ಕವತ್ತಾರಿನಲ್ಲಿ ಮನೆಯ ಹಟ್ಟಿಯಿಂದ ಕರು ಎಳೆದೊಯ್ದು ಗದ್ದೆಯಲ್ಲಿ ತಿಂದ ಚಿರತೆ (Leopard drags calf from home’s shed and eats it in field in Kavatthari)
ಕವತ್ತಾರಿನಲ್ಲಿ ಮನೆಯ ಹಟ್ಟಿಯಿಂದ ಕರು ಎಳೆದೊಯ್ದು ಗದ್ದೆಯಲ್ಲಿ ತಿಂದ ಚಿರತೆ ಕೊಲ್ಲೂರು ಪದವು, ಕವತಾರು ಗುಡ್ಡೆಯಂಗಡಿ ಪರಿಸರದಲ್ಲಿ ಚಿರತೆ ಕಾಟ ಸಾಂದರ್ಭಿಕ ಚಿತ್ರ (Mulki) ಮುಲ್ಕಿ: ಮೂಲ್ಕಿ ಸಮೀಪದ ಕವತ್ತಾರು ದೇವಸ್ಥಾನದ ಬಳಿಯ ಆಸ್ಟಿನ್ ಸಿಕ್ವೇರಾ ಎಂಬವರ ಮನೆಯ ಹಟ್ಟಿಯಿಂದ ಶನಿವಾರ ಮಧ್ಯರಾತ್ರಿ ಚಿರತೆಯೊಂದು ಸಣ್ಣ ಕರುವನ್ನು ಎಳೆದೊಯ್ದು ಮನೆಯ ಸಮೀಪದ ಗದ್ದೆಯಲ್ಲಿ ಅರ್ಧಂಬರ್ಧ ತಿಂದು ಹಾಕಿ ಬಿಟ್ಟು ಹೋದ ಆತಂಕರಾರಿ ಘಟನೆ ಘಟಿಸಿದೆ. ಆಸ್ಟಿನ್ ಸಿಕ್ವೇರಾರವರು ಹೈನುಗಾರರಾಗಿದ್ದು, ಅವರ ಹಟ್ಟಿಯಲ್ಲಿ 11ಕ್ಕೂ ಹೆಚ್ಚು ದನಗಳಿವೆ. […]







