• Home  
  • ಉಚ್ಚಿಲ ರಾಹೆ 66ರಲ್ಲಿ ರಾಷ್ಟ್ರಪಕ್ಷಿ ನವಿಲಿನ ಮೃತದೇಹ ಪತ್ತೆ (The dead body of peacock was Found in Uchila NH 66)
- ಅಪಘಾತ

ಉಚ್ಚಿಲ ರಾಹೆ 66ರಲ್ಲಿ ರಾಷ್ಟ್ರಪಕ್ಷಿ ನವಿಲಿನ ಮೃತದೇಹ ಪತ್ತೆ (The dead body of peacock was Found in Uchila NH 66)

Share: ಉಚ್ಚಿಲ ರಾಹೆ 66ರಲ್ಲಿ ರಾಷ್ಟ್ರಪಕ್ಷಿ ನವಿಲಿನ ಮೃತದೇಹ ಪತ್ತೆ ಉಚ್ಚಿಲ: ಉಚ್ಚಿಲ ಸಂತೆ ಮಾರುಕಟ್ಟೆ ಎದುರು ರಾಹೆ 66ರಲ್ಲಿ ಹೆಣ್ಣು ನವಿಲಿನ ಮೃತ ದೇಹವೊಂದು ಭಾನುವಾರ ಬೆಳಿಗ್ಗೆ ಪತ್ತೆ ಆಗಿದೆ. ಹೆಣ್ಣು ನವಿಲಿನ ಮೃತ ದೇಹ ಇದಾಗಿದ್ದು, ಸರಿಸುಮಾರು 8 ವರ್ಷ ಪ್ರಾಯದ್ದಾಗಿರಬೇಕೆಂದು ಅಂದಾಜಿಸಲಾಗಿದೆ. ನವಿಲು ರಸ್ತೆ ದಾಟುತ್ತಿದ್ದ ಸಂದರ್ಭ ಯಾವುದೇ ಅಪರಿಚಿತ ವಾಹನ ಡಿಕ್ಕಿ ಆಗಿರಬಹುದೆಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮೃತಪಟ್ಟ ನವಿಲಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳಾದ ಅಭಿಲಾಶ್ […]

ಉಚ್ಚಿಲ ರಾಹೆ 66ರಲ್ಲಿ ರಾಷ್ಟ್ರಪಕ್ಷಿ ನವಿಲಿನ ಮೃತದೇಹ ಪತ್ತೆ

ಉಚ್ಚಿಲ: ಉಚ್ಚಿಲ ಸಂತೆ ಮಾರುಕಟ್ಟೆ ಎದುರು ರಾಹೆ 66ರಲ್ಲಿ ಹೆಣ್ಣು ನವಿಲಿನ ಮೃತ ದೇಹವೊಂದು ಭಾನುವಾರ ಬೆಳಿಗ್ಗೆ ಪತ್ತೆ ಆಗಿದೆ.

ಹೆಣ್ಣು ನವಿಲಿನ ಮೃತ ದೇಹ ಇದಾಗಿದ್ದು, ಸರಿಸುಮಾರು 8 ವರ್ಷ ಪ್ರಾಯದ್ದಾಗಿರಬೇಕೆಂದು ಅಂದಾಜಿಸಲಾಗಿದೆ.

ನವಿಲು ರಸ್ತೆ ದಾಟುತ್ತಿದ್ದ ಸಂದರ್ಭ ಯಾವುದೇ ಅಪರಿಚಿತ ವಾಹನ ಡಿಕ್ಕಿ ಆಗಿರಬಹುದೆಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.

ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮೃತಪಟ್ಟ ನವಿಲಿನ ಬಗ್ಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳಾದ ಅಭಿಲಾಶ್ ಮತ್ತು ಮಂಜುನಾಥ್‌ರವರು ಭೇಟಿ ನೀಡಿ, ಮೃತದೇಹದ ಮಹಜರು ನಡೆಸಿ, ಶವ ಸಂಸ್ಕಾರಕ್ಕಾಗಿ ಕೊಂಡೊಯ್ದಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.