತ್ರದ ಜನರು ತನಗೆ ಮತ ನೀಡಿರುವುದು ಕ್ಷೇತ್ರದ ಅಭಿವೃದ್ಧಿ ಮಾಡಲು ಎನ್ನುವುದನ್ನು ಅರಿತು ಅದರ ಕಡೆಗೆ ಗಮನ ಹರಿಸುವುದು ಉತ್ತಮ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ‌ಯ ಅಧ್ಯಕ್ಷರಾದ ರಮೇಶ್ ಕಾಂಚನ್ (Udupi Block Congress President Ramesh Kanchan) ಅವರು ಸಲಹೆ ನೀಡಿದ್ದಾರೆ.

 ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸಲು ಪ್ರತಿಯೊಬ್ಬರಿಗೂ ಅವಕಾಶವಿದೆ. ಆದರೆ ಪ್ರತಿಭಟನೆಯ ಹೆಸರಿನಲ್ಲಿ ಪ್ರಚೋದನೆಗೆ ಅವಕಾಶ ನೀಡುವುದು ತಪ್ಪು. ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಎಂ.ಜಿ ಹೆಗ್ಡೆ(MG Hegde) ಅವರ ಹೇಳಿಕೆಯನ್ನು ಪ್ರತಿಭಟಿಸುವ ಭರದಲ್ಲಿ ಅವರ ಭಾವಚಿತ್ರಕ್ಕೆ ಉಗುಳುವಂತಹ ಸಣ್ಣತನ ಓರ್ವ ಶಾಸಕರಾಗಿ ತೋರಿರುವುದು ನಿಜಕ್ಕೂ ಅಸಹ್ಯ.

 ಪ್ರತಿಯೊಬ್ಬರ ವಿಚಾರಧಾರೆಗಳು ಒಂದೇ ಆಗಿರಬೇಕು ಎನ್ನುವ ಮನಸ್ಥಿತಿ ಸರಿಯಲ್ಲ. ಇದು ಸಮಾಜಕ್ಕೆ ಮಾರಕವಾಗುತ್ತದೆ. ತಾನೊಬ್ಬ ಜವಾಬ್ದಾರಿಯುತ ಶಾಸಕ ಎನ್ನುವುದನ್ನು ಅರಿತು ಯಾವತ್ತೂ ಕೂಡ ಕೀಳು ಮಟ್ಟದ ವರ್ತನೆ ತೋರಲು ಹೋಗುವುದು ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಮಿಸಲಿದೆ.

ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಯ ಕುರಿತು ಹೆಚ್ಚಿನ ಗಮನ ಹರಿಸಲಿ ಎನ್ನುವುದು ಜನತೆಯ ಆಶಯವಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.