• Home  
  • ಕಾಪು : ತೋಡು ಕುಸಿತದಿಂದಾಗಿ ಕೃಷಿ ಗದ್ದೆಗೆ ಹಾನಿ  ಕೃಷಿಕರ ಆಕ್ರೋಶ(Kaup: Culvert collapse damages agricultural fields, angers farmers)
- Mansoon - PROBLEMS

ಕಾಪು : ತೋಡು ಕುಸಿತದಿಂದಾಗಿ ಕೃಷಿ ಗದ್ದೆಗೆ ಹಾನಿ  ಕೃಷಿಕರ ಆಕ್ರೋಶ(Kaup: Culvert collapse damages agricultural fields, angers farmers)

Share: ಕಾಪು : ತೋಡು ಕುಸಿತದಿಂದಾಗಿ ಕೃಷಿ ಗದ್ದೆಗೆ ಹಾನಿ  ಕೃಷಿಕರ ಆಕ್ರೋಶ (Kaup) ಕಾಪು : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾಪು ಬೀಚ್ ರಸ್ತೆಯ ಲಕ್ಷ್ಮೀ ನಗರ ಲೇಔಟ್ ಬಳಿಯಲ್ಲಿ ಮಳೆ ನೀರು ಹರಿಯುವ ತೋಡು ಕುಸಿತಕ್ಕೊಳಗಾಗಿ ಎರಡು ಕೃಷಿ ಗದ್ದೆಗಳು ಸಂಪೂರ್ಣ ಹಾನಿಗೊಳಗಾಗಿದೆ. ರಾಷ್ಟ್ರೀಯ ಹೆದ್ದಾರಿ ೬೬ರ ಕಾಪು ಹೊಸ ಮಾರಿಗುಡಿ ಬಳಿಯಿಂದ ಕಾಪು ಬೀಚ್ ರಸ್ತೆಯ ಚರಂಡಿಯಲ್ಲಿ ಹರಿದು ಬರುವ ಮಳೆ ನೀರು ಹರಿದು ಹೋಗಲು ಅರ್ಧದವರೆಗೆ ಕಾಂಕ್ರೀಟ್ ಸ್ಲಾಬ್‌ನ […]

(Kaup) ಕಾಪು : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾಪು ಬೀಚ್ ರಸ್ತೆಯ ಲಕ್ಷ್ಮೀ ನಗರ ಲೇಔಟ್ ಬಳಿಯಲ್ಲಿ ಮಳೆ ನೀರು ಹರಿಯುವ ತೋಡು ಕುಸಿತಕ್ಕೊಳಗಾಗಿ ಎರಡು ಕೃಷಿ ಗದ್ದೆಗಳು ಸಂಪೂರ್ಣ ಹಾನಿಗೊಳಗಾಗಿದೆ.

ರಾಷ್ಟ್ರೀಯ ಹೆದ್ದಾರಿ ೬೬ರ ಕಾಪು ಹೊಸ ಮಾರಿಗುಡಿ ಬಳಿಯಿಂದ ಕಾಪು ಬೀಚ್ ರಸ್ತೆಯ ಚರಂಡಿಯಲ್ಲಿ ಹರಿದು ಬರುವ ಮಳೆ ನೀರು ಹರಿದು ಹೋಗಲು ಅರ್ಧದವರೆಗೆ ಕಾಂಕ್ರೀಟ್ ಸ್ಲಾಬ್‌ನ ಚರಂಡಿ ನಿರ್ಮಿಸಲಾಗಿದ್ದು, ಅಲ್ಲಿಂದ ಮುಂದೆ ಮಳೆ ನೀರು ಹರಿದು ಹೋಗಲು ಸಮರ್ಪಕ ತೋಡು ಇಲ್ಲದ ಪರಿಣಾಮ ಈ ಘಟನೆ ಸಂಭವಿಸಿದೆ.

  ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತೋಡಿನಲ್ಲಿ ಧಾರಾಕಾರವಾಗಿ ನೀರು ಹರಿದು ಬಂದಿದ್ದು, ತೋಡಿನ ಬಲಭಾಗ ಕುಸಿತಕ್ಕೊಳಗಾಗಿದೆ. ಇದರಿಂದಾಗಿ ಸುಧೀರ್ ಪೂಜಾರಿ ಎಂಬವರ ಭತ್ತದ ಕೃಷಿ ಗದ್ದೆಗೆ ಸಂಪೂರ್ಣ ಮಣ್ಣು ಕುಸಿದಿದ್ದು ಭಾರೀ ಹಾನಿಯುಂಟಾಗಿದೆ.

 ಈ ಭಾಗದಲ್ಲಿ ಕೃಷಿ ಕೆಲಸ ಮಾಡುವವರೇ ಇಲ್ಲ. ನಾವು ಕಷ್ಟಪಟ್ಟು ನಡೆಸಿರುವ ಕೃಷಿಯ ಪರಿಸ್ಥಿತಿ ಹೀಗಾಗಿದೆ. ಪುರಸಭೆ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರೆ ಹೀಗಾಗುತ್ತಿರಲ್ಲಿಲ್ಲ. ಸ್ಥಳೀಯ ಮನೆಯವರು ಮತ್ತು ಲಕ್ಷ್ಮೀ ನಗರದ ನಿವಾಸಿಗಳ ತಿಕ್ಕಾಟವನ್ನು ಸರಿಪಡಿಸುವ ಭರದಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ತೋಡನ್ನು ವಿಸ್ತರಿಸಿರುವುದರಿಂದ ನಮಗೆ ತೊಂದರೆಯುಂಟಾಗಿದೆ. ನಮಗಾಗಿರುವ ನಷ್ಟಕ್ಕೆ ಹೊಣೆಯಾರು ಎಂದು ಕೃಷಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

  ಈಗಾಗಲೇ ಸ್ಥಳಕ್ಕೆ ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲವು ವರ್ಷಗಳ ಈ ಸಮಸ್ಯೆಗೆ ಶಾಶ್ವತ ಮುಕ್ತಿ ಕೊಡುವಂತೆ  ಕೃಷಿಕರು ಆಗ್ರಹಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.