• Home  
  • ಮೂರು ನರ ಬಲಿಗಳ ನಂತರ ಕಡೆಗೂ ಉರಿದ ರಾಷ್ಟ್ರೀಯ ಹೆದ್ದಾರಿ 66 ಉಚ್ಚಿಲದ ದಾರಿ ದೀಪ (The beacon of light on National Highway 66, which finally burned down after three deaths)
- PROBLEMS

ಮೂರು ನರ ಬಲಿಗಳ ನಂತರ ಕಡೆಗೂ ಉರಿದ ರಾಷ್ಟ್ರೀಯ ಹೆದ್ದಾರಿ 66 ಉಚ್ಚಿಲದ ದಾರಿ ದೀಪ (The beacon of light on National Highway 66, which finally burned down after three deaths)

Share: ಮೂರು ನರ ಬಲಿಗಳ ನಂತರ ಕಡೆಗೂ ಉರಿದ ರಾಷ್ಟ್ರೀಯ ಹೆದ್ದಾರಿ 66 ಉಚ್ಚಿಲದ ದಾರಿ ದೀಪ. (Uchila) ಉಚ್ಚಿಲ ; ರಾಷ್ಟ್ರೀಯ ಹೆದ್ದಾರಿ 66 ರ ಹೆದ್ದಾರಿಯಲ್ಲಿ ಇರುವ ದಾರಿ ದೀಪವು ಸಾರ್ವಜನಿಕರ ಪೊಲೀಸರ ಮತ್ತು ಪತ್ರಕರ್ತರ ಒತ್ತಡಕ್ಕೆ ಮಣಿದು ಮೂರು ನರಬಲಿಗಳ ನಂತರ ಕಡೆಗೂ ಬುಧವಾರ ಸಂಜೆ ಉರಿಯಲು ಪ್ರಾರಂಭಿಸಿದೆ.  ಉಚ್ಚಿಲ ಹೆದ್ದಾರಿಯಲ್ಲಿ ನಿರಂತರ ಅಪಘಾತಗಳು ಸಂಭವಿಸಿ, ಅಪಘಾತ ವಲಯವಾಗಿ ಮಾರ್ಪಟ್ಟಿದೆ.  ಒಂದು ತಿಂಗಳೊಳಗೆ ಮೂರು ಹಿರಿ ಜೀವಗಳು ಬಲಿ ತೆತ್ತಿದ್ದು, ಹತ್ತು ಹಲವು […]

ಮೂರು ನರ ಬಲಿಗಳ ನಂತರ ಕಡೆಗೂ ಉರಿದ ರಾಷ್ಟ್ರೀಯ ಹೆದ್ದಾರಿ 66 ಉಚ್ಚಿಲದ ದಾರಿ ದೀಪ.

(Uchila) ಉಚ್ಚಿಲ ; ರಾಷ್ಟ್ರೀಯ ಹೆದ್ದಾರಿ 66 ರ ಹೆದ್ದಾರಿಯಲ್ಲಿ ಇರುವ ದಾರಿ ದೀಪವು ಸಾರ್ವಜನಿಕರ ಪೊಲೀಸರ ಮತ್ತು ಪತ್ರಕರ್ತರ ಒತ್ತಡಕ್ಕೆ ಮಣಿದು ಮೂರು ನರಬಲಿಗಳ ನಂತರ ಕಡೆಗೂ ಬುಧವಾರ ಸಂಜೆ ಉರಿಯಲು ಪ್ರಾರಂಭಿಸಿದೆ.

 ಉಚ್ಚಿಲ ಹೆದ್ದಾರಿಯಲ್ಲಿ ನಿರಂತರ ಅಪಘಾತಗಳು ಸಂಭವಿಸಿ, ಅಪಘಾತ ವಲಯವಾಗಿ ಮಾರ್ಪಟ್ಟಿದೆ.

 ಒಂದು ತಿಂಗಳೊಳಗೆ ಮೂರು ಹಿರಿ ಜೀವಗಳು ಬಲಿ ತೆತ್ತಿದ್ದು, ಹತ್ತು ಹಲವು ಜನರು  ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 ಹೆಜಮಾಡಿ ಕೆಆರ್ ಟೋಲ್  ಪ್ಲಾಜಾ ಅಧಿಕಾರಿ ತಿಮ್ಮಯ್ಯ ನವರೊಂದಿಗೆ ಉಚ್ಚಿಲದ ವಿದ್ಯುತ್ ದೀಪದ ಬಗ್ಗೆ “ಈ ಮೀಡಿಯಾ ಕನ್ನಡ” ನಿರಂತರ ಸಂಪರ್ಕದಿಂದಿದ್ದು, ಒಂದು ವಾರದೊಳಗೆ ದೀಪ ಉರಿಯುವ ಬಗ್ಗೆ ಖಾತರಿ ಪಡಿಸಿದ್ದರು. ತಿಮ್ಮಯ್ಯನವರು ತಮ್ಮ ಮಾತನ್ನು ಉಳಿಸಿಕೊಂಡಿದ್ದು, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಎದುರಿನಿಂದ ಉಚ್ಚಿಲ ತರಕಾರಿ ಮಾರುಕಟ್ಟೆಯವರೆಗಿನ ದೀಪ ಸಂಜೆಯಿಂದ ಬುಧವಾರ ಉರಿಯಲು ಪ್ರಾರಂಭಿಸಿದೆ.

ಈ ದೀಪ ಎಷ್ಟು ದಿನ ಉರಿಯಬಹುದು ಎಂದು ಕಾದು ನೋಡಬೇಕಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.