ರಾಷ್ಟ್ರದ ರಕ್ಷಣೆಗೆ ಸೌಹಾರ್ದತೆ ಅನಿವಾರ್ಯ : ತೋಡಾರ್ ಉಸ್ತಾದ್ ಉಸ್ಮಾನ್ ಫೈಝಿ (Amity is indispensable for the defense of the nation : Todar Ustad Usman Faizi)
ರಾಷ್ಟ್ರದ ರಕ್ಷಣೆಗೆ ಸೌಹಾರ್ದತೆ ಅನಿವಾರ್ಯ : ತೋಡಾರ್ ಉಸ್ತಾದ್ ಉಸ್ಮಾನ್ ಫೈಝಿ
ಎರ್ಮಾಳಿನಲ್ಲಿ ಸಮಸ್ತ ಕೇಂದ್ರೀಯ ಸುನ್ನಿ ವಿಧ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ, ಮಾನವ ಸರಪಳಿ
(Yermal) ಎರ್ಮಾಳು: ರಾಷ್ಟ್ರದ ರಕ್ಷಣೆಗೆ ಇಂದು ಮತೀಯ ಸೌಹಾರ್ಧತೆ ತೀರಾ ಅನಿವಾರ್ಯವಾಗಿದೆ ಎಂದು ಸಮಸ್ತ ಕೇಂದ್ರ ಮುಶಾವರ ಸದಸ್ಯರೂ, ಮೂಲ್ಕಿ ಕೇಂದ್ರ ಜುಮಾ ಮಸೀದಿಯ ಮುದರ್ರಿಸರಾದ ತೋಡಾರ್ ಉಸ್ತಾದ್ ಉಸ್ಮಾನ್ ಫೈಝಿ ಹೇಳಿದ್ದಾರೆ.
ಅವರು ಗಣರಾಜ್ಯೋತ್ಸವದ ಅಂಗವಾಗಿ ಸಮಸ್ತ ಕೇಂದ್ರೀಯ ಸುನ್ನಿ ವಿಧ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ , ಎರ್ಮಾಳಿನಲ್ಲಿ ನಡೆದ ಮಾನವ ಸರಪಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಾನವರು ಕೇವಲ ಮನುಷ್ಯರ ಮೇಲೆ ಕರುಣೆ ತೋರುವುದಲ್ಲ, ಬದಲಾಗಿ ಸಕಲ ಜೀವರಾಶಿಗಳ ಮೇಲೆ ಕರುಣೆ ತೋರಬೇಕು. ಇದು ಇಸ್ಲಾಮ್ ಧರ್ಮದ ಸಿದ್ಧಾಂತವಾಗಿದೆ ಎಂದ ಅವರು, ಇದರ ಕಾರಣವಾಗಿಯೇ ದೇಶದ ಗಣಾಜ್ಯೋತ್ಸವದ ದಿನದಂದು ಸರ್ವ ಜನಾಂಗದ ಜನರನ್ನು ಸೇರಿಸಿ ಮಾನವ ಸರಪಳಿ ರಚಿಸಿ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಮಾಡಲಾಗುತ್ತದೆ ಎಂದು ಹೇಳಿದರು.
ಸ್ವಾಗತ ಸಮಿತಿಯ ಅಧ್ಯಕ್ಷ ಜನಾಬ್ ಸುಲೈಮಾನ್ ಸುರಭಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ದಿಕ್ಸೂಚಿ ಭಾಷಣ ಮಾಡಿದ ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಎಂ ಪಿ ಮೊಯ್ದಿನಬ್ಬರವರು ರಾಷ್ಟ್ರದ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಇಂದಿನ ಅವಶ್ಯಕತೆಯವಾಗಿದೆ ಎಂದರು.
ಫಾ. ಜೊಸ್ವಿ ಫೆರ್ನಾಂಡೀಸ್, ಶೇಖರ್ ಹೆಜಮಾಡಿ ಆಶಯ ಬಾಷಣ ಮಾಡಿದರು.
ಜನಾಬ್ ಅಬ್ದುಲ್ ರಹಿಮಾನ್, ಮೌಲಾನಾ ಅಬ್ದುಲ್ ಯಮಾನಿ ಫಲಿಮಾರ್, ಎಂ. ಪಿ.ಶೇಖಬ್ಬ, ಮಹಮ್ಮದ್ ಶರೀಫ್, ಅಬ್ದುಲ್ ರಹಿಮಾನ್ ಕಣ್ಣಂಗಾರ್, ಅಬ್ದುಲ್ ರಹಿಮಾನ್ ಎರ್ಮಾಳ್, ಮಹಮ್ಮದ್ ಫಾರೂಕ್ ಹನೀಫಿ ನಿಟ್ಟೆ, ನಿಝಾರ್ ಪೈಝಿ, ಇಬ್ರಾಹಿಂ ಫಾಳಿಲಿ, ದಾದಾಪೀರ್, ಇರ್ಶಾದ್ ಕೆರೆಕಾಡ್, ಅಬೂಬಕ್ಕರ್ ಸಿದ್ದೀಕ್ ಪೈಝಿ, ಮೊಯ್ದಿನ್ ಇಸ್ಮಾಯಿಲ್, ಇರ್ಫಾನ್ ಪೈಝಿ ರೆಂಜಾಳ, ಮಹಮ್ಮದ್ ಇಮ್ರಾನ್, ಬಶೀರ್ ಯೂಸುಫ್, ನೌಫಲ್ ದಾರಿಮಿ ಮೊದಲಾದವರು ಉಪಸ್ಥಿತರಿದ್ದರು.
ಖ್ಯಾತ ವಾಗ್ಮಿ ಮೌಲಾನಾ ಅಬೂಬಕ್ಕರ್ ರಿಯಾಝ್ ರಹ್ಮಾನಿ ಬೋಳಿಯಾರ್ ಮುಖ್ಯ ಪ್ರಭಾಷಣ ಗೈದರು.
ಶರೀಫ್ ಪೈಝಿ ಚಾರ್ಮಾಡಿ ಪ್ರತಿಜ್ಞಾ ವಿಧಿ ಬೋಧಿಸಿದರು. ಎರ್ಮಾಳ್ ಮಸೀದಿ ಧರ್ಮಗುರುಗಳಾದ ಮಹಮ್ಮದ್ ಶಬೀರ್ ಫೆೃಝಿು ದುವಾ ನೇರವೇರಿಸಿದರು. ಮೊಯ್ದಿನ್ ರೆಂಜಾಳ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ಹಾಶೀರ್ ಫೈಝಿ ವಂದನಾರ್ಪಣೆ ಗೆೃದರು.